ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲೂ ಆರಂಭವಾಗಲಿದೆ ಇ- ರಿಕ್ಷಾ ಹವಾ!

By Yashaswini
|
Google Oneindia Kannada News

ಮೈಸೂರು, ಜೂನ್ 23 : ಪರಿಸರ ಸ್ನೇಹಿ ಎಂದೇ ಹೆಸರುವಾಸಿಯಾಗಿರುವ ಬ್ಯಾಟರಿ ಚಾಲಿತ 'ಇ-ರಿಕ್ಷಾ' ಆದಷ್ಟು ಶೀಘ್ರವಾಗಿ ಮೈಸೂರು ನಗರದಲ್ಲಿ ಕೂಡ ರಸ್ತೆಗಿಳಿಯಲಿವೆ. ಈ ಸಂಬಂಧ ಈಗಾಗಲೇ ಇ- ರಿಕ್ಷಾ ಪ್ರಚಾರ ವಾಹನ ನಗರದಾದ್ಯಂತ ಸಂಚರಿಸುತ್ತಿದ್ದು, ರಿಕ್ಷಾ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಸಾರ್ವಜನಿಕರಿಗೆ ಒದಗಿಸುತ್ತಿದೆ.

ಹೊಗೆಯ ಕಾಟವಿಲ್ಲದೆ ರಸ್ತೆಯಲ್ಲಿ ಸಂಚರಿಸುವ ಇ-ರಿಕ್ಷಾ ಇದೀಗ ದೇಶದ ಹಲವು ರಾಜ್ಯಗಳಲ್ಲಿ ಜನಪ್ರಿಯತೆ ಪಡೆದುಕೊಂಡಿವೆ. ಹೊಸದಿಲ್ಲಿ, ಕೊಲ್ಕತ್ತಾ, ಗುಜರಾತ್, ಉತ್ತರ ಪದೇಶ ಸೇರಿದಂತೆ ಇನ್ನಿತರ ರಾಜ್ಯಗಳಲ್ಲಿ ಈಗಾಗಲೇ ಈ ವಾಹನ ಬಳಕೆಯಲ್ಲಿದೆ.

ಮಂಗಳೂರು: ಸ್ವಯಂಚಾಲಿತವಾಗಿ ತೂಗಿಕೊಳ್ಳುವ ತೊಟ್ಟಿಲು ತಯಾರು!ಮಂಗಳೂರು: ಸ್ವಯಂಚಾಲಿತವಾಗಿ ತೂಗಿಕೊಳ್ಳುವ ತೊಟ್ಟಿಲು ತಯಾರು!

ಕೆಲ ಖಾಸಗಿ ಸಂಸ್ಥೆಗಳು ಕೂಡ ತಮ್ಮ ಸ್ವಂತ ಕೆಲಸಗಳಿಗೆ ಇ-ರಿಕ್ಷಾಗಳನ್ನು ಬಳಸುತ್ತಿವೆ. ನಗರದ ಮೃಗಾಲಯ, ಇನ್ಫೋಸಿಸ್, ಜೆಎಸ್ ಎಸ್ ಆಸ್ಪತ್ರೆ, ರೈಲ್ವೆ ನಿಲ್ದಾಣ, ಅರಮನೆ, ವಸ್ತುಪ್ರದರ್ಶನ ಆವರಣ ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿ ಸಾರ್ವಜನಿಕರ ಸಂಚಾರಕ್ಕೆ ಈಗಾಗಲೇ ಬ್ಯಾಟರಿ ಚಾಲಿತ ವಾಹನವನ್ನು ಬಳಸಲಾಗುತ್ತಿದೆ.

ಆದರೆ, ಇದೇ ಮೊದಲ ಬಾರಿಗೆ ಮೈಸೂರು ನಗರದಲ್ಲಿ ಸಾರ್ವಜನಿಕ ಸೇವೆಗೆ ಇ-ರಿಕ್ಷಾ ಬಳಕೆಯಾಗಲು ಅಣಿಯಾಗುತ್ತಿದೆ. ಹರ್ಯಾಣ ಮೂಲದ ಖಾಸಗಿ ಸಂಸ್ಥೆಯೊಂದು ರಾಜ್ಯದಲ್ಲಿ ಇ-ರಿಕ್ಷಾ ಮಾರಾಟಕ್ಕೆ ಮುಂದಾಗಿದೆ. ಅದರಂತೆ ಮೈಸೂರು ನಗರದಲ್ಲಿ ಕೂಡ ಪ್ರಚಾರದ ವಾಹನ ಒಂದು ವಾರದಿಂದ ರಿಕ್ಷಾ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುತ್ತಿರುವುದರ ಜೊತೆಗೆ ಆಸಕ್ತರಿಗೆ ಟೆಸ್ಟ್ ರೈಡ್ ಕೂಡ ಮಾಡಿಸುತ್ತಿದೆ. ರಿಕ್ಷಾ ಖರೀದಿಯಲ್ಲಿ ಆಸಕ್ತಿ ತೋರುವವರಿಗೆ ಸಂಸ್ಥೆಯ ಅಶೋಕ್ ಕುಮಾರ್ ಎಂಬವರು ಟೆಸ್ಟ್ ಡ್ರೈವ್ ಮಾಡಲು ಅವಕಾಶ ಮಾಡಿಕೊಡುತ್ತಿದ್ದಾರೆ.

400 ಕೆ.ಜಿ ಹೊತ್ತೊಯ್ಯಬಲ್ಲ ರಿಕ್ಷಾ!

400 ಕೆ.ಜಿ ಹೊತ್ತೊಯ್ಯಬಲ್ಲ ರಿಕ್ಷಾ!

400 ಕೆಜಿ ಹೊತ್ತೊಯ್ಯುವ ಸಾಮರ್ಥ್ಯವಿರುವ ಇ-ರಿಕ್ಷಾ ಸಂಪೂರ್ಣ ಬ್ಯಾಟರಿ ಚಾಲಿತ ವಾಹನ. ಇದರಲ್ಲಿ ಚಾಲಕ ಸೇರಿ ಐದು ಮಂದಿ ಕೂರಲು ಅವಕಾಶವಿದೆ. ಪ್ರತಿ ಗಂಟೆಗೆ 25 ಕಿಮೀ ವೇಗದಲ್ಲಿ ರಿಕ್ಷಾ ಸಂಚರಿಸುತ್ತದೆ. ಬ್ಯಾಟರಿಯನ್ನು 10 ರಿಂದ 12 ಗಂಟೆಗಳ ಕಾಲ ಚಾರ್ಜ್ ಮಾಡಿದಲ್ಲಿ 80 ಕಿಮೀವರೆಗೂ ಯಾವುದೇ ಅಡೆತಡೆ ಇಲ್ಲದೆ ಪ್ರಯಾಣಿಸಬಹುದು ಎನ್ನುತ್ತಾರೆ ಅಶೋಕ್ ಕುಮಾರ್.

ಚಾರ್ಜ್ ವೆಚ್ಚ 30 ರೂ.!

ಚಾರ್ಜ್ ವೆಚ್ಚ 30 ರೂ.!

12 ಗಂಟೆ ವಿದ್ಯುತ್ ಚಾರ್ಜ್ ಮಾಡಲು ತಗಲುವ ವೆಚ್ಚ ಕೇವಲ 30 ರೂ. ಮಾತ್ರ ಆಟೋದಲ್ಲಿ ಸುಗಮ ಸಂಚಾರಕ್ಕಾಗಿ ನಾಲ್ಕು ಬ್ಯಾಟರಿಗಳನ್ನು ಅಳವಡಿಸಲಾಗಿದೆ. ರಿಕ್ಷಾವನ್ನು ಸ್ವಂತಕ್ಕೆ ಬಳಸುವವರಿಗೆ ದ್ವಿಚಕ್ರ ವಾಹನ ಚಾಲನಾ ಪರವಾನಗಿ ಇದ್ದರೆ ಸಾಕು, ಆದರೆ ಸಾರ್ವಜನಿಕ ಸೇವೆಗೆ ರಿಕ್ಷಾವನ್ನು ಬಳಸಿಕೊಳ್ಳುವವರಿಗೆ ಸಾರಿಗೆ ಇಲಾಖೆಯಿಂದ ರಿಯಾಯಿತಿ ದರದಲ್ಲಿ ಪರವಾನಗಿ ನೀಡಲಾಗುತ್ತದೆ ಎಂದು ಅಶೋಕ್ ಕುಮಾರ್ ಮಾಹಿತಿ ನೀಡಿದ್ದಾರೆ.

15 ದಿನಗಳಲ್ಲಿ ಈ ರಿಕ್ಷಾ ರಸ್ತೆಗೆ

15 ದಿನಗಳಲ್ಲಿ ಈ ರಿಕ್ಷಾ ರಸ್ತೆಗೆ

ನಗರದಾದ್ಯಂತ ಈಗಾಗಲೇ 150ಕ್ಕೂ ಹೆಚ್ಚು ಮಂದಿ ರಿಕ್ಷಾ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಕೆಲ ಶಾಲೆಗಳ ಆಡಳಿತ ಮಂಡಳಿ ಮುಖ್ಯಸ್ಥರೂ ಮುಂದಿನ 15 ದಿನಗಳಲ್ಲಿ ಕನಿಷ್ಠ 15 ಇ-ರಿಕ್ಷಾಗಳು ಮೈಸೂರಿನಲ್ಲಿ ರಸ್ತೆಗಿಳಿಯುವ ಎಲ್ಲ ಸಾಧ್ಯತೆಗಳಿವೆ. ರಿಕ್ಷಾ ಬಗ್ಗೆ ಮಾಹಿತಿ ಪಡೆದವರು ಬೆಂಗಳೂರಿನ ಕೇಂದ್ರ ಕಚೇರಿಗೂ ತೆರಳಿ ಸಾಧಕ, ಬಾಧಕಗಳ ಬಗ್ಗೆ ತಿಳಿದುಕೊಂಡಿದ್ದಾರೆ.

ಆಸಕ್ತರು ಸಂಪರ್ಕಿಸಿ...

ಆಸಕ್ತರು ಸಂಪರ್ಕಿಸಿ...

ಒಟ್ಟಾರೆ ಸಾಂಸ್ಕೃತಿಕ ಹಾಗೂ ಸ್ವಚ್ಛ ನಗರ ಎಂದು ಹೆಸರು ಪಡೆದಿರುವ ಮೈಸೂರಿನಲ್ಲಿ ಪರಿಸರ ಸ್ನೇಹಿ ರಿಕ್ಷಾ ಸಂಚಾರ ಆರಂಭಿಸುವ ಮೂಲಕ ನಗರದ ಮೆರುಗನ್ನು ಹೆಚ್ಚಿಸಲಿದೆ. ಇ-ರಿಕ್ಷಾ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲಿಚ್ಛಿಸುವವರು ಅಶೋಕ್ ಕುಮಾರ್ ಅವರ ಮೊಬೈಲ್ ಸಂಖ್ಯೆ 9341823254 ಸಂಪರ್ಕಿಸಬಹದಾಗಿದೆ.

English summary
Eco friendly e rickshaw will be started it's drive in Palace city Mysuru soon. A Haryana based company introduced e rikshaw in the city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X