ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು: 74 ಗೋವುಗಳಿಗೆ ಪೂಜೆ ಮಾಡಿ ಬಿಎಸ್‍ವೈ ಹುಟ್ಟು ಹಬ್ಬ ಆಚರಣೆ

ಮೈಸೂರಿನ ಕನಕಗಿರಿಯ ಸೂಯೇಜ್ ಫಾರಂ ನಲ್ಲಿ ಮಾಜಿ ಸಚಿವ ರಾಮದಾಸ್ ಹಾಗೂ ಸ್ವಾಮೀಜಿಗಳ ನೇತೃತ್ವದಲ್ಲಿ 74 ಗೋವುಗಳಿಗೆ ಪೂಜೆ ಮಾಡಿ, ಉಚಿತ ಮೇವು ನೀಡುವುದರ ಮೂಲಕ ಯಡಿಯೂರಪ್ಪ ಹುಟ್ಟುಹಬ್ಬ ಆಚರಿಸಲಾಯಿತು.

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಫೆಬ್ರವರಿ 27: ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರ 74ನೇ ಹುಟ್ಟುಹಬ್ಬವನ್ನು ಮೈಸೂರಿನಲ್ಲಿ ಬಿಜೆಪಿ ಕಾರ್ಯಕರ್ತರು ವಿಭಿನ್ನವಾಗಿ ಆಚರಿಸಿದರು.

ಮೈಸೂರಿನ ಕನಕಗಿರಿಯ ಸೂಯೇಜ್ ಫಾರಂ ನಲ್ಲಿ ಮಾಜಿ ಸಚಿವ ರಾಮದಾಸ್ ಸೇರಿದಂತೆ ಸ್ವಾಮೀಜಿಗಳ ನೇತೃತ್ವದಲ್ಲಿ 74 ಗೋವುಗಳಿಗೆ ಪೂಜೆ ಮಾಡಿ, ಗೋವುಗಳಿಗೆ ಉಚಿತ ಮೇವು ನೀಡುವುದರ ಮೂಲಕ ಯಡಿಯೂರಪ್ಪ ಹುಟ್ಟುಹಬ್ಬ ಆಚರಿಸಲಾಯಿತು.['ಕೈ' ಬಿಟ್ಟು 'ಕಮಲ' ಅಪ್ಪಿಕೊಳ್ಳಲು ಹೊರಟಿದ್ದಾರೆ ಕುಮಾರ್ ಬಂಗಾರಪ್ಪ!]

BS Yeddyurappa’s birthday celebrated with ‘Go Pooja’ to 74 cows

ಕಾರ್ಯಕ್ರಮದಲ್ಲಿ ಗೋ ಹತ್ಯೆ ನಿಷೇಧ ಕಾನೂನು ಜಾರಿಗೆ ಒತ್ತಾಯ ಹಾಗೂ ಸೂಯೇಜ್ ಫಾರಂ ಉಳಿಸಿ ಹೋರಾಟ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಈ ವೇಳೆ‌ ಮಾತನಾಡಿದ ಮಾಜಿ ಸಚಿವ ರಾಮದಾಸ್, ವಿಶೇಷವಾಗಿ ರೈತ ಪರವಾದ ಹುಲ್ಲನ್ನು ಗೋಮಾತೆಗೆ ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದೇವೆ. ಯಡಿಯೂರಪ್ಪ ಅವರು ಸಿಎಂ ಆಗಿದ್ದ ವೇಳೆ ಗೋ ಹತ್ಯೆ ನಿಷೇಧಿಸಲು ಮುಂದಾದೆವು. ಆದರೆ ಇಂದು ಸಿಎಂ ಸಿದ್ದರಾಮಯ್ಯ ಗೋ ಹತ್ಯೆ ನಿಷೇಧ ಇಲ್ಲ ಎಂದಿದ್ದಾರೆ‌. ಇದು ಗೋವುಗಳ ಬಗ್ಗೆ ಸಿಎಂ ಅವರಿಗೆ ಕಾಳಜಿ ಇಲ್ಲದಿರುವುದನ್ನು ಸೂಚಿಸುತ್ತದೆ ಎಂದರು.[ಸಿಟ್ಟು, ಪಟ್ಟು ಎರಡರ ಕಾಂಬೋ ಬಿಎಸ್ ವೈಗೆ 74ನೇ ಜನ್ಮದಿನ]

"ಈಗಷ್ಟೆ ಹೋರಾಟ ಪ್ರಾರಂಭ ಮಾಡುತ್ತಿದ್ದೇವೆ. ಗೋವುಗಳ ರಕ್ಷಣೆಗೆ ಮತ್ತು ಸ್ಥಳ ಅಭಿವೃದ್ಧಿ ದೃಷ್ಟಿಯಿಂದ ಸುಯೇಜ್ ಫಾರಂ ಉಳಿಸಿ ಅಭಿಯಾನ ಕೈಗೊಂಡಿದ್ದೇವೆ. ಇಂದೇ ಕಾರ್ಯಕ್ರಮದಲ್ಲಿ ಉಪಮೇಯರ್ ಅವರಿಗೆ ಮನವಿ ಸಲ್ಲಿಸುತ್ತಿದ್ದೇವೆ. ನಾಳೆ ಪಾಲಿಕೆ ಆಯುಕ್ತರು ಮೇಯರ್ ಅವರನ್ನ ಕಂಡು ಗೋ ಅಭಿವೃದ್ಧಿ ಹಾಗೂ ಉಳಿವಿಗಾಗಿ ಮನವಿ ಪತ್ರ ಸಲ್ಲಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕರು, ಕಾರ್ಯಕರ್ತರು ಉಪಸ್ಥಿತರಿದ್ದರು.

English summary
Former Minister S A Ramadas and Mysuru BJP workers celebrated Karnataka BJP state president B S Yeddyurappa’s 74th birthday with ‘Go Pooja’ to 74 cows in Suyej farm Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X