ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ಚಾಮರಾಜೇಂದ್ರ ಒಡೆಯರ್ ಕತ್ತಿ ನಾಪತ್ತೆ

|
Google Oneindia Kannada News

ಮೈಸೂರು, ಅ.11 : ಮೈಸೂರಿನಲ್ಲಿರುವ ಚಾಮರಾಜೇಂದ್ರ ಒಡೆಯರ್ ಪ್ರತಿಮೆಯನ್ನು ಕಿಡಿಗೇಡಿಗಳು ಭಗ್ನಗೊಳಿಸಿದ್ದಾರೆ. ಈ ಕುರಿತು ಮಹಾನಗರ ಪಾಲಿಕೆ ದೇವರಾಜ ಅರಸ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಭಗ್ನಗೊಂಡಿರುವ ಪ್ರತಿಮೆಯನ್ನು ದುರಸ್ತಿಪಡಿಸುವ ಕಾರ್ಯವನ್ನು ಭಾನುವಾರ ಕೈಗೊಳ್ಳಲಾಗುತ್ತದೆ ಎಂದು ಪಾಲಿಕೆ ಆಯುಕ್ತ ಸಿ.ಜಿ. ಬೆಟ್‌ಸೂರ್ ಮಠ ತಿಳಿಸಿದ್ದಾರೆ.

ಮೈಸೂರಿನ ಅಂಬಾವಿಲಾಸ ಅರಮನೆಯ ಬಲರಾಮ ದ್ವಾರದ ಬಳಿ ಇರುವ ಚಾಮರಾಜೇಂದ್ರ ಒಡೆಯರ್ ಪ್ರತಿಮೆಯನ್ನು ಕಿಡಿಗೇಡಿಗಳು ಶುಕ್ರವಾರ ರಾತ್ರಿ ಭಗ್ನಗೊಳಿಸಿದ್ದಾರೆ. ರಾಜರ ಪ್ರತಿಮೆಯ ಕೈಯಲ್ಲಿದ್ದ ಕತ್ತಿಯನ್ನು ಕಿಡಿಗೇಡಿಗಳು ಮುರಿದು ಹಾಕಿದ್ದಾರೆ. ಶನಿವಾರ ಇದನ್ನು ಗಮನಿಸಿದ ಸಾರ್ವಜನಿಕರು ಪಾಲಿಕೆಗೆ ಮಾಹಿತಿ ನೀಡಿದ್ದರು. [ಮೈಸೂರು ದಸರಾ ಚಿತ್ರಗಳನ್ನು ನೋಡಿ]

Chamarajendra Wodeyar

ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಸಿ.ಜಿ. ಬೆಟ್‌ಸೂರ್ ಮಠ ಶನಿವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಭಗ್ನಗೊಂಡ ಭಾಗದ ಅಳತೆ ತೆಗೆದುಕೊಂಡಿದ್ದು, ಭಾನುವಾರ ಅದನ್ನು ದುರಸ್ತಿಪಡಿಸುವ ಕಾರ್ಯ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು. [ಚಾಮರಾಜೇಂದ್ರ ಒಡೆಯರ್ ಬಗ್ಗೆ ಇಲ್ಲಿದೆ ಮಾಹಿತಿ]

ಪ್ರತಿಮೆಗೆ ಸೂಕ್ತ ರಕ್ಷಣೆ ಒದಗಿಸುವಂತೆ ಸಾರ್ವಜನಿಕರು ಪಾಲಿಕೆ ಆಯುಕ್ತರಿಗೆ ಒತ್ತಾಯಿಸಿದರು. ಪ್ರತಿಮೆ ರಕ್ಷಣೆಗಾಗಿ ಸ್ಥಳದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸುತ್ತೇವೆ ಎಂದು ಪಾಲಿಕೆ ಆಯುಕ್ತರು ಸಾರ್ವಜನಿಕರಿಗೆ ಭರವಸೆ ನೀಡಿದ್ದಾರೆ. ಘಟನೆ ಕುರಿತು ದೇವರಾಜ ಅರಸ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದರು. [ಮೈಸೂರು ಪಾಲಿಕೆಯಲ್ಲಿ ಬಿಜೆಪಿ-ಜೆಡಿಎಸ್ ದೋಸ್ತಿ]

114 ವರ್ಷ ಹಳೆಯದಾದ ವೃತ್ತದಲ್ಲಿ ಚಾಮರಾಜೇಂದ್ರ ಒಡೆಯರ್ ಅವರ ಪ್ರತಿಮೆ ನಿರ್ಮಿಸಲಾಗಿದ್ದು, ಕತ್ತಿಯೂ ಅದರೊಂದಿಗೆ ಇದೆ. ರಾಬರ್ಟ್ ಕೋಲ್ಟನ್ ನಿರ್ಮಿಸಿದ ಅಮೃತ ಶಿಲೆಯ ಪ್ರತಿಮೆಯನ್ನು ಲಾರ್ಡ್ ಕರ್ಜನ್ 1900ನೇ ಡಿಸೆಂಬರ್ 1ರಂದು ಉದ್ಘಾಟಿಸಿದ್ದರು. ಮಹಾರಾಜ ಶ್ರೀ ಚಾಮರಾಜೇಂದ್ರ ಒಡೆಯರ್ ಅವರು 1886 ರಿಂದ 1894ರವರೆಗೆ ಮೈಸೂರು ಸಂಸ್ಥಾನದಲ್ಲಿ ಆಳ್ವಿಕೆ ನಡೆಸಿದ್ದರು.

ಆರು ತಿಂಗಳ ಹಿಂದೆ ಒಡೆಯರ್ ಪ್ರತಿಮೆಯ ಕತ್ತಿ ಕಾಣೆಯಾಗಿತ್ತು. ಆಗ ಆಯುಕ್ತರಾಗಿದ್ದ ಡಾ.ಪಿ.ಜಿ.ರಮೇಶ್ ಆದೇಶದ ಹಿನ್ನೆಲೆಯಲ್ಲಿ ಹೊಸದಾಗಿ ಕತ್ತಿ ನಿರ್ಮಿಸಿ ಅಳವಡಿಸಲಾಗಿತ್ತು. ಈಗ ಮತ್ತೆ ಇಂಥದೇ ಕೃತ್ಯ ನಡೆದಿದೆ.

English summary
A few miscreants had vandalized the statue of Chamarajendra Wodeyar located at the Chamarajendra Wodeyar circle in Mysore on Friday, October 10 night. Sword missing from the statue.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X