ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು: ಕೆಲಸದ ಒತ್ತಡದಿಂದ ತಹಶೀಲ್ದಾರ್ ಆತ್ಮಹತ್ಯೆ

By Yashaswini
|
Google Oneindia Kannada News

ಮೈಸೂರು, ಜುಲೈ 19 : ಸಿಎಂ ತವರು ಜಿಲ್ಲೆಯಲ್ಲೂ ಅಧಿಕಾರಿಗಳ ಮೇಲಿನ ದೌರ್ಜನ್ಯ ಮುಂದುವರೆದಿದೆ. ಈ ಹಿನ್ನೆಲೆ ಕೆಲಸದ ಒತ್ತಡದ ಕಾರಣ ಮೈಸೂರು ಜಿಲ್ಲೆ ಟಿ. ನರಸೀಪುರ ತಾಲ್ಲೂಕಿನ ತಹಶೀಲ್ದಾರ್ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಇಂದು(ಜುಲೈ 19) ನಡೆದಿದೆ.

ತಹಶೀಲ್ದಾರ್ ಬಿ.ಶಂಕರಯ್ಯ(58) ನೇಣು ಬಿಗಿದು ಆತ್ಮಹತ್ಯೆಗೆ ಶರಣಾದಾತ. ತಿ.ನರಸೀಪುರ ಪಟ್ಟಣದಲ್ಲಿರುವ ತಮ್ಮ ವಸತಿ ಗೃಹದಲ್ಲಿ ಬಿ. ಶಂಕರಯ್ಯ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೂಲತಃ ಮಂಡ್ಯ ಜಿಲ್ಲೆಯವರಾದ ಶಂಕರಯ್ಯ ಕಳೆದ 1 ವರ್ಷದ ಹಿಂದೆ ಟಿ.ನರಸೀಪುರ ತಾಲೂಕು ಕಚೇರಿಗೆ ತಹಶಿಲ್ದಾರ್ ಆಗಿ ವರ್ಗಾವಣೆ ಆಗಿದ್ದರು. ಇವರಿಗೆ ಹೃದಯ ಸಂಬಂಧಿ ಕಾಯಿಲೆಯಿದ್ದಿದ್ದರಿಂದ ಶಸ್ತ್ರಚಿಕಿತ್ಸೆ ಸಹ ಆಗಿತ್ತು. ಕುಟುಂಬ ಮಂಡ್ಯದಲ್ಲಿ ವಾಸವಿದ್ದು, ಮಂಡ್ಯದಿಂದ ಟಿ.ನರಸೀಪುರಕ್ಕೆ ಬಂದು ಹೋಗುತ್ತಿದ್ದರು.

A government worker commits suicide in Mysuru

ಇತ್ತ ಶಂಕರಯ್ಯ ಕಳೆದ 2 ತಿಂಗಳ ಹಿಂದೆ ವರ್ಗಾವಣೆ ಮಾಡುವಂತೆ ಕೇಳುತ್ತಿದ್ದರು. ಇಲ್ಲಿ ಕೆಲಸದ ಒತ್ತಡ ಇದೆ, ಜೊತೆಗೆ ಆರೋಗ್ಯ ಸಮಸ್ಯೆ ಇದೆ ಎಂದು ತಿಳಿಸಿದ್ದರು. ಆದರೂ ವರ್ಗಾವಣೆ ಸಿಕ್ಕಿರಲಿಲ್ಲ. ಜೊತೆಗೆ ಕುಟುಂಬದ ಸಮಸ್ಯೆಯಿಂದ ಜರ್ಜರಿತರಾಗಿದ್ದ ಶಂಕರಯ್ಯ ನಿನ್ನೆ ರಾತ್ರಿ ಟಿ.ನರಸೀಪುರದ ತಹಶಿಲ್ದಾರ್ ಗೆ ನೀಡುವ ವಸತಿ ಗೃಹದಲ್ಲಿ ತಂಗಿದ್ದು, ರಾತ್ರಿಯೇ ಅಲ್ಲಿಯೇ ನೇಣಿಗೆ ಶರಣಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಸಂಬಂಧ ಸ್ಥಳಕ್ಕೆ ಧಾವಿಸಿದ್ದ ಟಿ.ನರಸೀಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಮಹದೇವಪ್ಪರಿಂದ ಸಂತಾಪ
ತಿ.ನರಸೀಪುರ ತಹಶೀಲ್ದಾರ್ ಶಂಕರಯ್ಯ ಅವರ ಸಾವು ತುಂಬಾ ದುರದೃಷ್ಟಕರ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಸಂತಾಪ ಸೂಚಿಸಿದ್ದಾರೆ. ಶಂಕರಯ್ಯ ಅವರು ತಮ್ಮ ನಿವಾಸದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸಂಬಂಧ ಸಂತಾಪ ಸೂಚಿಸಿರುವ ಅವರು. ಶಂಕರಯ್ಯ ಅವರ ಸಾವಿನಿಂದ ಅವರ ಕುಟುಂಬದವರಿಗೆ, ಹಾಗೂ ಅವರ ಅಪಾರ ಬಂಧು, ಬಳಗದವರಿಗೆ ಉಂಟಾಗಿರುವ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಸಂತಾಪ ಸೂಚಿಸಿದ್ದಾರೆ.

English summary
A government worker in Mysuru has committed suicide on July 19th by hanging himself. T.Narasipur police have started investigation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X