ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ಮೃಗಾಲಯಕ್ಕೆ ಬಂತು ಎಲೆಕ್ಟ್ರಾನಿಕ್ ಗೇಟ್

|
Google Oneindia Kannada News

ಮೈಸೂರು, ಏ. 30 : ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ಎಲೆಕ್ಟ್ರಾನಿಕ್ ಗೇಟ್ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಮೃಗಾಲಯಕ್ಕೆ ಬರುವವರು ಟಿಕೆಟ್ ಪಡೆಯಲು ತಾಸು ಗಟ್ಟಲೇ ಸರದಿಯಲ್ಲಿ ಕಾಯುವ ಸಮಸ್ಯೆಗೆ ಪರಿಹಾರ ಸಿಕ್ಕಿದೆ.

ಪ್ರಾಯೋಗಿಕವಾಗಿ 10 ಎಲೆಕ್ಟ್ರಾನಿಕ್ ಗೇಟ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ಮೃಗಾಲಯದ ನಿರ್ದೇಶಕ ಬಿ.ಪಿ.ರವಿ ಅವರು ಮಾಹಿತಿ ನೀಡಿದ್ದಾರೆ. ಓರಿಸ್ಸಾ ಮತ್ತು ಹೈದರಾಬಾದ್ ನಂತರ ಇಂತಹ ವ್ಯವಸ್ಥೆಯನ್ನು ಮೈಸೂರಿನಲ್ಲಿ ಜಾರಿಗೊಳಿಸಲಾಗಿದೆ. [ಮೃಗಾಲಯದ ವೆಬ್ ಸೈಟ್]

Mysuru zoo

ಪ್ರವಾಸಿಗರು ಮೃಗಾಲಯದ ಪ್ರವೇಶ ಟಿಕೆಟ್ ಪಡೆಯಲು ತಾಸು ಗಟ್ಟಲೇ ಕಾಯುವುದು. ನಂತರ ಭದ್ರತಾ ತಸಾಸಣೆ ಮುಂತಾದವುಗಳ ಸಮಯ ಉಳಿತಾಯವಾಗಲಿದೆ. ಬಾರ್ ಕೋಡ್ ಹೊಂದಿರುವ ಟಿಕೆಟ್‌ಅನ್ನು ಪ್ರವಾಸಿಗರು ಬಳಸಿ ಮೃಗಾಲಯ ಪ್ರವೇಶಿಸಬಹುದಾಗಿದೆ. [ಮೈಸೂರು ಮೃಗಾಲಯದ ಟಿಕೆಟ್ ದರ ಹೆಚ್ಚಳ]

ಸುಮಾರು 25 ಲಕ್ಷ ರೂ. ವೆಚ್ಚದಲ್ಲಿ ಮೃಗಾಲಯ ಅಭಿವೃದ್ಧಿ ಪ್ರಾಧಿಕಾರ ಈ ಗೇಟ್‌ಗಳ ವ್ಯವಸ್ಥೆಯನ್ನು ಮಾಡಿದೆ. ಇದಕ್ಕಾಗಿಯೇ ಪ್ರತ್ಯೇಕ ಕಂಟ್ರೋಲ್ ರೂಂ ಸ್ಥಾಪನೆ ಮಾಡಲಾಗಿದೆ. ಪ್ರವಾಸಿಗರು ತೆಗೆದುಕೊಂಡು ಹೋಗುವ ಕ್ಯಾಮರಾ ಬಗ್ಗೆಯೂ ಈ ಗೇಟ್‌ ಮೂಲಕ ಮಾಹಿತಿ ಸಂಗ್ರಹಣೆ ಮಾಡಲಾಗುತ್ತದೆ. [ಮೃಗಾಲಯಕ್ಕೆ ನಾಲ್ಕು ಹೊಸ ಅತಿಥಿಗಳು]

ಎಲೆಕ್ಟ್ರಾನಿಕ್ ಗೇಟ್ ವ್ಯವಸ್ಥೆಯಿಂದ ಅಕ್ರಮವಾಗಿ ಮೃಗಾಲಯ ಪ್ರವೇಶಿಸುವುದನ್ನು ತಡೆಯಬಹುದಾಗಿದೆ ಮತ್ತು ಸಂಗ್ರಹವಾಗುವ ಆದಾಯದ ಬಗ್ಗೆ ನಿಖರ ಮಾಹಿತಿ ಪಡೆಯಲು ಸಹಾಯಕವಾಗುತ್ತದೆ ಎಂದು ನಿರ್ದೇಶಕರು ವಿವರಣೆ ನೀಡಿದ್ದಾರೆ.

English summary
Visitors to the Mysuru zoo will no longer have to stand in queues to enter. 10 electronic gates installed at the entrance of the zoo said B.P.Ravi director of the Mysuru zoo.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X