ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜರ್ಮನಿ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ, ಮೂವರು ಶಂಕಿತರ ವಿಚಾರಣೆ

ಮೈಸೂರಿನ ಚಾಮುಂಡಿ ಬೆಟ್ಟದ ಬಳಿ ಈಚೆಗೆ ಜರ್ಮನಿ ಮಹಿಳೆ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮೂವರು ಶಂಕಿತರನ್ನು ಕೆ.ಆರ್.ಠಾಣೆ ಪೊಲೀಸರು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದ್ದಾರೆ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಫೆಬ್ರವರಿ 22: ಮೈಸೂರಿನ ಚಾಮುಂಡಿ ಬೆಟ್ಟದಿಂದ ಇಳಿಯುವಾಗ ಈಚೆಗೆ ಅಪರಿಚಿತನಿಂದ ಜರ್ಮನಿ ಮಹಿಳೆ ಮೇಲೆ ನಡೆದಿದ್ದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಕೆಆರ್ ಠಾಣೆ ಪೊಲೀಸರು ಮೂವರು ಶಂಕಿತರನ್ನು ವಶಕ್ಕೆ ಪಡೆದಿದ್ದಾರೆ. ಬೆಟ್ಟದ ತಪ್ಪಲಿನಲ್ಲಿ ಅನುಮಾನಾಸ್ಪದವಾಗಿ ಈ ಮೂವರು ಅಲೆದಾಡುತ್ತಿದ್ದರಿಂದ ವಶಕ್ಕೆ ಪಡೆಯಲಾಗಿದೆ.

ಜರ್ಮನಿ ಮೂಲದ ಇಪ್ಪತ್ತೇಳು ವರ್ಷದ ಮಹಿಳೆ ಜನ್ನಿಫರ್ ಎಂಬಾಕೆ ಮೇಲೆ ಕಳೆದ ಸೋಮವಾರ ರಾತ್ರಿ ಆಗಂತುಕನೊಬ್ಬ ಲೈಂಗಿಕ ದೌರ್ಜನ್ಯ ನಡೆಸಿ, ಎರಡು ಸಾವಿರ ರುಪಾಯಿ ನಗದು ಕಸಿದು ಪರಾರಿಯಾಗಿದ್ದ. ಆಕೆ ದೇವಿಯ ದರ್ಶನಕ್ಕಾಗಿ ಚಾಮುಂಡಿ ಬೆಟ್ಟಕ್ಕೆ ತೆರಳಿದ್ದವರು, ಅಲ್ಲಿಂದ ವಾಪಸ್ ಮೆಟ್ಟಿಲ ಮೂಲಕ ಕೆಳಗೆ ಇಳಿಯುವಾಗ ಈ ದುರ್ಘಟನೆ ಸಂಭವಿಸಿತ್ತು. ಆ ಆಗಂತುಕ ಆಕೆಯ ಎದೆ ಹಾಗೂ ಮುಖದ ಭಾಗಕ್ಕೆ ಕಚ್ಚಿದ್ದ.[ಮೈಸೂರಿನಲ್ಲಿ ಜರ್ಮನಿ ಮಹಿಳೆಯ ಮುಖ, ಎದೆ ಕಚ್ಚಿ, ಪರಾರಿಯಾದ ಕಾಮುಕ]

3 suspects arrested in German woman sexual assault case in Mysuru

ಮೂರು ತಿಂಗಳ ಪ್ರವಾಸಕ್ಕಾಗಿ ಭಾರತಕ್ಕೆ ಬಂದಿದ್ದ ಆಕೆ, ಆ ನಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆರೋಪಿ ಪತ್ತೆಗಾಗಿ ವಿಶೇಷ ತಂಡವೊಂದನ್ನು ರಚಿಸಲಾಗಿತ್ತು. ಈ ಪ್ರಕರಣದ ಬಗ್ಗೆ ಕಾನೂನು-ಸುವ್ಯವಸ್ಥೆ ವಿಭಾಗದ ಡಿಸಿಪಿ ಡಾ.ಎಚ್.ಟಿ.ಶೇಖರ್ ಹೇಳಿಕೆ ಕೂಡ ನೀಡಿದ್ದರು.

English summary
3 suspects arrested by KR police in German woman Jennifer sexual assault case. She sexually assaulted by an unknown in Mysuru Chamundi hills.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X