ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು-ಮೈಸೂರು ವಿಮಾನ ಸಂಚಾರ ಸ್ಥಗಿತ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ನವೆಂಬರ್ 20 : ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಮತ್ತೆ ನೀರವ ಮೌನ ಆವರಿಸಿದೆ. ತಿಂಗಳ ಹಿಂದೆಯಷ್ಟೇ ಆರಂಭವಾಗಿದ್ದ ಏರ್ ಅಲಯನ್ಸ್ ವಿಮಾನ ಹಾರಾಟವನ್ನು ನಿಲ್ಲಿಸಿದೆ. ಪ್ರಯಾಣಿಕರ ಕೊರತೆಯಿಂದ ವಿಮಾಣ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ.

2015ರ ಸೆಪ್ಟೆಂಬರ್ 3ರಂದು ಅಲೆಯನ್ಸ್ ಏರ್ ಬೆಂಗಳೂರು-ಮೈಸೂರು ನಡುವೆ ವಿಮಾನ ಯಾನ ಸೇವೆಯನ್ನು ಆರಂಭಿಸಿತ್ತು. ಭಾನುವಾರ ಹೊರತುಪಡಿಸಿ ವಾರದಲ್ಲಿ ಆರು ದಿನ ಬೆಂಗಳೂರು-ಮೈಸೂರು ನಡುವೆ ವಿಮಾನ ಸಂಚಾರ ನಡೆಸುತ್ತಿತ್ತು.[ಮೈಸೂರು ಸೇವೆ ಸ್ಥಗಿತಗೊಳಿಸಿದ ಸ್ಪೈಸ್ ಜೆಟ್]

mysuru

ಆದರೆ, ಈಗ ಪ್ರಯಾಣಿಕರ ಕೊರತೆಯ ನೆಪ ಹೇಳಿರುವ ಅಲಯನ್ಸ್ ಏರ್ ವಿಮಾನ ಹಾರಾಟ ರದ್ದುಗೊಳಿಸಿದೆ. ಇದರಿಂದ ಪ್ರವಾಸೋದ್ಯಮದ ಅಭಿವೃದ್ಧಿಗೆ ಹೊಡೆತ ಬಿದ್ದಿದೆ. ಇದುವರೆಗೂ ಮೂರು ವಿಮಾನಯಾನ ಸಂಸ್ಥೆಗಳು ಮೈಸೂರಿಗೆ ವಿಮಾನ ಹಾರಾಟ ಆರಂಭಿಸಿ, ನಂತರ ಸ್ಥಗಿತಗೊಳಿಸಿವೆ. [ಮೈಸೂರಿಗೆ ಬಂತು ಅಲಯನ್ಸ್ ಏರ್ ವಿಮಾನ]

ಕಿಂಗ್ ಫಿಶರ್ ಹಾರಾಟ : 2010 ಅಕ್ಟೋಬರ್ 1ರಂದು ವಿಜಯ್ ಮಲ್ಯ ಒಡೆತನದ ಕಿಂಗ್‍ಫಿಶರ್ ವಿಮಾನ ಮೈಸೂರಿನಿಂದ ಬೆಂಗಳೂರು ಮೂಲಕ ಚೆನ್ನೈಗೆ ಹಾರಾಡುವುದರೊಂದಿಗೆ ಮೈಸೂರಿಗರ ವಿಮಾನ ಹಾರಾಟದ ಕನಸನ್ನು ಉದ್ಯಮಿ ವಿಜಯ್ ಮಲ್ಯ ನನಸು ಮಾಡಿದ್ದರು. [ಹುಬ್ಬಳ್ಳಿ, ಬೆಳಗಾವಿ ವಿಮಾನ ನಿಲ್ದಾಣ ಅಭಿವೃದ್ಧಿ]

ಆದರೆ, ಇದು ಹೆಚ್ಚು ದಿನ ನಡೆಯಲಿಲ್ಲ. ನಷ್ಟದ ಹಿನ್ನಲೆಯಲ್ಲಿ ಸೇವೆಯನ್ನು ಸ್ಥಗಿತಗೊಳಿಸಲಾಯಿತು. 2013ರಲ್ಲಿ ಸ್ಪೈಸ್ ಜೆಟ್ ಮೈಸೂರಿನಿಂದ ಬೆಂಗಳೂರಿಗೆ ವಿಮಾನಸೇವೆ ನೀಡಲು ಮುಂದೆ ಬಂತು. ಆದರೆ ಅದು ಕೂಡ ನಷ್ಟ ಅನುಭವಿಸತೊಡಗಿತು. ಆದ್ದರಿಂದ 2014ರ ಸೆಪ್ಟೆಂಬರ್ 5ರಿಂದ ಅದು ಕೂಡ ಹಾರಾಟ ನಿಲ್ಲಿಸಿತು.

ಪ್ರಯಾಣಿಕರೇ ಇಲ್ಲ : ಮೈಸೂರಿಗೆ ವಿಮಾನ ಬೇಕೇ ಬೇಕು ಎಂಬ ಮಾತುಗಳು ಕೇಳಿ ಬಂದವಾದರೂ ಪ್ರತಿದಿನ ವಿಮಾನದಲ್ಲಿ ಹಾರಾಡುವ ಪ್ರಯಾಣಿಕರ ಸಂಖ್ಯೆಯನ್ನು ಮಾತ್ರ ಯಾರೂ ಕೇಳಲಿಲ್ಲ. ಒಂದಷ್ಟು ಚರ್ಚೆಯ ಬಳಿಕ ಅಲಯನ್ಸ್ ಏರ್ ವಿಮಾನ ಸಂಚಾರಕ್ಕೆ ಒಪ್ಪಿಗೆ ನೀಡಿತ್ತು.

ಸೆಪ್ಟೆಂಬರ್‌ನಲ್ಲಿ ಆರಂಭವಾದ ಅಲಯನ್ಸ್ ಏರ್ ವಿಮಾನ ಸಂಚಾರಕ್ಕೆ ದಸರಾ, ಸಾಲು ಸಾಲು ರಜೆಗಳು ಪ್ರಯಾಣಿಕರನ್ನು ತಂದುಕೊಡಲಿಲ್ಲ. ಇದರ ಹೊಡೆತ ವಿಮಾನಯಾನದ ಮೇಲೆ ಬಿತ್ತು. ಪ್ರತಿದಿನವೂ ಪ್ರಯಾಣಿಕರ ಕೊರತೆಯಿಂದ ನಷ್ಟ ಅನುಭವಿಸಿದ ಏರ್ ಅಲಯನ್ಸ್ ನ.17ರಿಂದ ಸಂಚಾರ ಸ್ಥಗಿತಗೊಳಿಸಿದೆ.

English summary
Mysoreans have bad news. Alliance Air suspended flight services to Mysuru. Alliance Air has begins flight service to Mysuru from Bengaluru on September 3, 2015.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X