ಕಾರ್ಪೊರೇಟರ್ ಮಹೇಶ್ ಸಾವು, ಲಕ್ಕಸಂದ್ರದಲ್ಲಿ ಆಪ್ತರ ಆಕ್ರಂದನ

ಲಕ್ಕಸಂದ್ರ ವಾರ್ಡ್ (146) ನ ಕಾರ್ಪೋರೇಟರ್ ಮಹೇಶ್ ಬಾಬು ಸೇರಿದಂತೆ ಮೂವರು ಶ್ರೀರಂಗಪಟ್ಟಣ ಬಳಿ ಸಂಭವಿಸಿದ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ

By:
Subscribe to Oneindia Kannada

ಮೈಸೂರು/ಬೆಂಗಳೂರು, ಜುಲೈ 17: ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿರುವ ಗೌರಿಪುರ ಬಳಿಯಲ್ಲಿ ಭಾನುವಾರ ಮುಂಜಾನೆ ಸಂಭವಿಸಿದ ಅಪಘಾತದಲ್ಲಿ ಬಿಬಿಎಂಪಿ ಸದಸ್ಯ ಮಹೇಶ್ ಬಾಬು ಅವರು ಮೃತಪಟ್ಟಿದ್ದಾರೆ.

ಲಕ್ಕಸಂದ್ರ ವಾರ್ಡ್ (146) ನ ಕಾರ್ಪೋರೇಟರ್ ಮಹೇಶ್ ಬಾಬು ಸೇರಿದಂತೆ ಮೂವರು ಶ್ರೀರಂಗಪಟ್ಟಣ ಬಳಿ ಸಂಭವಿಸಿದ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಮಹೇಶ್ ಬಾಬು ಅಲ್ಲದೆ ಇತರೆ ಇಬ್ಬರು ಮಾರತ್ ಹಳ್ಳಿಯ ಮುದಾ ಶರೀಫ್ ಅಹ್ಮದ್ (40), ಬನ್ನೇರುಘಟ್ಟದ ಬಾಲಾಜಿ (45) ಮೃತರಾಗಿದ್ದಾರೆ. [ಲಕ್ಕಸಂದ್ರ ವಾರ್ಡಿನಲ್ಲಿ ಮರು ಚುನಾವಣೆ, ಮತದಾನ]

ಸ್ಥಳಕ್ಕೆ ಡಿವೈಎಸ್ಪಿ ವಿಶ್ವನಾಥ್, ಪಿಎಸ್‍ಐ ಮಹೇಶ್ ಭೇಟಿ ನೀಡಿ ಪರಿಶೀಲಿಸಿದರು. ಪ್ರಕರಣ ದಾಖಲಿಸಿಕೊಂಡಿರುವ ಶ್ರೀರಂಗಪಟ್ಟಣ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಶ್ರೀರಂಗಪಟ್ಟಣದ ಗೌರಿಪುರ ಗ್ರಾಮದ ಬಳಿ ಭಾನುವಾರ ಬೆಳಗ್ಗೆ 6.40ರ ವೇಳೆಗೆ ಮಹೇಶ್ ಬಾಬು ಅವರಿದ್ದ ವಾಗನಾರ್ ಕಾರಿಗೆ ರಸ್ತೆ ವಿಭಜಕ ದಾಟಿದ ಸ್ವಿಫ್ಟ್ ಕಾರ್ ನೇರವಾಗಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದಾರೆ.

ಶ್ರೀರಂಗಪಟ್ಟಣ ಬಳಿ ಸಂಭವಿಸಿದ ಕಾರು ಅಪಘಾತ

ಲಕ್ಕಸಂದ್ರ ವಾರ್ಡ್ (146) ನ ಕಾರ್ಪೋರೇಟರ್ ಮಹೇಶ್ ಬಾಬು ಸೇರಿದಂತೆ ಮೂವರು ಶ್ರೀರಂಗಪಟ್ಟಣ ಬಳಿ ಸಂಭವಿಸಿದ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಮಹೇಶ್ ಬಾಬು ಅಲ್ಲದೆ ಇತರೆ ಇಬ್ಬರು ಮಾರತ್ ಹಳ್ಳಿಯ ಮುದಾ ಶರೀಫ್ ಅಹ್ಮದ್ (40), ಬನ್ನೇರುಘಟ್ಟದ ಬಾಲಾಜಿ (45) ಮೃತರಾಗಿದ್ದಾರೆ.

ಉತ್ತರಹಳ್ಳಿಯ ತುರಹಳ್ಳಿಯ ನಿವಾಸಿಗಳು

ಸ್ವಿಫ್ಟ್ ಕಾರಿನಲ್ಲಿದ್ದ ಕಾರು ಚಾಲಕ ಕುಮಾರ್ (40), ಸುರೇಶ್ (38), ಸುರೇಶ್ ಪತ್ನಿ ಭವ್ಯ (28), ಮಕ್ಕಳಾದ ಸುಭಾಷ್ (9) ಹಾಗೂ ಧನುಷ್ (4) ಅವರು ತೀವ್ರವಾಗಿ ಗಾಯಗೊಂಡಿದ್ದು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರೆಲ್ಲರೂ ಬೆಂಗಳೂರಿನ ಉತ್ತರಹಳ್ಳಿಯ ತುರಹಳ್ಳಿಯ ನಿವಾಸಿಗಳು.

ಲಕ್ಕಸಂದ್ರದಲ್ಲಿ ಅಭಿಮಾನಿಗಳ ಆಕ್ರೋಶ

ಲಕ್ಕಸಂದ್ರದ ರಾಮಸ್ವಾಮಿ ಲೇಔಟ್ ನ ನಿವಾಸಿ ಕಾರ್ಪೊರೇಟರ್ ಮಹೇಶ್ ಬಾಬು ಅವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಅವರ ಅಭಿಮಾನಿಗಳು ರಸ್ತೆಗಿಳಿದು ದುಃಖದಿಂದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಹೇಶ್ ಬಾಬು ಅವರು ಪತ್ನಿ ಹಾಗೂ 9 ವರ್ಷ ವಯಸ್ಸಿನ ಇಬ್ಬರು ಅವಳಿ ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

ಬಿಜೆಪಿಯ ಜನಪ್ರಿಯ ಕಾರ್ಪೊರೇಟರ್ ಆಗಿದ್ದರು

ಬಿಜೆಪಿ ಕಾರ್ಯಕರ್ತರು ಕೆಲಕಾಲ ಬನ್ನೇರುಘಟ್ಟ ರಸ್ತೆ ಹಾಗೂ ಹೊಸೂರು ರಸ್ತೆ ತಡೆ ನಡೆಸಿ, ಪ್ರತಿಭಟನೆ ನಡೆಸಿದರು. ಬಿಟಿಎಂ ಅಸೆಂಬ್ಲಿ ಕ್ಷೇತ್ರ ವ್ಯಾಪ್ತಿಗೆ ಬರುವ ಲಕ್ಕಸಂದ್ರ ವಾರ್ಡ್ ನಲ್ಲಿ ರಮೇಶ್ ಬಾಬು ಅವರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ಜನಪ್ರಿಯತೆ ಗಳಿಸಿದ್ದರು.

ಮೇಯರ್ ಅವರಿಂದ ಸಂತಾಪ

ಬಿಬಿಎಂಪಿ ಮೇಯರ್ ಬಿಎನ್ ಮಂಜುನಾಥ್ ರೆಡ್ಡಿ ಹಾಗೂ ಮಾಜಿ ಬಿಬಿಎಂಪಿ ಸದಸ್ಯ, ಮಹೇಶ್ ಬಾಬು ಅವರ ಆಪ್ತ ಗೆಳೆಯ ಎನ್ ಆರ್ ರಮೇಶ್ ಅವರು ಮಹೇಶ್ ಬಾಬು ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಚಾಮುಂಡಿ ಬೆಟ್ಟಕ್ಕೆ ಹೋಗಿದ್ದ ಬಾಬು ಅವರು ಆರೆಸ್ಸೆಸ್ ಕಾರ್ಯಕ್ರಮಕ್ಕೆ ಬರುವಾಗ ಇಂಥ ಘೋರ ಘಟನೆ ಜರುಗಿದೆ. ಅವರ ಸಾವಿನ ದುಃಖ ಭರಿಸುವ ಶಕ್ತಿ ಅವರ ಕುಟುಂಬಕ್ಕೆ ಸಿಗಲಿ ಎಂದಿದ್ದಾರೆ.

English summary
BBMP councillor Mahesh Babu, representing Lakkasandra ward, and two others were killed in an accident on the Bengaluru-Mysuru highway on Sunday morning, Gowripura.
Please Wait while comments are loading...