ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಲ್ಡರ್ ಕೊಲೆ: ಅಬು ಸಲೇಂಗೆ ಜೀವಾವಧಿ ಶಿಕ್ಷೆ ಪ್ರಕಟ

By Mahesh
|
Google Oneindia Kannada News

ಮುಂಬೈ, ಫೆ.25: ಮುಂಬೈ ಮೂಲದ ಬಿಲ್ಡರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೋಷಿಯಾಗಿರುವ ಕುಖ್ಯಾತ ಭೂಗತ ಪಾತಕಿ , ಗ್ಯಾಂಗ್‌ಸ್ಟರ್ ಅಬು ಸಲೇಂಗೆ ಟಾಡಾ ನ್ಯಾಯಾಲಯ ಬುಧವಾರ ಜೀವಾವಧಿ ಶಿಕ್ಷೆ ಘೋಷಿಸಿದೆ. ಸದ್ಯ ಅಬು ಸಲೇಂ ರಾಯಗಢದ ತಲೋಜಾ ಸೆಂಟ್ರಲ್ ಜೈಲಿನಲ್ಲಿದ್ದಾರೆ.

1995ರ ಮಾ.7ರಂದು ಮುಂಬೈ ಮೂಲದ ಬಿಲ್ಡರ್ ಪ್ರದೀಪ್ ಜೈನ್ ಎಂಬುವವರನ್ನು ಕೊಲೆ ಮಾಡಿದ ಪ್ರಕರಣದ ವಿಚಾರಣೆ ನಡೆಸಿದ ಟಾಡಾ ನ್ಯಾಯಾಲಯ ಅಬು ಸಲೇಂ ಹಂತಕ ಎಂದು ತೀರ್ಮಾನಿಸಿ ಫೆ.16ರಂದು ಮಹತ್ವದ ತೀರ್ಪು ನೀಡಿತ್ತು.

1993 ರ ಮುಂಬೈ ಸರಣಿ ಬಾಂಬ್ ಸ್ಫೋಟ ಆರೋಪಿ ಅಬು ಸೇಲಂನನ್ನು ಪೋರ್ಚುಗಲ್ ನಿಂದ 2005ರ ನವೆಂಬರ್ 11ರಂದು ಭಾರತಕ್ಕೆ ಗಡಿಪಾರು ಮಾಡಲಾಗಿತ್ತು. ಗಡಿಪಾರಾದ ನಂತರ ತಪ್ಪಿತಸ್ಥ ಎಂದು ಸಾಬೀತಾಗಿರುವ ಮೊದಲ ಪ್ರಕರಣ ಇದಾಗಿದೆ. [ಅಬು ಸಲೇಂ ದೋಷಿ : ಟಾಡಾ ಕೋರ್ಟ್]

Pradeep Jain murder: Abu Salem sentenced to life imprisonment by TADA court

ಅಬು ಸಲೇಂ ಜೊತೆಗೆ ವೀರೇಂದ್ರ ಜಂಬ್ ಮತ್ತು ಮೆಹಂದಿ ಹಸ್ಸನ್ ಇನ್ನಿಬ್ಬರು ತಪ್ಪಿತಸ್ಥರು ಎಂದು ಕೋರ್ಟ್ ಹೇಳಿದೆ. ಮೂವರು ದೋಷಿಗಳ ಮೇಲೆ ಐಪಿಸಿ ಸೆಕ್ಷನ್ 302, 102 ಬಿ ಅಡಿ ಪ್ರಕರಣ ದಾಖಲಾಗಿತ್ತು ಎಂದು ವಿಶೇಷ ಪಬ್ಲಿಕ್ ಪ್ರಾಸೆಕ್ಯೂಟರ್ ಉಜ್ವಲ್ ನಿಕಂ ತಿಳಿಸಿದ್ದಾರೆ.

ಗಲ್ಲು ಶಿಕ್ಷೆಗೆ ಮನವಿ: ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ ಉಜ್ವಲ್ ನಿಕಂ ಅವರು ವಿಚಾರಣೆ ವೇಳೆ ಟಾಡಾ ಕೋರ್ಟಿಗೆ ಮನವಿ ಸಲ್ಲಿಸಿದ್ದರು. ಅದರೆ, ಪೋರ್ಚುಗಲ್ ಹಾಗೂ ಭಾರತ ನಡುವಿನ ದ್ವಿಪಕ್ಷೀಯ ಗಡಿಪಾರು ಒಪ್ಪಂದದ ಹಿನ್ನೆಲೆಯಲ್ಲಿ ಅಬು ಸಲೇಂಗೆ ಜೀವಾವಧಿ ಶಿಕ್ಷೆ ನೀಡಬೇಕು ಎಂದು ಸಲೇಂ ಪರ ವಕೀಲ ಸುದೀಪ್ ಪಸ್ಗೋಲಾ ಅವರು ವಾದಿಸಿದ್ದರು. ಈ ವಾದವನ್ನು ಮನ್ನಿಸಿದ ಹೆಚ್ಚುವರಿ ಸೆಷನ್ಸ್ ಜಡ್ಜ್ ವಿ.ಎ ಸನಪ್ ಅವರು ಶಿಕ್ಷೆ ಪ್ರಮಾಣವನ್ನು ಪ್ರಕಟಿಸಿದ್ದಾರೆ.

ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿರುವ ಸಲೇಂ 2002ರಲ್ಲಿ ಪ್ರೇಯಸಿ ಮೋನಿಕಾ ಬೇಡಿ ಜತೆ ಲಿಸ್ಬನ್‌ನಲ್ಲಿ ಸೆರೆಸಿಕ್ಕಿದ್ದ. ಮೂರು ವರ್ಷಗಳ ನಂತರ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಭಾರತಕ್ಕೆ ಪೋರ್ಚುಗಲ್ ದೇಶದಿಂದ ಹಸ್ತಾಂತರಗೊಂಡಿದ್ದ.

ಹಸ್ತಾಂತರದ ವೇಳೆ ಭಾರತ, ಅಬು ಸಲೇಂಗೆ ಮರಣದಂಡನೆ ಅಥವಾ 25 ವರ್ಷಕ್ಕಿಂತ ಹೆಚ್ಚಿನ ಸೆರೆವಾಸ ಶಿಕ್ಷೆ ವಿಧಿಸುವುದಿಲ್ಲ ಎಂದು ಪೋರ್ಚುಗಲ್ ಗೆ ಭರವಸೆ ನೀಡಲಾಗಿತ್ತು. ಭಾರತದಲ್ಲಿ ತನ್ನ ಮೇಲಿನ ಆರೋಪಗಳ ವಿಚಾರಣೆ ರದ್ದುಗೊಳಿಸುವಂತೆ ಅಬು ಸಲೇಂ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿತ್ತು.

ನಂತರ, ನಕಲಿ ಪಾಸ್ ಫೋರ್ಟ್ ಬಳಕೆ ಆರೋಪದಡಿಯಲ್ಲಿ ಭೂಗತ ಪಾತಕಿ ಅಬು ಸಲೇಂಗೆ ಇಲ್ಲಿನ ವಿಶೇಷ ಸಿಬಿಐ ನ್ಯಾಯಾಲಯ 2013ರಲ್ಲಿ 7 ವರ್ಷ ಜೈಲು ಶಿಕ್ಷೆ ವಿಧಿಸಿತ್ತು.

English summary
Extradited gangster Abu Salem was on Wednesday sentenced to life imprisonment by special TADA court for murder of Mumbai-based builder Pradeep Jain in 1995.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X