ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ಫೆ.7-28ರವರೆಗೆ ದಡಾರ-ರುಬೆಲ್ಲಾ ಲಸಿಕೆ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಫೆಬ್ರವರಿ 4: ದೇಶದಲ್ಲಿ 2020ರ ವೇಳೆಗೆ ದಡಾರ, ರುಬೆಲ್ಲಾ ರೋಗಗಳನ್ನು ಸರ್ವನಾಶ ಮಾಡಲು ಸರಕಾರ ಮುಂದಾಗಿದ್ದು ಇದೇ ತಿಂಗಳ 7ರಿಂದ 28ರವರೆಗೆ ದಢಾರ-ರುಬೆಲ್ಲಾ ಲಿಸಿಕಾ ಅಭಿಯಾನವು ಮೈಸೂರಿನಲ್ಲಿಯೂ ಆರಂಭವಾಗಲಿದೆ ಎಂದು ಜಿಲ್ಲಾಧಿಕಾರಿ ಡಿ.ರಂದೀಪ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ.7 ರಂದು ಅಭಿಯಾನಕ್ಕೆ ಚಾಲನೆ ಸಿಗಲಿದ್ದು, 9ತಿಂಗಳ ವಯಸ್ಸಿನಿಂದ 15ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಒಂದು ದಡಾರ ಮತ್ತು ರುಬೆಲ್ಲಾ ಲಸಿಕೆ ನೀಡಲಾಗುತ್ತದೆ ಅಭಿಯಾನದ ಮೊದಲ ವಾರದಲ್ಲಿ ಎಲ್ಲಾ ಶಾಲೆಗಳಲ್ಲಿ, ನಂತರದ ಎರಡು ವಾರಗಳಲ್ಲಿ ಎಲ್ಲಾ ಆರೋಗ್ಯ ಸಂಸ್ಥೆಗಳು, ಅಂಗನವಾಡಿ ಕೇಂದ್ರಗಳು, ಹಾಗೂ ಇನ್ನಿತರ ಪ್ರದೇಶಗಳಲ್ಲಿ ಲಸಿಕಾ ಕೇಂದ್ರಗಳನ್ನು ಪ್ರಾರಂಭಿಸಲಾಗುತ್ತದೆ ಎಂದರು.[ಫೆ. 7 ರಿಂದ ರಾಜ್ಯದ ಮಕ್ಕಳಿಗೆ ದಡಾರ, ರುಬೆಲ್ಲಾ ಲಸಿಕೆ]

Feb 7 to 28, the hole sate measles and Rubella vaccine in mysuru

ಮೈಸೂರು ಗ್ರಾಮಾಂತರ, ಮೈಸೂರು ನಗರ, ಟಿ.ನರಸೀಪುರ, ನಂಜನಗೂಡು, ಹುಣಸೂರು, ಎಚ್.ಡಿ.ಕೋಟೆ, ಪಿರಿಯಾಪಟ್ಟಣ, ಕೆ.ಆರ್.ನಗರ ತಾಲ್ಲೂಕುಗಳಲ್ಲಿ ಒಟ್ಟು 9 ತಿಂಗಳಿಂದ 15ವರ್ಷದೊಳಗಿನ ಮಕ್ಕಳ ಸಂಖ್ಯೆ 7,95,787 ಇದ್ದು, 3,078 ಶಾಲೆಗಳಿವೆ. ಲಸಿಕೆ ಹಾಕಲು 722 ಕಾರ್ಯಕರ್ತೆಯರಿದ್ದು, 236 ಮಂದಿ ಮೇಲ್ವಿಚಾರಕರು ಇರುತ್ತಾರೆ ಎಂದು ತಿಳಿಸಿದರು.

ಸರಕಾರಿ ಶಾಲೆಗಳಲ್ಲಿ ಗೀತ ಗಾಯನ ಯೋಜನೆ
ಇನ್ನು ಇದೇ ವೇಳೆ ಮೈಸೂರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅರ್ಪಿಸಿರುವ ಶಾಲೆಗಳಲ್ಲಿ ಸಂಗೀತ ಪಠ್ಯಕೃತಿಗಳ ಗೀತ ಗಾನಯಾನ ಕಾರ್ಯಕ್ರಮವನ್ನು ಫೆ. 6 ರಿಂದ 14ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಚೆನ್ನಪ್ಪ ತಿಳಿಸಿದರು.

ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ನಾಡಿನ ವಿವಿಧ ಕಲಾ ಪ್ರಕಾರಗಳಾದ ಶಾಸ್ತ್ರೀಯ ಸಂಗೀತ, ವಚನ ವೈಭವ, ದಾಸ ಸಾಹಿತ್ಯದ ಹಿರಿಮೆ, ಗಮಕ ಪರಿಚಯ, ನಾಡಗೀತೆಯನ್ನು ಕಲಿಸಲಾಗುತ್ತದೆ. 60 ನಿಮಿಷಗಳ ಗೀತ ಗಾಯನವು ಪ್ರತಿ ತಾಲ್ಲೂಕಿನಲ್ಲಿ ಎರಡು ದಿನದಲ್ಲಿ 6 ರಂತೆ 8 ತಾಲ್ಲೂಕುಗಳಲ್ಲಿ 48 ಕಾರ್ಯಕ್ರಮ ನಡೆಸಲಾಗುತ್ತದೆ. 50 ಸಾವಿರ ವಿದ್ಯಾರ್ಥಿಗಳಿಗೆ ಇದರ ಪ್ರಯೋಜನ ತಲುಪಿಸುವ ಉದ್ದೇಶವನ್ನು ಹೊಂದಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮವನ್ನು ಫೆ.6 ರ ಬೆಳಿಗ್ಗೆ 10 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹಾಗೂ ಅಲ್ಪಸಂಖ್ಯಾತ ಮತ್ತು ವಕ್ಫ್ ಸಚಿವ ತನ್ವೀರ್ ಸೇಠ್ ವಹಿಸಲಿದ್ದಾರೆ ಎಂದರು.

English summary
The District Health and Family Welfare Society, Mysuru, along with the National Health Mission is all set to kick off first-of-its-kind measles-rubella vaccine campaign from February 7. As many as 7,95,787 children in Mysuru district, between the age of nine months and 15 years, will be vaccinated during the campaign which would go on till February 28.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X