ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಟ್ಟಣದ ಗೆಂಡೆ ಹೊಸಹಳ್ಳಿ ಪಕ್ಷಿಧಾಮ ಬೆಂಕಿಗೆ ನಾಶ

By ಮೈಸೂರು ಪ್ರತಿನಿಧಿ
|
Google Oneindia Kannada News

ಶ್ರೀರಂಗಪಟ್ಟಣ, ಏಪ್ರಿಲ್ 05 : ಕಾಡ್ಗಿಚ್ಚಿಗೆ ತಾಲೂಕಿನ ಗೆಂಡೆ ಹೊಸಹಳ್ಳಿ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿದ್ದ ಪಕ್ಷಿಧಾಮ ಗೆಂಡೆ ಹೊಸಹಳ್ಳಿ ಪಕ್ಷಿಧಾಮ ನಾಶವಾಗಿದೆ. ಇಲ್ಲಿನ ಸುಮಾರು 200 ಎಕರೆಯಷ್ಟು ಅರಣ್ಯ ಪ್ರದೇಶ ಹೊತ್ತಿ ಉರಿದಿದೆ.

ಗೆಂಡೆ ಹೊಸಹಳ್ಳಿ ಗ್ರಾಮಕ್ಕೆ ಸೇರಿದ ಬೋರೆದೇವರು ದೇವಾಲಯದ ಬಳಿ ಇರುವ ಸುಮಾರು 2 ಸಾವಿರ ಎಕರೆಯಷ್ಟು ವಿಶಾಲವಾದ ಅರಣ್ಯದಲ್ಲಿ ಪಕ್ಷಿಗಳು ನೆಲೆ ಕಂಡುಕೊಂಡಿದ್ದು, ರಂಗನತಿಟ್ಟಿನಂತೆ ಹೆಸರುವಾಸಿಯಾಗುತ್ತಿದೆ. ಕಾವೇರಿ ನದಿ ತೀರದ ಬಯಲು ಪ್ರದೇಶವಾಗಿರುವುದರಿಂದ ಪಕ್ಷಿಗಳು ಇಲ್ಲಿ ಆಶ್ರಯ ಕಂಡುಕೊಂಡಿವೆ.

ಇಲ್ಲಿ ವಿವಿಧ ಜಾತಿಯ ಪಕ್ಷಿಗಳು, ನವಿಲು, ಹೆಬ್ಬಾವು, ಕಾಡುಹಂದಿ ಸೇರಿದಂತೆ ಇತರೆ ಸಣ್ಣ ಸಣ್ಣ ಸಾವಿರಾರು ಪ್ರಾಣಿ ಪಕ್ಷಿಗಳು ಆಶ್ರಯ ಪಡೆದಿವೆ. ಆದರೆ, ಕಾಡ್ಗಿಚ್ಚಿನಿಂದಾಗಿ ಹಲವಾರು ಪ್ರಾಣಿ ಪಕ್ಷಿಗಳು ನೆಲೆ ಕಳೆದುಕೊಳ್ಳುವ ಆತಂಕ ಎದುರಿಸುತ್ತಿವೆ. [ಭರಚುಕ್ಕಿ ಅರಣ್ಯದಲ್ಲಿ ಕಾಡ್ಗಿಚ್ಚು, ಕ್ಯಾರೆ ಎನ್ನದ ಸಿಬ್ಬಂದಿ!]

Forest fire destroys bird sanctuary near Srirangapatna

ವನ್ಯ ಜೀವಿ ಸಂರಕ್ಷಣಾ ಪ್ರದೇಶವಾದ ಈ ಸ್ಥಳಕ್ಕೆ ಹೇಗೆ ಬೆಂಕಿ ತಗುಲಿದೆ ಎಂಬುದು ಗೊತ್ತಾಗಿಲ್ಲ. ಕಾಡ್ಗಿಚ್ಚಿನಿಂದ ಬೆಂಕಿ ಹೊತ್ತಿಕೊಂಡಿರಬಹುದೇನೋ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಠಾಣೆ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಅಷ್ಟರಲ್ಲೇ ಸುಮಾರು 200 ಎಕರೆ ಪ್ರದೇಶ ನಾಶವಾಗಿತ್ತು.

ಆದರೆ ಪ್ರಾಣಿ ಪಕ್ಷಿಗಳು ಬೆಂಕಿಗೆ ಹೆದರಿ ಸುರಕ್ಷಿತ ಅರಣ್ಯ ಪ್ರದೇಶಕ್ಕೆ ಪಲಾಯನ ಮಾಡಿವೆ. ಸಣ್ಣಪುಟ್ಟ ಜೀವ ಜಂತುಗಳು ಬೆಂಕಿಗೆ ಆಹುತಿಯಾಗಿವೆ. ಮಳೆಯಿಲ್ಲದೆ ಕುರುಚಲು ಗಿಡಗಳೆಲ್ಲ ಒಣಗಿ ನಿಂತಿದ್ದರಿಂದ ಬೆಂಕಿ ರಭಸದಿಂದ ಹರಡಿ ಭಾರೀ ಅನಾಹುತ ಸಂಭವಿಸಿದೆ. [ಬೆಂ-ಮೈ ಜೋಡಿ ಹಳಿಗೆ ಅಡ್ಡಿಯಾದ ಟಿಪ್ಪು ಮದ್ದಿನ ಮನೆ]

English summary
Forest firest has destroyed almost 200 acres of Gende Hosahalli bird sanctuary near Srirangapatna in Mysuru district. The sanctuary is home for many migratory birds and animals. Reason for forest fire is not known.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X