ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡೆಂಗ್ಯೂ ಹೆಸರಿನಿಂದ ಶುರುವಾಗಿದೆ ಮೈಸೂರಲ್ಲಿ ಖಾಸಗಿ ಆಸ್ಪತ್ರೆ ದಂಧೆ?

By Yashaswini
|
Google Oneindia Kannada News

ಮೈಸೂರು, ಜೂನ್ 28: ಜ್ವರದಿಂದ ಭಯಭೀತರಾಗಿ ಆಸ್ಪತ್ರೆಗೆ ಹೋಗುವ ರೋಗಿಗಳಿಗೆ ಪ್ಲೇಟ್ಲೆಟ್ ಕಣಗಳು ಕಡಿಮೆಯಾಗಿದೆ, ಕೂಡಲೇ ಚಿಕಿತ್ಸೆ ಪಡೆಯಬೇಕು ಎಂದು ಮೈಸೂರಿನ ಕೆಲವು ಖಾಸಗಿ ಆಸ್ಪತ್ರೆಗಳು ಭೀತಿ ಹುಟ್ಟಿಸುತ್ತಿರುವ ಸಂಗತಿ ಬೆಳಕಿಗೆ ಬಂದಿದೆ.

ಡೆಂಗ್ಯೂ ತಡೆಗೆ ಯಾವ ಮುಂಜಾಗ್ರತಾ ಕ್ರಮ ಬೇಕು?ಡೆಂಗ್ಯೂ ತಡೆಗೆ ಯಾವ ಮುಂಜಾಗ್ರತಾ ಕ್ರಮ ಬೇಕು?

ಖಾಸಗಿ ಆಸ್ಪತ್ರೆಗಳಿಗೆ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೋಟಿಸ್ ನೀಡಿ ಎಚ್ಚರಿಕೆ ಕೊಟ್ಟಿದ್ದರೂ ಕ್ಯಾರೆ ಎನ್ನದ ಕೆಲವು ಆಸ್ಪತ್ರೆಗಳು ಕೆಪಿಎಂಎ ಕಾನೂನು ನಿಯಮ ಮೀರಿ ದಂಧೆ ನಡೆಸುತ್ತಿರುವುದು ನಗರದಲ್ಲಿ ಕಂಡು ಬಂದಿದೆ.

ಮೈಸೂರಿನಲ್ಲಿ ಡೆಂಗ್ಯೂಗೆ ಬಾಲಕಿ ಬಲಿಮೈಸೂರಿನಲ್ಲಿ ಡೆಂಗ್ಯೂಗೆ ಬಾಲಕಿ ಬಲಿ

Dengue disease becomes a bussiness in Mysuru!

ಹಿರಿಯರು, ಯುವಜನತೆ, ಮಕ್ಕಳು ಎನ್ನದೆ ಜ್ವರ ಎಲ್ಲರನ್ನೂ ಬಾಧಿಸುತ್ತಿದೆ. ಜಿಲ್ಲೆಯಾದ್ಯಂತ ಶಂಕಿತ ಡೆಂಗ್ಯೂ ಪ್ರಕರಣದಲ್ಲಿ ಅನೇಕ ಸಾವು ಸಂಭವಿಸಿರುವುದರಿಂದ ಜ್ವರ ಬಂದ ಕೂಡಲೇ ಜನರೂ ಡೆಂಗ್ಯೂ ಎಂದೇ ಭಾವಿಸಿ ಭಯಭೀತರಾಗುತ್ತಿದ್ದಾರೆ. ಹಾಗಾಗಿ ಮೈ ಬಿಸಿಯಾದರೆ ಹೆದರಿ ಆಸ್ಪತ್ರೆಗಳಿಗೆ ಓಡುತ್ತಿದ್ದಾರೆ. ಬಹುತೇಕ ಖಾಸಗಿ ಆಸ್ಪತ್ರೆಗಳು ಜ್ವರದ ರೋಗಿಗಳಿಂದ ಭರ್ತಿಯಾಗಿದೆ. ನಿತ್ಯ ಕೆ.ಆರ್.ಆಸ್ಪತ್ರೆಯಲ್ಲೂ ಜ್ವರದ ಕಾರಣಕ್ಕೆ 25ಕ್ಕೂ ಹೆಚ್ಚು ಮಂದಿ ಚಿಕಿತ್ಸೆಗೆ ದಾಖಲಾಗುತ್ತಿದ್ದಾರೆ.

ಮೈಸೂರಿನಲ್ಲಿ ಡೆಂಗ್ಯೂ ಭೀತಿ: ತುಂಬಿ ತುಳುಕುತ್ತಿದೆ ಚೆಲುವಾಂಬ ಆಸ್ಪತ್ರೆಮೈಸೂರಿನಲ್ಲಿ ಡೆಂಗ್ಯೂ ಭೀತಿ: ತುಂಬಿ ತುಳುಕುತ್ತಿದೆ ಚೆಲುವಾಂಬ ಆಸ್ಪತ್ರೆ

ಇದನ್ನೇ ದುರುಪಯೊಗ ಪಡಿಸಿಕೊಳ್ಳುತ್ತಿರುವ ಕೆಲವು ಖಾಸಗಿ ಆಸ್ಪತ್ರೆಗಳು ಹಣ ವಸೂಲಿ ಮಾಡುವ ಧಂದೆಗೆ ಇಳಿದಿವೆ.

ಪ್ಲೇಟ್ಲೆಟ್ ಹೆಸರು ಹೇಳಿಕೊಂಡು ದಂಧೆ!
ನಿಮ್ಮ ಪತಿಗೆ ಸಾವಿರ ಪ್ಲೇಟ್ಲೆಟ್ ಇದೆ ಎಂದು ರಕ್ತ ಪರೀಕ್ಷೆಯ ವರದಿಯಲ್ಲಿದೆ. ನಿಮಗೆ ಪ್ಲೇಟ್ಲೆಟ್ ತುಂಬಾ ಕಡಿಮೆಯಾಗಿದೆ ತಕ್ಷಣ ಚಿಕಿತ್ಸೆ ಪಡೆಯಬೇಕು. ಯಾವ ಆಸ್ಪತ್ರೆಯಲ್ಲಾದರೂ ದಾಖಲಾಗಿ ಎಂದು ಡಯಾಗ್ನೋಸ್ಟಿಕ್ ಒಂದರಲ್ಲಿ ಮಹಿಳೆಗೆ ತಿಳಿಸಿದ್ದಾರೆ.

ಡೆಂಗ್ಯೂ ಕುರಿತಾಗಿ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ವಿಶೇಷ ಸಭೆಡೆಂಗ್ಯೂ ಕುರಿತಾಗಿ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ವಿಶೇಷ ಸಭೆ

ಈ ವಿಚಾರವಾಗಿ ಸ್ವಲ್ಪ ಅನುಮಾನ ಗೊಂಡ ಆ ಮಹಿಳೆಯ ಪತಿ ಬೇರೆ ಆಸ್ಪತ್ರೆಯಲ್ಲಿ ಮತ್ತೊಮ್ಮೆ ಪರೀಕ್ಷೆ ಮಾಡಿಸೋಣ ಎಂದು ತೀರ್ಮಾನಿಸಿದ್ದಾರೆ. ಮತ್ತೊಂದು ಆಸ್ಪತ್ರೆಯಲ್ಲಿ ರಕ್ತ ಪರೀಕ್ಷೆ ಮಾಡಿಸಿದಾಗ ಪ್ಲೇಟ್ಲೆಟ್ 3.21 ಲಕ್ಷ ಕೌಂಟ್ಸ್ ಇರುವುದಾಗಿ ವರದಿ ನೀಡಿದ್ದಾರೆ.
ಜನರಿಂದ ರಕ್ತ ಪರೀಕ್ಷೆ ಹಾಗೂ ಬೇರೆಬೇರೆ ಪರೀಕ್ಷೆಗಳ ಹೆಸರಿನಲ್ಲೂ ಹಣ ಕೀಳುವುದು, ಅಗತ್ಯವಿಲ್ಲದಿದ್ದರೂ ಒಳರೋಗಿಗಳಾಗಿ ದಾಖಲಿಸಿಕೊಳ್ಳುತ್ತಿದ್ದಾರೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.

ಮಾರಕ ರೋಗಗಳ ತಡೆಗೆ ಸಸ್ಯ ತಂತ್ರಜ್ಞಾನಮಾರಕ ರೋಗಗಳ ತಡೆಗೆ ಸಸ್ಯ ತಂತ್ರಜ್ಞಾನ

Dengue disease becomes a bussiness in Mysuru!

ಡಿಸಿ, ಸಿಇಓ ಜೊತೆ ಚರ್ಚೆಸಿ ಕ್ರಮ

ಇನ್ನು ಇದಕ್ಕೆ ಸ್ಪಂದಿಸಿರುವ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಬಸವರಾಜು, ಇಂಥ ಘಟನೆಗಳು ನಡೆಯಬಾರದು ಎಂಬ ಕಾರಣಕ್ಕೇ ಮೊದಲೇ ಖಾಸಗಿ ಆಸ್ಪತ್ರೆಗಳಿಗೆ ಎಚ್ಚರಿಕೆ ನೀಡಿ ನೋಟಿಸ್ ಕೊಟ್ಟಿದ್ದೇವೆ. ಆದರೂ ಕೂಡ ಆಸ್ಪತ್ರೆಗಳು ಇದನ್ನೇ ಧಂದೆ ಮಾಡಿಕೊಂಡಿವೆ. ಈ ಸಂಬಂಧವಾಗಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅವರೊಂದಿಗೆ ಚರ್ಚಿಸಿ ಕ್ರಮ ಜರುಗಿಸುತ್ತೇವೆ ಎಂದು ತಿಳಿಸಿದರು.

ಅಬ್ಬಾ! ಡೆಂಗ್ಯೂ ಗುಣಪಡಿಸುವ ಲಸಿಕೆ ಬಂದಿದೆಯಂತೆಅಬ್ಬಾ! ಡೆಂಗ್ಯೂ ಗುಣಪಡಿಸುವ ಲಸಿಕೆ ಬಂದಿದೆಯಂತೆ

ಒನ್ ಇಂಡಿಯಾದೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ರಂದೀಪ್, ಸುಲಿಗೆ ಮಾಡುವುದು ಅಪರಾಧ. ಸುಳ್ಳು ವರದಿ ನೀಡಿರುವ ಕಾರಣ ಇದನ್ನು ಕೆಪಿಎಂಎ ಕಾಯ್ದೆ ಅಡಿ ಅಪರಾಧ ಎಂದು ಪರಿಗಣಸಲಾಗುತ್ತದೆ. ವರದಿ ನೀಡಿರುವ ಖಾಸಗಿ ಆಸ್ಪತ್ರೆಗಳ ವಿರುದ ಕ್ರಮ ಜರುಗಿಸಿ ಉಳಿದ ಆಸ್ಪತ್ರೆ ಗಳಿಗೂ ಖಡಕ್ ಎಚ್ಚರಿಕೆಯನ್ನು ರವಾನಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಒಟ್ಟಿನಲ್ಲಿ ಡೆಂಗ್ಯೂ ಎಂಬ ಹೆಸರಿನಡಿ ಖಾಸಗಿ ಆಸ್ಪತ್ರೆಗಳು ಜನರ ಭಾವನೆಗಳೊಂದಿಗೆ ಆಟವಾಡುವುದನ್ನು ಮೊದಲು ನಿಲ್ಲಿಸಬೇಕೆಂಬುದು ನಮ್ಮ ಅಭಿಲಾಷೆ.

English summary
Some private hospitals in Mysuru have started bussiness in the name of dengue disease! By creating tension in the name of dengue, some hospitals making money.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X