ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿವಸೇನೆಗೆ ಹರಿದು ಬಂತು 86 ಕೋಟಿ ದೇಣಿಗೆ

By ವಿಕಾಸ್ ನಂಜಪ್ಪ
|
Google Oneindia Kannada News

ಮುಂಬೈ, ಜನವರಿ 18: ಶಿವಸೇನೆ ಎಲ್ಲಾ ಪ್ರಾದೇಶಿಕ ಪಕ್ಷಗಳ ಒಟ್ಟು ದೇಣಿಗೆಯ ನಾಲ್ಕು ಪಟ್ಟು ದೇಣಿಗೆ ಸಂಗ್ರಹಿಸಿರುವುದಾಗಿ ಘೋಷಿಸಿಕೊಂಡಿದೆ. 2015-16ನೇ ವರ್ಷದಲ್ಲಿ ಶಿವಸೇನೆ ಬರೋಬ್ಬರಿ 86.84 ಕೋಟಿ ರೂಪಾಯಿ ದೇಣಿಗೆ ಸಂಗ್ರಹಿಸಿದ್ದರೆ, ಎರಡನೇ ಸ್ಥಾನದಲ್ಲಿರುವ ಎಎಪಿ ಕೇವಲ 6.6 ಕೋಟಿ ರೂಪಾಯಿ ದೇಣಿಗೆ ಸಂಗ್ರಹಿಸಿದೆ.

ಶಿವಸೇನೆಯ ಘೋಷಣೆಯೊಂದಿಗೆ ಇದೇ ಮೊದಲ ಬಾರಿಗೆ ಪ್ರಾದೇಶಿಕ ಪಕ್ಷವೊಂದು ಅತೀ ದೊಡ್ಡ ಮೊತ್ತದ ದೇಣಿಗೆ ಸಂಗ್ರಹಿಸಿದಂತಾಗಿದೆ.

ಒಟ್ಟು 143 ದಾನಿಗಳಿಂದ ಶಿವಸೇನೆ 86.84 ಕೋಟಿ ದೇಣಿಗೆ ಸಂಗ್ರಹಿಸಿದೆ. ಆದರೆ ಎರಡನೇ ಸ್ಥಾನದಲ್ಲಿರುವ ಎಎಪಿ 1187 ದಾನಿಗಳಿಂದ ಸಂಗ್ರಹಿಸಿದ ಮೊತ್ತ ಕೇವಲ 6.605 ಕೋಟಿಯಾಗಿದೆ. ದೇಣಿಗೆ ಘೋಷಿಸಿಕೊಂಡ 15 ಪಕ್ಷಗಳ ಒಟ್ಟು ದೇಣಿಗೆಯ ನಾಲ್ಕು ಪಟ್ಟು ದೇಣಿಗೆ ಶಿವಸೇನೆ ಪಕ್ಷವೊಂದಕ್ಕೇ ಹರಿದು ಬಂದಿರುವುದು ವಿಶೇಷ.

Shiv Sena declared 4 times the donations of all regional parties combined

ನಿಯಮಗಳ ಪ್ರಕಾರ 20,000 ರೂಪಾಯಿಗಿಂತ ಹೆಚ್ಚಿನ ಮೊತ್ತದ ದೇಣಿಗೆಯನ್ನು ಪಕ್ಷಗಳು ಘೋಷಿಸಿಕೊಳ್ಳಬೇಕಾಗಿತ್ತು. ಎಐಎಡಿಎಂಕೆ, ಬಿಜೆಡಿ, ಜೆಎಂಎಂ, ಆರ್.ಎಲ್.ಡಿ ಯಂಥ ಪ್ರಮುಖ ಪಕ್ಷಗಳು 2015-16ರಲ್ಲಿ 20,000ಕ್ಕಿಂತ ಹೆಚ್ಚಿನ ಮೊತ್ತದ ದೇಣಿಗೆ ಸಂಗ್ರಹಸಿಯೇ ಇಲ್ಲ ಎಂದು ಮಾಹಿತಿ ನೀಡಿವೆ.

ವಿಶೇಷ ಎಂದರೆ 21 ಪ್ರಾದೇಶಿಕ ಪಕ್ಷಗಳು 2014-15ರಲ್ಲಿ 134.86 ಕೋಟಿ ದೇಣಿಗೆ ಸಂಗ್ರಹಿಸಿದ್ದರೆ, 2015-16ರಲ್ಲಿ ಈ ಪ್ರಮಾಣ 107.62 ಕೋಟಿಗೆ ಇಳಿಕೆಯಾಗಿದೆ. ಆದರೆ ಶಿವಸೇನೆ, ಪಿಎಂಕೆ, ಎಐಯುಡಿಎಫ್, ಡಿಎಂಡಿಕೆ ಮತ್ತು ಕರ್ನಾಟಕದ ಜೆಡಿಎಸ್ ಮಾತ್ರ ತಮ್ಮ ದೇಣಿಗೆ ಹೆಚ್ಚಳವಾಗಿರುವುದಾಗಿ ಹೇಳಿವೆ.

ಶೇಕಡಾ 3.08 ದೇಣಿಗೆ ಮಾತ್ರ ಹಣದ ರೂಪದಲ್ಲಿ ಬಂದಿದ್ದರೆ, ಉಳಿದ ದೇಣಿಗೆಗಳು ಚೆಕ್, ಡಿಡಿ ಮುಂತಾದ ಬೇರೆ ಬೇರೆ ರೂಪದಲ್ಲಿ ಬಂದಿವೆ. ಇವತ್ತು ಪಂಜಾಬಿನಲ್ಲಿ ಸದ್ದು ಮಾಡುತ್ತಿರುವ ಎಎಪಿಗೆ ಪಂಜಾಬ್, ದೆಹಲಿ, ಮಲೇಷ್ಯಾ ಮತ್ತು ಚಂಡೀಘಡ್ನ ಜನ ದೊಡ್ಡ ಮಟ್ಟಕ್ಕೆ ಹಣದ ರೂಪದಲ್ಲಿ ದಾನ ನೀಡಿದ್ದಾರೆ ಎಂಬುದು ಗಮನಾರ್ಹ ಸಂಗತಿ. (ಒನ್ ಇಂಡಿಯಾ ಸುದ್ದಿ)

English summary
The Shiv Sena has declared 4 times the donations of all regional parties combined. This was revealed by a report which was prepared by the Association for Democratic Reforms and National Election Watch.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X