ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ನವೋದಯ ವಿದ್ಯಾಲಯ ಪ್ರವೇಶಕ್ಕೆ ಅರ್ಜಿ ಆಹ್ವಾನ

9ನೇ ತರಗತಿ ಪ್ರವೇಶಕ್ಕಾಗಿ ಡಿ.ಎಂ.ಜಿ. ಹಳ್ಳಿಯಲ್ಲಿರುವ ಜವಾಹರ ನವೋದಯ ವಿದ್ಯಾಲಯ ಅರ್ಜಿ ಆಹ್ವಾನಿಸಿದೆ. 2016-17ನೇ ಸಾಲಿನ 8ನೇ ತರಗತಿಯಲ್ಲಿ ಉತ್ತೀರ್ಣವಾಗಿರುವ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಮೇ 29 ರೊಳಗೆ ಅರ್ಜಿ ಸಲ್ಲಿಸಬಹುದು.

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ಮೈಸೂರು, ಮೇ 16: ನೀವು ಎಂಟನೇ ತರಗತಿ ಪಾಸಾಗಿ, ಒಂಬತ್ತನೇ ತರಗತಿಗೆ ಮೈಸೂರು ಜಿಲ್ಲೆಯ ಡಿ.ಎಂ.ಜಿ. ಹಳ್ಳಿಯಲ್ಲಿರುವ ಜವಾಹರ ನವೋದಯ ವಿದ್ಯಾಲಯಕ್ಕೆ ಪ್ರವೇಶ ಪಡೆಯಲು ಇಚ್ಛಿಸುತ್ತಿದ್ದರೆ ಇಂದೇ ಅರ್ಜಿ ಗುಜರಾಯಿಸಿ!

ಹೌದು, 9ನೇ ತರಗತಿ ಪ್ರವೇಶಕ್ಕಾಗಿ ಡಿ.ಎಂ.ಜಿ. ಹಳ್ಳಿಯಲ್ಲಿರುವ ಜವಾಹರ ನವೋದಯ ವಿದ್ಯಾಲಯ ಅರ್ಜಿ ಆಹ್ವಾನಿಸಿದೆ. 2016-17ನೇ ಸಾಲಿನ 8ನೇ ತರಗತಿಯಲ್ಲಿ ಉತ್ತೀರ್ಣವಾಗಿರುವ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಮೇ 29 ರೊಳಗೆ ಅರ್ಜಿ ಸಲ್ಲಿಸಬಹುದು.[ಮೈಸೂರು ವಿವಿ ಗಡಿಯಾರದ ಟಿಕ್ ಟಿಕ್ ಶಬ್ದವೀಗ ಸ್ತಬ್ಧ!]

ಪ್ರವೇಶ ಪರೀಕ್ಷೆ ಜೂನ್ 24 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಮೈಸೂರಿನ ಡಿ.ಎಂ.ಜಿ. ಹಳ್ಳಿಯ ಜವಾಹರ್ ನವೋದಯ ವಿದ್ಯಾಲಯದಲ್ಲಿ ನಡೆಯಲಿದೆ.

Entrance exam for 9th standerd in DMG Halli Jawahar Navoday will be on June 24th.

ಜವಾಹರ್ ನವೋದಯ ವಿದ್ಯಾಲಯದಲ್ಲಿ ಉಚಿತವಾಗಿ ಅಥವಾ ವೆಬ್‍ಸೈಟ್ www.inmysore.edu.in

www.navodayahyd.gov.in ನಲ್ಲಿ ಅರ್ಜಿಯನ್ನು ಡೌನ್‍ಲೋಡ್ ಮಾಡಿಕೊಂಡು ಭರ್ತಿ ಮಾಡಿ ಮೇ 29 ರೊಳಗೆ ಸಲ್ಲಿಸುವುದು.[ಮೈಸೂರಿನಲ್ಲಿ ಸಂಚಾರಿ ವಿಜ್ಞಾನ ಪ್ರಯೋಗಾಲಯಕ್ಕೆ ಚಾಲನೆ]

ಸರ್ಕಾರಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡಿ
ಇಂದು ಸರ್ಕಾರಿ ಕಾಲೇಜುಗಳಲ್ಲಿ ಓದುವವರ ಸಂಖ್ಯೆ ಕಡಿಮೆಯಾಗಿದೆ. ಕಾಲೇಜು ಶಿಕ್ಷಣ ಇಲಾಖೆ ವತಿಯಿಂದ ಸರ್ಕಾರಿ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ನಡೆಸುವ ವಿದ್ಯಾರ್ಥಿಗಳಿಗೆ ಹಲವಾರು ಸೌಲಭ್ಯಗಳನ್ನು ಒದಗಿಸಲಾಗಿದ್ದು, ಈ ಬಗ್ಗೆ ಹಲವರಿಗೆ ಮಾಹಿತಿಯಿಲ್ಲ.

ಕಾಲೇಜು ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿ ಮೈಸೂರು ಜಿಲ್ಲೆ-23, ಹಾಸನ-28, ಮಂಡ್ಯ-15 ಮತ್ತು ಚಾಮರಾಜನಗರ-9 ಒಟ್ಟು 75 ಸರ್ಕಾರಿ ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ ಎಂದು ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.[ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಯೋಗ ಶಿಕ್ಷಣ ಆರಂಭ]

ಶೈಕ್ಷಣಿಕ ಗುಣಮಟ್ಟ ಮೌಲ್ಯಮಾಪನ ಮಾಡುವ ಯುಜಿಸಿ ಸ್ವಾಯತ್ತ ಸಂಸ್ಥೆಯಾದ ನ್ಯಾಕ್ ನಿಂದ 3 ಕಾಲೇಜುಗಳು 'ಎ' ಶ್ರೇಣಿ, 30 ಕಾಲೆಜುಗಳು 'ಬಿ' ಶ್ರೇಣಿಯನ್ನು ಪಡೆದಿದ್ದು ಕಾಲೇಜುಗಳು ಉತ್ತಮವಾದ ಶೈಕ್ಷಣಿಕ ವಾತಾವರಣ ಹೊಂದಿವೆ. ಆದ್ದರಿಂದ ಸರ್ಕಾರಿ ಕಾಲೇಜುಗಳಲ್ಲಿ ಓದಿ ಎಂದು ಅವರು ಹೇಳಿದರು.

English summary
Entrance exam for 9th standerd in DMG Halli Jawahar Navoday will be on June 24th. Interested can apply before 29th of May.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X