ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾರುಖ್ ಚಿತ್ರದಲ್ಲಿ ಪಾಕ್ ನಟಿ, ಶಿವಸೇನೆ ಹುಲಿಗಳ ಘರ್ಜನೆ

By Mahesh
|
Google Oneindia Kannada News

ಮುಂಬೈ, ಅ.21; ಪಾಕಿಸ್ತಾನ ಮೂಲದ ಕಲಾವಿದರು, ನಟ, ನಟಿಯರು, ಕ್ರಿಕೆಟರ್ಸ್ ಮುಂಬೈ ನೆಲಕ್ಕೆ ಕಾಲಿಡಬಾರದು, ಶಾರುಖ್ ಖಾನ್ ಚಿತ್ರವಿರಲಿ, ಯಾರದ್ದೇ ಆಯೋಜನೆಯಿರಲಿ, ನಾವು ಬಗ್ಗುವುದಿಲ್ಲ ಎಂದು ಶಿವಸೇನೆಯ ಹುಲಿಗಳು ಘರ್ಜಿಸಿದ್ದಾರೆ.

ಘಜಲ್ ಗಾಯಕ ಗುಲಾಂ ಅಲಿ ಕಾರ್ಯಕ್ರಮಕ್ಕೆ ಅಡ್ಡಿ ಪಡಿಸಿದ್ದ ಶಿವಸೇನಾ ಕಾರ್ಯಕರ್ತರು ಇತ್ತೀಚೆಗೆ ಬಿಸಿಸಿಐ ಕಚೇರಿಗೆ ದಾಳಿ ಮಾಡಿದ್ದರು. ಭಾರತ ಹಾಗೂ ಪಾಕಿಸ್ತಾನ ನಡುವೆ ಕ್ರಿಕೆಟ್ ಟೂರ್ನಿ ಆಯೋಜನೆಗೆ ಮುಂದಾಗದಂತೆ ಬಿಸಿಸಿಐ ಅಧ್ಯಕ್ಷ ಶಶಾಂಕ್ ಮನೋಹರ್ ಗೆ ಎಚ್ಚರಿಕೆ ನೀಡಿದ್ದರು.

ನಂತರ ಪ್ರಸ್ತುತ ಭಾರತ ಹಾಗೂ ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪಾಕಿಸ್ತಾನ ಅಂಪೈರ್ ಅಲೀಂ ದಾರ್ ರನ್ನು ಕೂಡಾ ಉಳಿದ ಪಂದ್ಯಗಳಿಂದ ಕೈಬಿಡಲಾಯಿತು. ಈಗ ಮತ್ತೊಮ್ಮೆ ಶಿವಸೇನಾ ಕಾರ್ಯಕರ್ತರು ಗುಡುಗಿದ್ದಾರೆ.

Won't allow Pakistani actors to step on Maha soil: Shiv Sena

ಶಿವಸೇನಾ ಚಿತ್ರಪಟ್ ಸೇನಾ ವಿಭಾಗದ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಬರ್ದಾಪುರ್ಕರ್ ಅವರು ಮಾತನಾಡಿ, ಪಾಕಿಸ್ತಾನದ ನಟಿಯರನ್ನು ಬಾಲಿವುಡ್ ಮಂದಿ ಕರೆಸಿಕೊಳ್ಳುವುದು ಅವಮಾನ, ಕ್ರಿಕೆಟರ್ಸ್, ನಟಿಯರು ಮಹಾರಾಷ್ಟ್ರದ ನೆಲಕ್ಕೆ ಕಾಲಿಡಂತೆ ಮಾಡುತ್ತೇವೆ ಎಂದಿದ್ದಾರೆ.

ಶಾರುಖ್ ಖಾನ್ ಅಭಿನಯದ 'ರಾಯೀಸ್' ಚಿತ್ರದಲ್ಲಿ ಪಾಕಿಸ್ತಾನ ಮಾಹೀರಾ ಖಾನ್ ನಟಿಸುತ್ತಿದ್ದಾರೆ. ಫಹದ್ ಖಾನ್ ಅವರು 'ಏ ದಿಲ್ ಹೈ ಮುಶ್ಕಿಲ್' ನಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಗಳ ಪ್ರಚಾರ, ಪ್ರದರ್ಶನ ಮಹಾರಾಷ್ಟ್ರದ ನೆಲದಲ್ಲಿ ಸಾಧ್ಯವಿಲ್ಲ ಎಂದು ಅಕ್ಷಯ್ ಹೇಳಿದ್ದಾರೆ.

ಸಾಹಿತಿಗಳ ಮೇಲೆ ಹಲ್ಲೆ, ಕಲಾವಿದರ ಕಾರ್ಯಕ್ರಮ ರದ್ದು ನಮ್ಮ ಉದ್ದೇಶವಲ್ಲ. ಸುಧೀಂದ್ರ ಕುಲಕರ್ಣಿ ಅವರ ಕಾರ್ಯಕ್ರಮದಲ್ಲಿ ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಖುರ್ಷಿದ್ ಕಸೂರಿ ಭಾಗವಹಿಸಿದ್ದು ಸಹಿಸಲು ಸಾಧ್ಯವಿಲ್ಲ. ಗಡಿಯಲ್ಲಿ ಯೋಧರು ನಮ್ಮನ್ನು ರಕ್ಷಿಸಲು ಶ್ರಮಪಡುವಾಗ ನಾವು ವೈರಿಗಳನ್ನು ಆಹ್ವಾನಿಸಿ ಸಂತಸ ಕೂಟದಲ್ಲಿ ಭಾಗವಹಿಸುವುದು ಎಷ್ಟು ಸರಿ ಎಂದು ಅಕ್ಷಯ್ ಪ್ರಶ್ನಿಸಿದ್ದಾರೆ. (ಪಿಟಿಐ)

English summary
After Shiv Sena's protest at BCCI office, Kasuri book release function and Ghulam Ali concerts, films starring Pakistan artistes have become latest target of the political outfit.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X