ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅತ್ಯಾಚಾರ ಎಸಗಿದವರ ಕೈಕಾಲು ಕತ್ತರಿಸಿ: ಮೋಟಮ್ಮ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಏಪ್ರಿಲ್ 24: ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣ ಹೆಚ್ಚಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ ಮಾಜಿ ಸಚಿವೆ ಮೋಟಮ್ಮ ಅತ್ಯಾಚಾರ ಎಸಗುವವರ ಕೈಕಾಲುಗಳನ್ನು ಕತ್ತರಿಸಬೇಕೆಂದು ತಮ್ಮಲ್ಲಿದ್ದ ಆಕ್ರೋಶವನ್ನು ಹೊರಹಾಕಿದ್ದಾರೆ.

ಮೈಸೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಇತ್ತೀಚೆಗೆ ಹುಟ್ಟಿಸಿದ ಅಪ್ಪನೇ ಮಗಳ ಮೇಲೆ ಅತ್ಯಾಚಾರ ನಡೆಸುತ್ತಿರುವ ಪ್ರಕರಣಗಳ ಬಗ್ಗೆ ಕೆಂಡಾಮಂಡಲರಾದ ಅವರು ಉತ್ತರ ಪ್ರದೇಶದಲ್ಲಿ ಮಗಳ ಮೇಲೆ ಅತ್ಯಾಚಾರ ಎಸಗಿದ ತಂದೆಯನ್ನು ಅಲ್ಲಿನವರು ಮರಕ್ಕೆ ಕಟ್ಟಿ ಹಾಕಿ, ಆತನ ಕೈಗಳನ್ನು ಕತ್ತರಿಸಿ ಹಾಕಿದ್ದಾರೆ. ಇಂತಹ ಕಠಿಣ ಶಿಕ್ಷೆಗಳಿಂದಷ್ಟೆ ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳು ನಿಲ್ಲಬಹುದೇನೋ ಎಂದು ಬೇಸರ ವ್ಯಕ್ತಪಡಿಸಿದರು.

ಕಾಮ ಪ್ರಚೋದಿವಂಥ ಉಡುಪುಗಳನ್ನು ಹೆಣ್ಣು ಮಕ್ಕಳು ಧರಿಸುವುದರಿಂದಲೂ, ಕಾಮುಕರು ಅಟ್ಟಹಾಸ ಬೀರಬಹುದು. ಆದ್ದರಿಂದ ತಮ್ಮ ಜವಾಬ್ದಾರಿಗಳನ್ನು ಅರಿತುಕೊಳ್ಳಬೇಕು, ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಅನುಸರಿಸುವ ಭರದಲ್ಲಿ ಕಾಮಪ್ರಚೋಧಿಸುವಂಥ ಉಡುಪುಗಳನ್ನು ಧರಿಸುವುದರಿಂದ ಅತ್ಯಾಚಾರಗಳು ಹೆಚ್ಚಾಗಲು ಕಾರಣವಾಗುತ್ತಿದೆ. ಮಹಿಳೆಯರು ಮತ್ತು ಮಕ್ಕಳ ಮೇಲೆ ದೌರ್ಜನ್ಯಗಳು, ಅತ್ಯಾಚಾರಗಳು ನಡೆದಾಗ ಮಹಿಳೆಯರು ತಮ್ಮ ತಮ್ಮಲ್ಲಿಯೇ ಗುಸು ಗುಸು ಚರ್ಚೆ ಮಾಡದೆ ಬೀದಿಗೆ ಬಂದು ಒಗ್ಗಟ್ಟಿನಿಂದ ಹೋರಾಟ ಮಾಡಬೇಕೆಂದರು.

ರಾಜ್ಯ ಮಹಿಳಾ ಆಯೋಗಕ್ಕೆ ರಾಜ್ಯ ಸರ್ಕಾರ ಕಾನೂನು ತಿದ್ದುಪಡಿಗಳನ್ನು ತರುವ ಮೂಲಕ ಮತ್ತಷ್ಟು ಬಲವನ್ನು ನೀಡಬೇಕಿದೆ. ಈಗಾಗಲೇ ಆಯೋಗ ಹಲ್ಲಿಲ್ಲದ ಹಾವಿನಂತಾಗಿದೆ ಆದ್ದರಿಂದ ಅದನ್ನು ಭದ್ರಗೊಳಿಸಬೇಕಾದರೆ ಕಾನೂನು ತಿದ್ದುಪಡಿ ಅನಿವಾರ್ಯ ಎಂದರು.

English summary
Former Karnataka Minister Motamma said in order to stop rape one must cut hands and legs of Rapists. She was speaking at a private function held in Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X