ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

10ನೇ ಮಹಾಕುಂಭಮೇಳದಿಂದ ಕಳೆಗಟ್ಟಿದ ಟಿ. ನರಸೀಪುರ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು,ಫೆಬ್ರವರಿ,20: ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ 10ನೇ ವರ್ಷದ ಮಹಾಕುಂಭಮೇಳ ಶನಿವಾರ ಟಿ. ನರಸೀಪುರದ ಶ್ರೀ ಅಗಸ್ತೇಶ್ವರಸ್ವಾಮಿ ದೇವಾಲಯದಲ್ಲಿ ಆದಿಚುಂಚನಗಿರಿ ಸಂಸ್ಥಾನ ಮಠದ ಶ್ರೀಸೋಮನಾಥಸ್ವಾಮೀಜಿ ಸಮ್ಮುಖದಲ್ಲಿ ವಿವಿಧ ಪೂಜಾ ಕೈಂಕರ್ಯದೊಂದಿಗೆ ಶನಿವಾರ ಆರಂಭಗೊಂಡಿದೆ.

ಮಹಾಕುಂಭಮೇಳವು ಫೆಬ್ರವರಿ 22ರವರೆಗೆ ಮುಂದುವರೆಯಲಿದ್ದು, ಹದಿನೈದು ಲಕ್ಷಕ್ಕೂ ಹೆಚ್ಚು ಭಕ್ತಾಧಿಗಳು ಹಾಗೂ 400ಕ್ಕೂ ಸಾಧು ಸಂತರು ಆಗಮಿಸುವ ಈ ಮಹಾಕುಂಭಮೇಳದ ಹಲವು ಪೂಜಾ ಕೈಂಕರ್ಯವು ಶ್ರೀ ನೀಲಕಂಠದೀಕ್ಷೀತ್ ನೇತೃತ್ವದಲ್ಲಿ ನಡೆಯಿತು.[ಮೈಸೂರಲ್ಲಿ 10ನೇ ಮಹಾಕುಂಭಮೇಳ]

Mysuru

ಶ್ರೀ ನೀಲಕಂಠದೀಕ್ಷೀತ್ ಅವರ ಉಪಸ್ಥಿತಿಯಲ್ಲಿ ಬೆಳಿಗ್ಗೆ 10ಕ್ಕೆ ಮಹಾಸಂಕಲ್ಪ, ಗಣಪತಿ ಪೂಜೆ, ಅನುಜ್ಞೆ, ಕಳಸಾ ಸ್ಥಾಪನೆ, ಮಹಾಗಣಪತಿ ಹೋಮ, ಮೂಲದೇವರ ಪ್ರಾರ್ಥನೆ, ನವಗ್ರಹ ಹೋಮ, ಅಭಿಷೇಕ, ಪೂರ್ಣಾಹುತಿ ಹಾಗೂ ಮಹಾಮಂಗಳಾರತಿಯನ್ನು ನೇರವೇರಿಸಲಾಯಿತು. ಮಧ್ಯಾಹ್ನ 12 ಗಂಟೆಗೆ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಪ್ರಧಾನ ಆರ್ಚಕ ಕುಮಾರ್ ದೀಕ್ಷಿತ್, ಗಣೇಶ್ ದೀಕ್ಷಿತ್, ಸೋಮ ದೀಕ್ಷಿತ್, ಪಾರುಪತ್ತೇಗಾರ ಟಿ.ಎನ್.ಕುಮಾರ್, ಸಂಪತ್ ಕುಮಾರ್ ಮತ್ತಿತರರು ಹಾಜರಿದ್ದರು.[ಪ್ರಾಣ ಬಿಟ್ಟೆವು, ಹಾಡಿ ಬಿಡೋದಿಲ್ಲ: ಕರಡಿಬೊಕ್ಕೆ ಗಿರಿಜನರ ಕಣ್ಣೀರು]

10ನೇ ಮಹಾ ಕುಂಭಮೇಳದ ಕಾರ್ಯಕ್ರಮಗಳು:

* ಫೆಬ್ರವರಿ 21ರ ಸಂಜೆ 7-30 ಗಂಟೆಗೆ ಕುಂಭಮೇಳದಲ್ಲಿ ಗಂಗಾಪೂಜೆಯೊಂದಿಗೆ ದೀಪಾರತಿ.

* ಫೆಬ್ರವರಿ 20, 21 ಹಾಗೂ 22 ರಂದು ಪ್ರತಿದಿನ ಬೆಳಿಗ್ಗೆ ಸಂಕಲ್ಪ, ಹೋಮ ಅಗಸ್ತ್ಯೇಶ್ವರಸ್ವಾಮಿ ದೇವಸ್ಥಾನದಲ್ಲಿ ರುದ್ರಾಭಿಷೇಕ ಪೂಜೆ

* ಫೆ. 20 ರಂದು ಬೆಳಿಗ್ಗೆ 9 ಗಂಟೆಗೆ ಶ್ರೀ ಅಗಸ್ತ್ಯೇಶ್ವರಸ್ವಾಮಿ ಸನ್ನಿಧಿಯಲ್ಲಿ ಅನುಜ್ಞೆ, ಪುಣ್ಯಾಹ, ಗಣಹೋಮ, ಪೂರ್ಣಾಹುತಿ, ಅಭಿಷೇಕ, ಮಹಾಮಂಗಳಾರತಿ ಮತ್ತು ಧ್ವಜಾರೋಹಣ. [ಮೈಸೂರು : ವಾಜಪೇಯಿ ವಸತಿ ಯೋಜನೆಗೆ ಅರ್ಜಿ ಆಹ್ವಾನ]

* ಸಂಜೆ 5 ಗಂಟೆಗೆ ಧರ್ಮಸಭೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ

* ಫೆ 21 ರಂದು ಬೆಳಿಗ್ಗೆ ಪುಣ್ಯಾಹ, ನವಗ್ರಹ ಹೋಮ, ಸುದರ್ಶನ ಹೋಮ, ಬೆಳಿಗ್ಗೆ 11 ಗಂಟೆಗೆ ಧರ್ಮ ಸಭೆ, ಸಂಜೆ 4 ಗಂಟೆಗೆ ಮಹಾತ್ಮರ, ಸಂತರ ಹಾಗೂ ಮಹಾಮಂಡಲೇಶ್ವರರ ಸಂಗಮಕ್ಷೇತ್ರ ಪ್ರವೇಶ, ಗುಂಜಾನರಸಿಂಹಸ್ವಾಮಿ ದೇವಸ್ಥಾನದಿಂದ ತಿ.ನರಸಿಪುರ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ. ಸಂಜೆ 6 ಗಂಟೆಗೆ ಶ್ರೀ ರುದ್ರಹೋಮ, ಪೂರ್ಣಾಹುತಿ, ರಾತ್ರಿ 7 ಗಂಟೆಗೆ ಗಂಗಾಪೂಜೆ, ದೀಪಾರತಿ

* ಫೆಬ್ರವರಿ 22 ರಂದು ಬೆಳಿಗ್ಗೆ ಚಂಡಿ ಹೋಮ, ಪೂರ್ಣಾಹುತಿ, ಕುಂಭೋದ್ವಾಸನ ಹಾಗೂ ಏಳು ಪವಿತ್ರ ನದಿಗಳಿಂದ ತಂದ ತೀರ್ಥಗಳನ್ನು ತ್ರಿವೇಣಿಸಂಗಮದಲ್ಲಿ ಸಂಯೋಜಿಸುವುದು, ಪುಣ್ಯಸ್ನಾನ ಹಾಗೂ ಧರ್ಮ ಸಭೆ.[ಜನಪದ ಸೊಗಡಿನಿಂದ ಮಿಂಚಿದ ಸುತ್ತೂರು ರಥೋತ್ಸವ]

* ಈ ಬಾರಿಯ ಕುಂಭಮೇಳದಲ್ಲಿ ಶ್ರೀ ಸುತ್ತೂರು ವೀರಸಿಂಹಾಸನ ಮಹಾಸಂಸ್ಥಾನ ಮಠದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು, ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಜಗದ್ಗುರು ಶ್ರೀ ನಿರ್ಮಲಾನಂದನಾಥ ಮಹಾಸ್ವಾಮಿಗಳು ಸೇರಿದಂತೆ ಹಲವಾರು ಗಣ್ಯರು ಆಗಮಿಸುವರು.

English summary
1Oth Mahakumbh Mela started in t Narsipur, Mysuru, on Saturday, February, 20th. 10th Mahakumbh continues to February 22nd. 15 lakh devotees and more than 400 saints from across the country will participate in this Kumbh Mela.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X