ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಂಸ ಮಾರಾಟ ನಿಷೇಧ: ಮುಂಬೈ ಈಗ 'ಬ್ಯಾನ್- ಇಸ್ತಾನ್'

By Mahesh
|
Google Oneindia Kannada News

ಮುಂಬೈ, ಸೆ. 08: ಕಾಸ್ಮೋಪಾಲಿಟನ್ ಸಿಟಿ ಎನಿಸಿಕೊಂಡಿರುವ ಮುಂಬೈ ನಗರದಲ್ಲಿ ಈಗ 'ಬ್ಯಾನ್' ಹಾವಳಿ ಶುರುವಾಗಿದೆ. ಜೈನ ಸಮುದಾಯದ ಉಪವಾಸ ವ್ರತ ಜಾರಿಯಲ್ಲಿರುವುದರಿಂದ ಬಿಜೆಪಿ ಆಡಳಿತವಿರುವ ಮುಂಬೈ ನಗರ ಪಾಲಿಕೆ ಕೆಲದಿನಗಳ ಮಟ್ಟಿಗೆ ಮಾಂಸ ಮಾರಾಟ ನಿಷೇಧಿಸಿದೆ. #meatban ಬಗ್ಗೆ ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ನಲ್ಲಿ ಭಾರಿ ಚರ್ಚೆ ಶುರುವಾಗಿದೆ.

ಜೈನ ಸಮುದಾಯದವರ ಪರ್ಯೂಷನ್ ಋತುವಿನ ಉಪವಾಸ ವ್ರತ ಆರಂಭವಾಗಿರುವುದರಿಂದ ನಾಲ್ಕು ದಿನಗಳ ಮಟ್ಟಿಗೆ ಮಾಂಸ ಮಾರಾಟವನ್ನು ನಿಷೇಧಿಸಿ ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಆದೇಶ ಹೊರಡಿಸಿದೆ.

ಬಿಎಂಸಿಯಲ್ಲಿ ಬಿಜೆಪಿ ಆಡಳಿತವಿದೆ. ಜೊತೆಗೆ ನಿಷೇಧ ಹೇರುವಂತೆ ಬಿಜೆಪಿ ಶಾಸಕರಲ್ಲಿ ಜೈನ ಸಮುದಾಯ ಮನವಿ ಮಾಡಿಕೊಂಡಿತ್ತು ಎಂಬುದನ್ನು ಮರೆಯುವಂತಿಲ್ಲ. ಈ ಹಿಂದೆ ಗೋಹತ್ಯೆ ನಿಷೇಧ ಜಾರಿ ಸುದ್ದಿ ಬಂದಾಗಲೂ ಇದೇ ರೀತಿ ಗೋಮಾಂಸ ಮಾರಾಟಕ್ಕೆ 8 ದಿನಗಳ ನಿಷೇಧ ಹೇರಲಾಗಿತ್ತು.

ಮಾಂಸ ಮಾರಾಟ ನಿಷೇಧದ ಬಗ್ಗೆ ಸೋಮವಾರದಿಂದ ಆರಂಭವಾದ ಚರ್ಚೆ ಮಂಗಳವಾರವೂ ಮುಂದುವರೆದಿದ್ದು, ಭಾರತದಲ್ಲಿ ಟಾಪ್ ಟ್ರೆಂಡಿಂಗ್ ಆಗಿಬಿಟ್ಟಿದೆ.

ನಾಲ್ಕು ದಿನಗಳ ಮಟ್ಟಿಗೆ ನಿಷೇಧ

ನಾಲ್ಕು ದಿನಗಳ ಮಟ್ಟಿಗೆ ನಿಷೇಧ

ಜೈನ ಸಮುದಾಯದವರ ಪರ್ಯೂಷನ್ ಋತುವಿನ ಉಪವಾಸ ವ್ರತ ಆರಂಭವಾಗಿರುವುದರಿಂದ ಸೆ.11 ರಿಂದ ಸೆ.18ರೊಳಗೆ ನಾಲ್ಕು ದಿನಗಳ ಮಟ್ಟಿಗೆ ಮಾಂಸ ಮಾರಾಟವನ್ನು ನಿಷೇಧಿಸಲಾಗಿದೆ.

ಬೀಫ್ ಬ್ಯಾನ್, ಮೀಟ್ ಬ್ಯಾನ್ ಎಲ್ಲವೂ ಬ್ಯಾನ್

ಬೀಫ್ ಬ್ಯಾನ್, ಮೀಟ್ ಬ್ಯಾನ್ ಎಲ್ಲವೂ ಬ್ಯಾನ್, ಮುಂಬೈ ಈಗ ಭಾರತ ಬ್ಯಾನ್ ರಾಜಧಾನಿ.

ಮೂಲ ಸೌಕರ್ಯದ ಚಿಂತೆ ಮಾಡ್ಬೇಡಿ. ಬ್ಯಾನ್ ಮಾಡಿ

ಮೂಲ ಸೌಕರ್ಯದ ಚಿಂತೆ ಮಾಡ್ಬೇಡಿ. ಊಟ ತಿಂಡಿ ಬ್ಯಾನ್ ಮಾಡಿ, ಶೌಚಾಲಯ, ಆಸ್ಪತ್ರೆ, ರಸ್ತೆ, ರೈಲ್ವೆ, ಮಹಿಳಾ ಸುರಕ್ಷತೆ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ

ಬಾಂದ್ರಾ ಆಹಾರ ಮೇಳದಲ್ಲಿ ಏನು ಸಿಗಲಿದೆ?

ಬಾಂದ್ರಾ ಆಹಾರ ಮೇಳದಲ್ಲಿ ಏನು ಸಿಗಲಿದೆ? ಚನ್ನಾ ಮಸಲಾ ಅಷ್ಟೇ. ನಾನ್ ವೆಜ್ ಹೆಸರೆತ್ತಬೇಡಿ.

ಒಂದು ಸಮುದಾಯ ಮೆಚ್ಚಿಸುವುದರಲ್ಲಿ ಅರ್ಥವಿಲ್ಲ

ಒಂದು ಸಮುದಾಯ ಮೆಚ್ಚಿಸುವುದರಲ್ಲಿ ಅರ್ಥವಿಲ್ಲ, ಬೇರೆ ಸಮುದಾಯಕ್ಕೆ ಮಾಂಸ ಇಷ್ಟವಾದರೆ ಮಿಕ್ಕವರು ಏಕೆ ಅದನ್ನೇ ಫಾಲೋ ಮಾಡುವುದಿಲ್ಲ?

ಆಹಾರ ಕ್ರಮವನ್ನೇ ಉಲ್ಟಾ ಮಾಡಿ ಬಿಡಿ

ಆಹಾರ ಕ್ರಮವನ್ನೇ ಉಲ್ಟಾ ಮಾಡಿ ಬಿಡಿ, ಎಲ್ಲರೂ ಹುಲ್ಲು ತಿನ್ನಿ

ನಾನ್ ವೆಜಿಟೆರಿಯನ್ ಗಳ ತಾಳ್ಮೆಗೂ ಮಿತಿ ಇದೆ

ನಾನ್ ವೆಜಿಟೆರಿಯನ್ ಗಳ ತಾಳ್ಮೆಗೂ ಮಿತಿ ಇದೆ, ಸುಮ್ಮನೆ ಕೆದಕಬೇಡಿ.

ಹೋ ಹಾಗಾದರೆ ಬೇರೆ ದಿನಗಳಲ್ಲಿ ಏನ್ಮಾಡ್ತೀರಾ?

ಹೋ ಹಾಗಾದರೆ ಬೇರೆ ದಿನಗಳಲ್ಲಿ ಏನ್ಮಾಡ್ತೀರಾ? ಜೈನ ಸಮುದಾಯದ ಭಾವನೆಗಳಿಗೆ ಬೇರೆ ದಿನಗಳಲ್ಲಿ ಧಕ್ಕೆ ಉಂಟಾಗುವುದಿಲ್ಲವೇ?

English summary
BJP ruled The Brihanmumbai Municipal Corporation (BMC) has banned meat in Mumbai for four days during the Jain fasting season of Paryushan giving in to demands made by BJP legislators and Jain organisations. Here is how people on Twitter are reacting to the meat ban in Mumbai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X