ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

150 ಕೋಟಿ ರು ಗಾಗಿ ಶೀನಾ ಬೋರಾ ಹತ್ಯೆ ನಡೆಯಿತೆ?

By Mahesh
|
Google Oneindia Kannada News

ಮುಂಬೈ, ಸೆ.02: ಶೀನಾ ಬೋರಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಇಂದ್ರಾಣಿ ಮುಖರ್ಜಿ ಸರಿ ಸುಮಾರು 10 ದಿನಗಳ ನಂತರ ತನ್ನ ತಪ್ಪು ಒಪ್ಪಿಕೊಂಡಿದ್ದಾರೆ ಎಂಬ ಸುದ್ದಿ ಬಂದಿದೆ.ಶೀನಾ ಬೋರಾ ಹತ್ಯೆಯಾಗಿಲ್ಲ, ಅಮೆರಿಕದಲ್ಲಿದ್ದಾರೆ ಎಂಬ ಸುದ್ದಿಯ ನಡುವೆ, ಶೀನಾ ಹತ್ಯೆ ಮಾಡಿದ್ದು ನಾನೇ ಎಂದು ಇಂದ್ರಾಣಿ ವಿಚಾರಣೆ ವೇಳೆ ಒಪ್ಪಿಕೊಂಡಿರುವ ಮಾಹಿತಿ ಹೊರಬಂದಿದೆ.

ಮುಂಬೈ ಪೊಲೀಸ್ ಆಯುಕ್ತ ರಾಕೇಶ್ ಮಾರಿಯಾ ಅವರೇ ಖುದ್ದು ಇಂದ್ರಾಣಿ ಹಾಗೂ ಆಕೆಯ ಮಾಜಿ ಪತಿ ಸಂಜೀವ್ ಖನ್ನಾ ಮತ್ತು ಕಾರು ಚಾಲಕ ಶ್ಯಾಮ್ ರಾಯ್ ಅವರ ವಿಚಾರಣೆ ನಡೆಸುತ್ತಿದ್ದಾರೆ. ಎಲ್ಲಾ ಆರೋಪಿಗಳ ಪೊಲೀಸ್ ಕಸ್ಟಡಿಯನ್ನು ಸೆಪ್ಟಂಬರ್ ಐದರ ತನಕ ವಿಸ್ತರಣೆ ಮಾಡಲಾಗಿದೆ.

ಶೀನಾ ಬೋರಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಇಂದ್ರಾಣಿ ಮುಖರ್ಜಿ, ಆಕೆಯ ಮಾಜಿ ಪತಿ ಸಂಜೀವ್ ಖನ್ನಾ ಮತ್ತು ಕಾರು ಚಾಲಕ ಶ್ಯಾಮ್ ರಾಯ್ ಅವರ ಪೊಲೀಸ್ ಕಸ್ಟಡಿಯನ್ನು ಸೆಪ್ಟಂಬರ್ ಐದರ ತನಕ ವಿಸ್ತರಣೆ ಮಾಡಲಾಗಿದೆ.[ಶೀನಾ ಬೋರಾ ಕೊಲೆ ಕೇಸಿಗೆ ಟ್ವಿಸ್ಟ್]

ಪ್ರಕರಣದ ತನಿಖೆಯಲ್ಲಿ ಇಂದ್ರಾಣಿ ಮುಖರ್ಜಿ ಮತ್ತು ಸಂಜೀವ್ ಖನ್ನಾ ಸಹಕಾರ ನೀಡುತ್ತಿಲ್ಲ. ತನಿಖೆಯ ಸಂದರ್ಭದಲ್ಲಿ ಪೊಲೀಸರ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರ ನೀಡುತ್ತಿಲ್ಲ ಎಂದು ಪೊಲೀಸರು ದೂರಿದ್ದರು. ಆದರೆ, ಕೊಲೆಯ ಕಾರಣದ ಬಗ್ಗೆ ಹುಡುಕಾಟ ನಡೆಸಿದ ಪೊಲೀಸರಿಗೆ ಇದು ಸೇಫ್ ಲಾಕರ್ ನಲ್ಲಿರಿಸಿದ್ದ 150 ಕೋಟಿ ರು ಗಾಗಿ ನಡೆದ ಕೊಲೆ ಎಂದು ಶಂಕೆ ವ್ಯಕ್ತವಾಗಿದೆ.

ಐಎನ್ ಎಕ್ಸ್ ಮೀಡಿಯಾ ಷೇರು ಮಾರಾಟದ ಮೊತ್ತ

ಐಎನ್ ಎಕ್ಸ್ ಮೀಡಿಯಾ ಷೇರು ಮಾರಾಟದ ಮೊತ್ತ

ಇಂದ್ರಾಣಿ ಮುಖರ್ಜಿ ಹಾಗೂ ಆಕೆ ಪತಿ ಪೀಟರ್ ಮುಖರ್ಜಿ ಅವರು ಐಎನ್ ಎಕ್ಸ್ ಮೀಡಿಯಾದಲ್ಲಿದ್ದ ತಮ್ಮ ಷೇರುಗಳನ್ನು 2008-2009ರಲ್ಲಿ ಮಾರಾಟ ಮಾಡಿದ್ದರು. ಇದರಿಂದ ಸುಮಾರು 400 ರಿಂದ 500 ಕೋಟಿ ರು ಸಂಗ್ರಹವಾಗಿತ್ತು. ಶೀನಾ ಬ್ಯಾಂಕ್ ಖಾತೆಯ ಸೇಫ್ ಲಾಕರ್ ನಲ್ಲಿ ಸುಮಾರು 150 ಕೋಟಿ ರು ಇರಿಸಲಾಗಿತ್ತು.

ಹಣ ರವಾನಿಸಲು ನಿರಾಕರಿಸಿದ್ದ ಶೀನಾ

ಹಣ ರವಾನಿಸಲು ನಿರಾಕರಿಸಿದ್ದ ಶೀನಾ

ತನ್ನ ಖಾತೆಯಲ್ಲಿ ಭಾರಿ ಮೊತ್ತದ ಹಣ ಇರುವುದು ಶೀನಾಗೆ ತಡವಾಗಿ ತಿಳಿದು ಬಂದಿದೆ. ಮಗಳ ಬಳಿ ಹಣ ಇದ್ದರೆ ಸೇಫ್ ಎಂದು ತಿಳಿದಿದ್ದ ಇಂದ್ರಾಣಿಗೆ ಶೀನಾ ಆಘಾತ ನೀಡಿದ್ದಾರೆ. ತಮ್ಮ ಬಳಿ ಇದ್ದ ಹಣವನ್ನು ರವಾನಿಸಲು ನಿರಾಕರಿಸಿದ್ದಾರೆ. ಇದರಿಂದ ಕೋಪಗೊಂಡ ಇಂದ್ರಾಣಿ ಶೀನಾ ಹತ್ಯೆಗೆ ಮುಂದಾಗಿದ್ದಾರೆ.

ಅನೇಕ ಕಥೆಗಳು ಹುಟ್ಟಿಸಲಾಗಿದೆ

ಅನೇಕ ಕಥೆಗಳು ಹುಟ್ಟಿಸಲಾಗಿದೆ

ಇಂದ್ರಾಣಿಗೆ ಆಕೆಯ ಕಾರು ಚಾಲಕ ಶ್ಯಾಮ್ ರಾಯ್,ಮಾಜಿ ಪತಿ ಸಂಜೀವ್ ಖನ್ನಾ ನೆರವಾಗಿದ್ದಾರೆ. 2012ರಲ್ಲಿ ಮುಂಬೈನಲ್ಲಿ ಕೊಲೆ ಮಾಡಿ ರಾಯ್ ಗಢದ ಕಾಡೊಂದರಲ್ಲಿ ಶವವನ್ನು ಸುಟ್ಟು ಹಾಕಿದ್ದಾರೆ. ಕೋಲ್ಕತ್ತಾ ಮೂಲದ ಸಿದ್ದಾರ್ಥ್ ದಾಸ್ ಅವರ ಪುತ್ರಿ ಶೀನಾ ಹತ್ಯೆ ನಂತರ ಅನೇಕ ಕಥೆಗಳು ಹುಟ್ಟಿಸಲಾಗಿದೆ. ಮೂರು ವರ್ಷಗಳ ನಂತರ ಪೊಲೀಸರಿಗೆ ಸ್ಕೈಪ್ ಮೂಲಕ ಬಂದ ಅನಾಮಿಕ ಕರೆಯಿಂದ ಇಂದ್ರಾಣಿ ಹಾಗೂ ಆಕೆಯ ಸಹಚರರ ಬಣ್ಣ ಬಯಲಾಗಿದೆ

ಆಸ್ತಿಗಾಗಿ ಕೊಲೆ, ಶೀನಾ ಸೋದರನ ಹತ್ಯೆಗೂ ಸಂಚು

ಆಸ್ತಿಗಾಗಿ ಕೊಲೆ, ಶೀನಾ ಸೋದರನ ಹತ್ಯೆಗೂ ಸಂಚು

ಇಂದ್ರಾಣಿಗೆ ಎರಡನೇ ಪತಿ ಸಂಜೀವ್ ಖನ್ನಾನಿಂದ ಇನ್ನೊಂದು ಪುತ್ರಿ ವಿಧಿ ಕೂಡ ಇದ್ದಾಳೆ. ಈಕೆ ಸದ್ಯ ಇಂಗ್ಲೆಂಡ್​ನಲ್ಲಿದ್ದು, ಪೀಟರ್ ಮುಖರ್ಜಿ ಈಕೆಯನ್ನು ದತ್ತು ತೆಗೆದುಕೊಂಡಿದ್ದಾರೆ. ಶೀನಾಳನ್ನು ಹತ್ಯೆಗೈದರೆ ಪೀಟರ್ ಮುಖರ್ಜಿಯ ಎಲ್ಲ ಆಸ್ತಿಯೂ ವಿಧಿಗೆ ಸಲ್ಲುತ್ತದೆ ಎಂಬ ಕಾರಣಕ್ಕೆ ಈ ಕೃತ್ಯ ಎಸಗಲಾಗಿದೆ ಎನ್ನಬಹುದು. ಶೀನಾಳ ಜೈವಿಕ ಸೋದರ ಮಿಖೈಲ್ ಬೊರಾಗೆ ಎಲ್ಲದರ ಬಗ್ಗೆ ಅರಿವಿದೆ. ಆತನ ವಿಚಾರಣೆಯಿಂದ ಕೊಲೆಯ ಕಾರಣ ಸ್ಪಷ್ಟಗೊಳ್ಳುವ ಸಾಧ್ಯತೆಯಿದೆ.

English summary
Almost ten days after her arrest, it has been reported that Indrani Mukerjea confessed to her crime. According to Mumbai Police sources, Indrani for the first time has admitted to murdering Sheena Bora.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X