ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಎಂ ತವರು ಜಿಲ್ಲೆಯ ಅರಳಿಕಟ್ಟೆ ಹುಂಡಿಯಲ್ಲಿ ಊರಿಗೆ ಊರೇ ಖಾಲಿ!

By Yashaswini
|
Google Oneindia Kannada News

ಮೈಸೂರು, ಜೂನ್ 9: ಅದೇನೋ ಈಗ ನಿರ್ಜನ ಪ್ರದೇಶವೇ ಸರಿ. ಆದರೂ ಅನೇಕರ ಮನಸ್ಸು ಈಗಲೂ ಅಲ್ಲೇ ಸುಳಿದಾಡುತ್ತಿವೆ, ಉಸಿರಾಡುತ್ತವೆ, ಕಣ್ಣಿಗೆ ಕಾಣದಿದ್ದರೂ ಮತ್ತೊಂದು ಮಾನವೀಯ ಮನಸ್ಸಿಗೆ ಸ್ಪಂದಿಸುತ್ತವೆ.

ಅದೇ ಮನೆ, ಗಾಳಿ, ನೀರು, ಪರಿಸರದ ಕೊಂಡಿಯನ್ನು ಕಳಚಿಕೊಳ್ಳಲಾರದೆ ಹೊಯ್ದಾಡುತ್ತಿವೆ. ಇದು ನಂಜನಗೂಡು ತಾಲ್ಲೂಕಿನ ಅರಳಿಕಟ್ಟೆ ಹುಂಡಿ ಗ್ರಾಮದ ಇಂದಿನ ಸ್ಥಿತಿ. ಅಲ್ಲಿ ಜನರಿಲ್ಲ. 10-5 ಮನೆಗಳೂ ಖಾಲಿಯಾಗಿವೆ. ಅಲ್ಲಿ ಯಾರೂ ವಾಸವಾಗಿಲ್ಲ. 5 ವರ್ಷಗಳ ಹಿಂದೆಯೇ ಇಡೀ ಊರಿಗೆ ಊರೇ ವಲಸೆ ಹೋಗಿದೆ ಎನ್ನಲಾಗುತ್ತಿದೆ.[ಪೌರಕಾರ್ಮಿಕನನ್ನು ಮ್ಯಾನ್ ಹೋಲಿಗಿಳಿಸಿದ ಗ್ರಾಪಂ ಅಧ್ಯಕ್ಷೆ ಅಮಾನತು]

ಒಂದು ಉತ್ತಮ ಪರಿಸರದಲ್ಲಿ ಮೂಡಿದ್ದ ಆ ಪುಟ್ಟ ಗ್ರಾಮ ಈಗ ಹಾಳು ಕೊಂಪೆಯಾಗಿದೆ. ಇಲ್ಲಿನ ಐದಾರು ಮನೆಗಳು ನೆಲಸಮವಾಗಿವೆ. ಏಳೆಂಟು ಮನೆಗಳು ಅರೆಬರೆ ಉಳಿದಿವೆ. ಪಂಚಾಯಿತಿಯ ನೀರಿನ ತೊಂಬೆಗಳು, ವಿದ್ಯುತ್ ಸಂಪರ್ಕ ಎಲ್ಲವೂ ಹಾಗೇ ಇದೆ.

ಇಲ್ಲಿದ್ದವರೆಲ್ಲಾ ಈಗ ನಗರ ಪದೇಶದಲ್ಲಿ ವಾಸವಿದ್ದಾರೆ. ಅದರಲ್ಲೂ ಬಹುತೇಕರು ಮೈಸೂರು ನಗರದಲ್ಲಿ ವಾಸಿವಿರುವುದು ಖಚಿತವಾಗಿದೆ. ನಗರದಲ್ಲಿ ಹಣ್ಣು ಮಾರುವುದೇ ಇವರ ಕಾಯಕ. ಅನೇಕರು ದೇವರಾಜ ಮಾರುಕಟ್ಟೆಯಲ್ಲಿ ಹಣ್ಣುಗಳ ವ್ಯಾಪಾರ ಮಾಡುತ್ತಾರಂತೆ.[ಸರಕಾರದಿಂದಲೇ ನಡೆಯುತ್ತಿದೆ ಖಾಸಗಿ ಮಿನರಲ್ ಬಾಟಲ್ ದಂಧೆ!]

ಗ್ರಾಮದ 10 ಮಂದಿಗೆ ಪಡಿತರ

ಗ್ರಾಮದ 10 ಮಂದಿಗೆ ಪಡಿತರ

ನಗರ ಪದೇಶದಲ್ಲಿ ಉದ್ಯೋಗ, ವ್ಯಾಪಾರಕ್ಕೆ ಬಂದಿರುವವರು ಖಾತ್ರಿ ಪಡಿಸಿಕೊಂಡಿದ್ದಾರೆ. ನಿರ್ಜನವಾಗಿರುವ ಗ್ರಾಮಕ್ಕೆ ಭೇಟಿ ನೀಡಿದರೆ ಮನಸ್ಸಿಗೆ ತುಂಬಾ ಬೇಸರ ಆಗುತ್ತದೆ. ಸಮೀಪದ ಗ್ರಾಮಸ್ಥರನ್ನು ಮಾತನಾಡಿಸಿದಾಗ ನಗರ ವ್ಯಾಮೋಹ ಒಂದು ರೀತಿ ಸಮೂಹ ಸನ್ನಿಯ ರೀತಿಯಲ್ಲಿ ಆಗಿದೆ.

ಜೀವನಶೈಲಿ, ಉದ್ಯೋಗದ ಆಕರ್ಷಣೆ

ಜೀವನಶೈಲಿ, ಉದ್ಯೋಗದ ಆಕರ್ಷಣೆ

ಒಬ್ಬೊಬ್ಬರಾಗಿ ಗ್ರಾಮವನ್ನು ತೆರವು ಮಾಡಿದ್ದಾರೆ. ನಗರದ ವ್ಯಾವೋಹ, ಇಲ್ಲಿನ ಜೀವನ ಶೈಲಿ ಹಾಗೂ ಉದ್ಯೋಗ ಅವಕಾಶಗಳು ಅವರನ್ನು ಆಕರ್ಷಿಸಿರಬಹುದು ಎನ್ನುತ್ತಾರೆ ಅಧಿಕಾರಿಗಳು. ಇನ್ನು ತೊರೆಯಲು ಯಾವುದೇ ಅರಳಿಕಟ್ಟೆ ಹುಂಡಿ ಗ್ರಾಮಸ್ಥರು ದೈಹಿಕವಾಗಿ ನಗರದಲ್ಲಿದ್ದರೂ ಅವರ ಮನಸ್ಸು ಗ್ರಾಮದಲ್ಲೇ ಉಳಿದಿದೆ.

ಇದಕ್ಕೆ ಉತ್ತಮ ಉದಾಹರಣೆ ಎಂದರೆ ಅವರು ಇನ್ನೂ ತಮ್ಮ ಪಡಿತರ ಚೀಟಿ ಬದಲಿಸಿಕೊಂಡಿಲ್ಲ. ಈಗಲೂ ಇಲ್ಲಿನ ಹತ್ತು ಕುಟುಂಬದವರು ಸಮೀಪದ ಕಾರ್ಯ ಗ್ರಾಮದಲ್ಲಿ ತಮ್ಮ ಪಡಿತರ ತೆಗೆದುಕೊಳ್ಳುತ್ತಿದ್ದಾರೆ.

ಡಾ.ಕಾ.ರಾಮೇಶ್ವರಪ್ಪ ಭೇಟಿ

ಡಾ.ಕಾ.ರಾಮೇಶ್ವರಪ್ಪ ಭೇಟಿ

ಇತ್ತ ಮಾಧ್ಯಮಗಳಲ್ಲಿ ವರದಿಯಾದ ಸುದ್ದಿಯನ್ನು ಗಮನಿಸಿದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಹಿರಿಯ ಉಪ ನಿರ್ದೇಶಕ ಡಾ.ಕಾ.ರಾಮೇಶ್ವರಪ್ಪ ಅವರು ಅರಳಿಕಟ್ಟೆ ಹುಂಡಿ ಗ್ರಾಮಕ್ಕೆ ಭೇಟಿ ನೀಡಿ ಬಂದಿದ್ದಾರೆ.

ಆ ಗ್ರಾಮದ ಹತ್ತು ಕುಟುಂಬಗಳು ಈಗಲೂ ಪಡಿತರ ಪಡೆಯುತ್ತಿರುವ ಬಗ್ಗೆ ಪರಿಶೀಲನೆ ಮಾಡಿ, ಪ್ರಾಕೃತಿಕ ಕಾರಣ ಇಲ್ಲ. ಪಡಿತರ ಹೊಂದಿರುವವರ ಮೊಬೈಲ್ ನಂಬರ್ ಹುಡುಕಿ ಅವರನ್ನು ಪತ್ತೆ ಹಚ್ಚಿ, ಗ್ರಾಮ ತ್ಯಜಿಸಲು ಸೂಕ್ತ ಕಾರಣ ಏನೆಂದು ಪತ್ತೆ ಹಚ್ಚುತ್ತೇನೆ ಎಂದು ಹೇಳಿದರು.

ಮತದಾರರ ಚೀಟಿಯಲ್ಲೂ ಇದೆ ಹೆಸರು

ಮತದಾರರ ಚೀಟಿಯಲ್ಲೂ ಇದೆ ಹೆಸರು

ಅರಳಿಕಟ್ಟೆ ಹುಂಡಿ ಗ್ರಾಮಸ್ಥರ ಹೆಸರಿನಲ್ಲಿ 10 ಪಡಿತರ ಚೀಟಿಗಳಿವೆ. ಮತದಾರರ ಪಟ್ಟಿಯಿಲ್ಲಿ ಹೆಸರಿದೆ. ಅವರ ಜಮೀನುಗಳು ಅಲ್ಲೇ ಇವೆ. ಆ ಜನರು ಮಾತ್ರ ಅಲ್ಲಿಲ್ಲ, ದೇಹಗಳು ನಗರಗಳಲ್ಲಿವೆ. ಮನಸ್ಸು ಅರಳಿಕಟ್ಟೆ ಹುಂಡಿಯಲ್ಲೇ ಇದ್ದಂತಿದೆ. ಇವರೆಲ್ಲ ಯಾಕೆ ಹೀಗೆ ಎನ್ನುವುದಕ್ಕೆ ಅವರೇ ಉತ್ತರ ಹೇಳಬೇಕು.


ಇನ್ನಾದರೂ ಸಿಎಂ ತವರು ಜಿಲ್ಲೆಯಲ್ಲಿ ಈ ತರಹದ ಘಟನೆಗಳು ಮರುಕಳಿಸದಂತೆ ಗಮನ ಹರಿಸುವಂತೆ ಅಧಿಕಾರಿಗಳು ಎಚ್ಚರ ವಹಿಸುವುದು ಒಳಿತು.

English summary
Aralikatte Hundi, a village in Nanjangud taluk, Mysuru district. People of this village left the place without a reason. Now It is become mystery.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X