ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ಚಾಮರಾಜೇಂದ್ರ ಮೃಗಾಲಯಕ್ಕೆ ಹೊಸ ಅತಿಥಿ

By ಬಿ.ಎಂ ಲವಕುಮಾರ್
|
Google Oneindia Kannada News

ಮೈಸೂರು, ಡಿಸೆಂಬರ್, 12: ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿ ಸಂಭ್ರಮ ಮನೆ ಮಾಡಿದೆ. ಅಲ್ಲೊಂದು ಪುಟ್ಟ ಅತಿಥಿ ಈಗಾತನೇ ಆಗಮಿಸಿದೆ. ಆ ಅತಿಥಿ ಮೃಗಾಲಯಕ್ಕೆ ತೆರಳುವ ಪ್ರವಾಸಿಗರನ್ನು ತನ್ನ ಮುದ್ದಾದ ಮೊಗದಿಂದ ತನ್ನತ್ತ ಸೆಳೆಯುತ್ತಿದೆ.

ಕಂಬಂದಂತಹ ಕಾಲುಗಳು, ಆಕಾಶವನ್ನು ಚುಂಬಿಸುತ್ತಿರುವಂತೆ ಭಾಸವಾಗುವ ಉದ್ದನೆಯ ಕತ್ತು, ದೇಹದ ಮೇಲೆಲ್ಲಾ ಮಚ್ಚೆಯಂತೆ ಆವರಿಸಿರುವ ಕಂದು ಹಾಗೂ ಬಿಳಿ ಮಿಶ್ರಿತ ಕ್ರೀಮ್ ಬಣ್ಣದಲ್ಲಿ ಕಾಣುವ ಬೊಟ್ಟುಗಳು, ಗೊತ್ತಾಯ್ತ ಚಾಮರಾಜೇಂದ್ರ ಮೃಗಾಲಯದಲ್ಲಿ ಈಗಾತನೇ ಹುಟ್ಟಿರುವ ಆ ಹೊಸ ಪುಟ್ಟ ಅತಿಥಿ ಯಾರೆಂದು?[ಮೂಕ ಜೀವಗಳಿಗೆ ನೀರುಣಿಸುವ ಮೈಸೂರು ಭಗೀರಥರು...]

10 year old Khushi giraffe gave birth to male giraffe in Sri Chamarajendra zoo, Mysuru

ಮೈಸೂರು ಚಾಮರಾಜೇಂದ್ರ ಮೃಗಾಲಯದಲ್ಲಿ ಹೆಣ್ಣು ಜಿರಾಫೆ ಖುಷಿ ಹಾಗೂ ಕೃಷರಾಜ ಗಂಡು ಜಿರಾಫೆಗೆ ಈಗ ಮಗ ಹುಟ್ಟಿದ್ದಾನೆ. ಅವನ ಲಾಲನೆ ಪಾಲನೆಯಲ್ಲಿ ಖುಷಿ ತೊಡಗಿಸಿಕೊಂಡಿದ್ದಾಳೆ. ಮೃಗಾಲಯದಲ್ಲಿ 2013ರ ನಂತರ ಜಿರಾಫೆ ಮರಿ ಜನಿಸಿರುವುದು ಸಂಭ್ರಮ ತಂದಿದೆ.

ಅನುಭವ್ ಮತ್ತು ಸುಜಾತ ಜಿರಾಫೆ 2005ರಲ್ಲಿ ಮಕ್ಕಳಿಗೆ ಜನ್ಮ ನೀಡಿದ್ದವು. 2007ರಲ್ಲಿ ಲಕ್ನೋ ಮೃಗಾಲಯದಿಂದ ಸ್ವೀಕೃತವಾಗಿರುವ, 10 ವರ್ಷ ವಯಸ್ಸಿನ ಖುಷಿ ಹಾಗೂ ಈ ಮೃಗಾಲಯದಲ್ಲೇ ಇರುವ ಹೆನ್ರಿ ಹಾಗೂ ಹನಿ ಜಿರಾಫೆಗಳ ಮಗನೇ ಕೃಷರಾಜ ಗಂಡು ಜಿರಾಫೆ. ಇವೆರಡು ಹೊಸ ಅತಿಥಿಯ ತಂದೆ ತಾಯಿ.[ಮುಚ್ಚುವ ಭೀತಿಯಲ್ಲಿ ರಾಜ್ಯದ ಮೂರು ಮೃಗಾಲಯ]

10 year old Khushi giraffe gave birth to male giraffe in Sri Chamarajendra zoo, Mysuru

ಖುಷಿ ತನ್ನ ಮರಿಗೆ ಹಾಲುಣಿಸುವುದರ ಮೂಲಕ ಚೆನ್ನಾಗಿ ಆರೈಕೆ ಮಾಡುತ್ತಿದ್ದು, ತನ್ನ ಮರಿಯನ್ನು ಪೋಷಿಸುತ್ತಿದೆ. ಮರಿ ಹಾಗೂ ತಾಯಿ ಖುಷಿಯನ್ನು ಆರೈಕೆ ಹಾಗೂ ಸುರಕ್ಷತೆಯ ಹಿತದೃಷ್ಟಿಯಿಂದ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಮೃಗಾಲಯದ ಪಶುವೈದ್ಯರು ಕೈಗೊಂಡಿದ್ದಾರೆ.[ಮೈಸೂರು ಮೃಗಾಲಯದಲ್ಲಿ ಶೀಘ್ರವೇ ವನ್ಯಜೀವಿ ಸಫಾರಿ]

ಜಿರಾಫೆ ಮರಿಗೆ ಯಾವುದೇ ರೀತಿಯಲ್ಲೂ ಅಡಚಣೆಗಳು ಬಾರದಿರಲು ಹಾಗೂ ಸುರಕ್ಷತೆಗಾಗಿ ವೀಕ್ಷಕರ ಪ್ರದರ್ಶನವನ್ನು ನಿಷೇಧಿಸಲಾಗಿದೆ. ಪ್ರಸ್ತುತ ಮೃಗಾಲಯದಲ್ಲಿ ಹೊಸ ಗಂಡು ಮರಿ, 2 ಗಂಡು ಜಿರಾಫೆ ಹಾಗೂ 4 ಹೆಣ್ಣು ಜಿರಾಫೆಗಳಿವೆ ಎಂದು ಮೃಗಾಲಯ ಅಧಿಕಾರಿಗಳು ತಿಳಿಸಿದ್ದಾರೆ.

English summary
10 year old Khushi and Krishnaraja giraffe gave birth to male giraffe in Sri Chamarajendra zoo, Mysuru. on Friday, December 11th
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X