ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಸಿಬಿ ಬಲೆಗೆ ಬಿದ್ದ ಚೆಸ್ಕಾಂ ಅಧಿಕಾರಿ

ಕಾರ್ಖಾನೆಯೊಂದರ ವಿದ್ಯುತ್ ಸಂಪರ್ಕ ಉನ್ನತೀಕರಣದ ಹಿನ್ನೆಲೆಯಲ್ಲಿ 28 ಸಾವಿರ ರು. ಲಂಚ ಪಡೆಯುತ್ತಿದ್ದ ವೇಳೆ ನಡೆದ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದ ಅಸಿಸ್ಟಂಟ್ ಇಂಜಿನಿಯರ್ ಕೆ.ಎಸ್. ವೆಂಕಟೇಶ್.

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಮಾರ್ಚ್ 14: ಕಾರ್ಖಾನೆಯೊಂದಕ್ಕೆ ನೀಡಲಾಗಿದ್ದ ವಿದ್ಯುತ್ ಸಂಪರ್ಕದ ಉನ್ನತೀಕರಣಕ್ಕಾಗಿ ಲಂಚ ಪಡೆಯುವ ವೇಳೆ ಚೆಸ್ಕಾಂನ ಅಸಿಸ್ಟಂಟ್ ಇಂಜಿನಿಯರ್ ಕೆ.ಎಸ್. ವೆಂಕಟೇಶ್, ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ಸಿಕ್ಕಿಬಿದ್ದಿದ್ದಾರೆ.

ಲಂಚ ಪಡೆಯುತ್ತಿರುವಾಗಲೇ ಎಸಿಬಿ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ ವೆಂಕಟೇಶ್ ಅವರನ್ನು ನೇರವಾಗಿ ಹಿಡಿಯಲಾಗಿದೆ ಎಂದು ಎಸಿಬಿ ಪ್ರಕಟಣೆಯಲ್ಲಿ ತಿಳಿಸಿದೆ.[ಪತ್ನಿಯನ್ನು ಕೊಲೆಗೈದು ನೇಣು ಹಾಕಿದ ಭೂಪ]

ACB trapped Chescom official in a bribery case in Mysuru

ಹಿನ್ನೆಲೆ: ಮೈಸೂರು ನಗರದ ಖಾಸಗಿ ವಿದ್ಯುತ್ ಗುತ್ತಿಗೆದಾರರೊಬ್ಬರು ಚೆಸ್ಕಾಂ ಹೂಟಗಳ್ಳಿ ಸೆಕ್ಷನ್ ವ್ಯಾಪ್ತಿಗೆ ಬರುವ ಕಾರ್ಖಾನೆಯೊಂದಕ್ಕೆ ನೀಡಲಾಗಿದ್ದ ವಿದ್ಯುತ್ ಸಂಪರ್ಕವನ್ನು 15 ಎಚ್ ಪಿಯಿಂದ 45 ಎಚ್ ಪಿಗೆ ಹೆಚ್ಚಿಸುವಂತೆ, ಹೂಟಗಳ್ಳಿ ಸೆಕ್ಷನ್ ವ್ಯಾಪ್ತಿಯ ಚೆಸ್ಕಾಂ ಕಚೇರಿಗೆ ಅರ್ಜಿ ಸಲ್ಲಿಸಿದ್ದರು.[ಸಚಿವರ ಪುತ್ರ ಸುನಿಲ್ ಬೋಸ್ ವಿಚಾರಣೆ ಮಾ.21ಕ್ಕೆ ಮುಂದೂಡಿಕೆ]

ಇವರ ಅರ್ಜಿಯನ್ನು ಪರಿಶೀಲಿಸಿದ ಸೆಕ್ಷನ್ ನ ಅಸಿಸ್ಟಂಟ್ ಇಂಜಿನಿಯರ್ ವೆಂಕಟೇಶ್, ನಿರ್ದಿಷ್ಟ ಕಾರ್ಯಕ್ಕೆ 30 ಸಾವಿರ ರು. ಲಂಚ ಕೇಳಿದ್ದರು. ಆನಂತರ 28 ಸಾವಿರ ರು. ನೀಡುವಂತೆ ತಿಳಿಸಿದ್ದರು.[ನಂಜನಗೂಡು: ನಾಮಪತ್ರ ಸಲ್ಲಿಕೆಗೆ ಮಾರ್ಚ್ 21 ಕಡೆಯ ದಿನಾಂಕ]

ಈ ಹಿನ್ನೆಲೆಯಲ್ಲಿ, ಗುತ್ತಿಗೆದಾರರು ವೆಂಕಟೇಶ್ ವಿರುದ್ಧ ಎಸಿಬಿಗೆ ದೂರು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಜಾಗೃತರಾದ ಎಸಿಬಿ ಅಧಿಕಾರಿಗಳು, ವೆಂಕಟೇಶ್ ಅವರು ಲಂಚ ಪಡೆಯುವ ವೇಳೆ ದಾಳಿ ನಡೆಸಿ ವೆಂಕಟೇಶ್ ಅವರನ್ನು ಬಂಧಿಸಿದ್ದಾರೆ.

English summary
Anti Corruption Bureau officials trapped Chescom's assistant engineer K.S. Venkatesh, while recieving bribe from a electricity contractor on March 14th, 2017.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X