ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ಚಿಕನ್ ಸಾರಿನ ಪಾತ್ರೆಯಲ್ಲಿ ಬಿದ್ದು ವ್ಯಕ್ತಿ ಸಾವು

ಚಿಕನ್ ಸಾರಿನ ಪಾತ್ರೆಯಲ್ಲಿ ಬಿದ್ದು, ಚಿಕಿತ್ಸೆ ಫಲಕಾರಿಯಾಗದೆ ವ್ಯಕ್ತಿಯೊಬ್ಬ ಸಾವಿಗೀಡಾದ ಘಟನೆ ಮೈಸೂರಿನ ಉದಯಗಿರಿಯಲ್ಲಿ ನಡೆದಿದೆ.

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಮಾರ್ಚ್ 23 : ಚಿಕನ್ ಸಾರಿನ ಪಾತ್ರೆಯಲ್ಲಿ ಆಕಸ್ಮಿಕವಾಗಿ ಬಿದ್ದು ಗಾಯಗೊಂಡಿದ್ದ ವ್ಯಕ್ತಿ ಸಾವನ್ನಪ್ಪಿದ ಘಟನೆ ಮೈಸೂರಿನ ಉದಯಗಿರಿಯಲ್ಲಿ ನಡೆದಿದೆ.

ಮೃತನನ್ನು ರಮೇಶ್ (21) ಎಂದು ಗುರುತಿಸಲಾಗಿದೆ. ಈತ 15 ದಿನಗಳ ಹಿಂದೆ ಕಾರ್ಯಕ್ರಮವೊಂದರಲ್ಲಿ ಅಡುಗೆ ಸಹಾಯಕನಾಗಿ ಕೆಲಸ ಮಾಡುತ್ತಿದ್ದ. ಚಿಕನ್ ಸಾರಿನ ಪಾತ್ರೆಯನ್ನು ಸಾಗಿಸುವಾಗ ಆಕಸ್ಮಿಕವಾಗಿ ಜಾರಿ ಪಾತ್ರೆಯಲ್ಲೇ ಬಿದ್ದು ಗಾಯಗೊಂಡು ಕೆ.ಆರ್.ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದ ಎನ್ನಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಮುಂಜಾನೆ ಸಾವನ್ನಪ್ಪಿದ್ದಾನೆ.[ಮೈಸೂರಿನ ಡಿ.ಬಿ.ಕುಪ್ಪೆ ಆರೋಗ್ಯ ಕೇಂದ್ರದ ಔಷಧಿ ವಾಪಸ್!]

A man who fell into a chicken soup pot dies

ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಹುಣಸೂರು ಜೋಡಿ ಕೊಲೆ: ನಾಲ್ವರಿಗೆ ಜಾಮೀನು 2008ರಲ್ಲಿ ಹುಣಸೂರಿನಲ್ಲಿ ನಡೆದ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಫೆ.26, 2016ರಂದು ಮೈಸೂರು ನ್ಯಾಯಾಲಯ 8 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಇದೀಗ ಆರು ಆರೋಪಿಗಳಿಗೆ ಹೈಕೋರ್ಟ್ ಜಾಮೀನು ದೊರೆತರೂ, ಇಬ್ಬರು ಆರೋಪಿಗಳಿಗೆ ಜಾಮೀನು ತಡೆಹಿಡಿಯಲಾಗಿದೆ.

ಹುಣಸೂರು ಜೋಡಿಕೊಲೆಗೆ ಸಂಬಂಧಿಸಿದಂತೆ ಅವ್ವಮಾದೇಶ ಮತ್ತು ಆತನ ಸಹಚರರಿಗೆ ಮೈಸೂರು ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು. ಆರೋಪಿಗಳು ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಮಾದೇಶ ಮತ್ತು ಮಂಜುವನ್ನು ಹೊರತು ಪಡಿಸಿ ಇನ್ನುಳಿದ ಆರೋಪಿಗಳಿಗೆ ದ್ವಿಸದಸ್ಯಪೀಠ ಜಾಮೀನು ನೀಡಿದೆ.[ವಂಚನೆ ಪ್ರಕರಣ: ಇನ್ನಿಬ್ಬರು ಆರೋಪಿಗಳ ಬಂಧನ]

ಮೈಸೂರಿನಲ್ಲಿ ಕಳೆದ ಕೆಲವು ತಿಂಗಳುಗಳ ಹಿಂದೆ ನಡೆದ ರೌಡಿಶೀಟರ್ ದೇವು ಕೊಲೆ ಪ್ರಕರಣದಲ್ಲಿ ಕಾಳ ಅಲಿಯಾಸ್ ಕಾಳಪ್ಪ ಮತ್ತು ಚಂದ್ರು ಆರೋಪಿಗಳಾಗಿರುವ ಹಿನ್ನೆಲೆಯಲ್ಲಿ ನ್ಯಾಯಾಲಯ ಅವರ ಬಿಡುಗಡೆ ಸಾಧ್ಯವಿಲ್ಲವೆಂದು ತಿಳಿಸಿದೆ.

English summary
A man who fell into a chicken soup pot dies. The incident took place in Udayagiri region Mysuru
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X