ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿತ್ರಗಳು : ಮೈಸೂರಿನ ರಿಂಗ್ ರೋಡ್ ಲೋಕಾರ್ಪಣೆ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಏಪ್ರಿಲ್ 29 : ಸುಗಮ ವಾಹನ ಸಂಚಾರ ಮತ್ತು ನಗರಕ್ಕೆ ಸಂಪರ್ಕ ಕಲ್ಪಿಸುವ ಸಲುವಾಗಿ ನಿರ್ಮಿಸಲಾಗಿರುವ 41 ಕಿಲೋಮೀಟರ್ ಉದ್ದದ ರಿಂಗ್ ರಸ್ತೆ ಲೋಕಾರ್ಪಣೆಗೊಂಡಿದೆ. ಸುಮಾರು 332.68 ಕೋಟಿ ವೆಚ್ಚದಲ್ಲಿ ರಿಂಗ್ ರಸ್ತೆ ನಿರ್ಮಾಣ ಮಾಡಲಾಗಿದೆ.

ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಸ್ತೆಯನ್ನು ಸಾರ್ವಜನಿಕ ಸಂಚಾರಕ್ಕೆ ಅಧಿಕೃತವಾಗಿ ಅನುವು ಮಾಡಿಕೊಟ್ಟಿದ್ದಾರೆ. ನಗರದ ಹೊರವಲದ ವರ್ತುಲ ರಸ್ತೆಯಾಗಿದ್ದು ಇದರ ಮೂಲಕ ನಗರದೊಳಕ್ಕೆ ಪ್ರವೇಶಿಸದೆ ಇತರೆ ನಗರಗಳ ರಸ್ತೆಯ ಸಂಪರ್ಕವನ್ನು ಪಡೆಯಬಹುದಾಗಿದೆ. [ಬೆಂ-ಮೈಸೂರು 6 ಪಥದ ರಸ್ತೆ, ಭೂ ಸ್ವಾಧೀನ ಆರಂಭ]

mysuru outer ring road

ಕಳೆದ ಹಲವು ವರ್ಷಗಳಿಂದ ಹೊರ ವರ್ತುಲ ರಸ್ತೆಯ ಕಾಮಗಾರಿ ನಡೆಯುತ್ತಿತ್ತಾದರೂ ಇತ್ತೀಚೆಗೆ ಮುಕ್ತಾಯಗೊಂಡಿತ್ತು. ಹಲವು ಅಡೆ ತಡೆಗಳ ನಡುವೆ ನಿರ್ಮಾಣಗೊಂಡಿದ್ದು, ಇದೀಗ ಸಾರ್ವಜನಿಕರಿಗೆ ಅನುಕೂಲವಾಗಿದೆ. [ಹಳಿತಪ್ಪಿದ ಬೆಂಗಳೂರು-ಮೈಸೂರು ಹೈಸ್ಪೀಡ್ ರೈಲು ಯೋಜನೆ]

ಹೊರವರ್ತುಲ ರಸ್ತೆ (ರಿಂಗ್‍ರೋಡ್) ಮೈಸೂರಿನ ಸುತ್ತಲೂ ನಿರ್ಮಾಣವಾಗಿದ್ದು, ರಾಷ್ಟ್ರೀಯ ಹೆದ್ದಾರಿಗಳು ಹಾಗೂ ರಾಜ್ಯ ಹೆದ್ದಾರಿಗಳನ್ನು ಒಳಗೊಂಡಂತೆ ಎಲ್ಲಾ ರಸ್ತೆಗಳಿಗೆ ಸಂಪರ್ಕ ಕಲ್ಪಿಸುತ್ತದೆ. ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳನ್ನು ಉಪಯೋಗಿಸುವ ದೂರ ಸ್ಥಳಗಳ ಪ್ರಯಾಣಿಕರು ಹಾಗೂ ಸರಕು ಸಾಗಾಣಿಕೆ ವಾಹನಗಳು ಮೈಸೂರು ನಗರವನ್ನು ಪ್ರವೇಶಿಸದೆ ಹೊರವರ್ತುಲ ರಸ್ತೆಗಳ ಮುಖಾಂತರ ಪ್ರಯಾಣಿಸಬಹುದಾಗಿದೆ. [ಬೆಂಗಳೂರು-ಮೈಸೂರು ರೈಲ್ವೆ ಪ್ರಯಾಣಿಕರಿಗೆ ಸಿಹಿ ಸುದ್ದಿ]

ನಗರ ಪ್ರವೇಶ ಮಾಡುವುದೇ ಬೇಡ : ರಿಂಗ್ ರಸ್ತೆ ನಿರ್ಮಾಣದಿಂದಾಗಿ ಬೆಂಗಳೂರಿನಿಂದ ಕೊಡಗು, ಮಂಗಳೂರು, ನಂಜನಗೂಡು, ನರಸೀಪುರ, ಚಾಮರಾಜನಗರ ಮೊದಲಾದ ಕಡೆಗಳಿಗೆ ತೆರಳುವವರು ನಗರ ಪ್ರವೇಶಿಸದೆ ವಾಹನಗಳ ದಟ್ಟಣೆಯಿಲ್ಲದ ರಿಂಗ್ ರಸ್ತೆಯಲ್ಲಿ ಸುಲಭವಾಗಿ ಸಂಚರಿಸಬಹುದಾಗಿದೆ.

'ಮೈಸೂರು- ಬೆಂಗಳೂರು ಹೆದ್ದಾರಿ ರಸ್ತೆಯನ್ನು 6 ಪಥದ ರಸ್ತೆಯನ್ನಾಗಿ ಅಭಿವೃದ್ಧಿಗಳಿಸಲು ಸರ್ಕಾರ ಯೋಜನೆ ರೂಪಿಸಿದ್ದು, 2018 ರೊಳಗಾಗಿ ರಸ್ತೆಯನ್ನು ಸಾರ್ವಜನಿಕರಿಗೆ ಮುಕ್ತಗೊಳಿಸುವ ಗುರಿ ಹೊಂದಲಾಗಿದೆ. ಇದರಿಂದ ಮೈಸೂರು-ಬೆಂಗಳೂರು ಸಂಚರಿಸುವ ಪ್ರಯಾಣಿಕರಿಗೆ ಸಮಯದ ಉಳಿತಾಯವಾಗಲಿದೆ'

'ರೈಲ್ವೆ ಮಾರ್ಗದ ಎರಡು ಪಥದ ಸಂಚಾರ ಕಾಮಗಾರಿಯು ಬಹುತೇಕ ಪೂರ್ಣಗೊಂಡಿದ್ದು, ರೈಲ್ವೆ ಸೇವೆಯನ್ನು ಬಳಸುವ ಪ್ರಯಾಣಿಕರಿಗೂ ಸಹ ಅನುಕೂಲವಾಗಲಿದೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.

English summary
Karnataka Chief Minister Siddaramaiah on Thursday, April 28, 2016 inaugurated the the Mysuru outer ring road. 41 km road constructed in the cost of 332 core.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X