ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಲ್ಲೂ ಹಿಟ್ ಅಂಡ್ ರನ್ ಕೇಸ್: ಸಾಕ್ಷಿ ರವೀಂದ್ರ ಸತ್ತಿದ್ದು ಹೇಗೆ?

By Mahesh
|
Google Oneindia Kannada News

ಮುಂಬೈ,ಜೂ.26: ಬಾಲಿವುಡ್ಡಿನ ಜನಪ್ರಿಯ ನಟ ಸಲ್ಮಾನ್ ಖಾನ್ ಆರೋಪಿಯಾಗಿರುವ ಹಿಟ್ ಅಂಡ್ ರನ್ ಪ್ರಕರಣ ಕುರಿತಂತೆ ಮತ್ತೊಂದು ಪೂರಕ ಕೇಸ್ ಉ ತಗುಲಿ ಹಾಕಿಕೊಂಡಿದೆ.ಪ್ರತ್ಯಕ್ಷದರ್ಶಿ ಸಾಕ್ಷಿ ರವೀಂದ್ರ ಪಾಟೀಲ್ ಸಾವಿನ ನಿಗೂಢತೆ ಬಯಲು ಮಾಡೂವಂತೆ ಬಾಂಬೆ ಹೈಕೋರ್ಟಿನಲ್ಲಿ ಅರ್ಜಿ ಹಾಕಲಾಗಿದೆ.

ಘಟನೆಯ ಪ್ರಮುಖ ಸಾಕ್ಷಿಯಾಗಿದ್ದ ರವೀಂದ್ರ ಪಾಟೀಲ್ ಅವರ ನಿಗೂಢ ಸಾವಿಗೆ ನಿಜವಾದ ಕಾರಣವೇನು ಎಂದು ಪ್ರಶ್ನಿಸಿ ಪುಣೆಯ ಸಾಮಾಜಿಕ ಕಾರ್ಯಕರ್ತ ಹೇಮಂತ ಪಾಟೀಲ್ ಗುರುವಾರ ಬಾಂಬೆ ಹೈಕೋರ್ಟ್ ನಲ್ಲಿ ಅರ್ಜಿ ಹಾಕಿದ್ದಾರೆ.[ಸಲ್ಮಾನ್ ಗೆ ಮಧ್ಯಾಹ್ನ ಜೈಲ್, ಸಂಜೆ ಬೇಲ್ ಏಕೆ?]

ಈ ಬಗ್ಗೆ ಮಹಾರಾಷ್ಟ್ರ ಸರ್ಕಾರ ಮತ್ತು ಪೊಲೀಸರಿಂದ ತನಿಖೆಯನ್ನು ಕೋರಿ ಬಾಂಬೆ ಉಚ್ಚ ನ್ಯಾಯಾಲಯದಲ್ಲಿ ಹೇಮಂತ್ ಪಾಟೀಲ್ ಪರ ವಕೀಲ ಆರ್ ಎನ್ ಕಚಾವೇ ಅವರು ಅರ್ಜಿ ಸಲ್ಲಿಸಿದ್ದಾರೆ. [ ಕೇಸ್ ಫೈಲ್ 2012ರಲ್ಲೇ ಬೆಂಕಿಗೆ ಆಹುತಿ!]

Salman

2002ರಲ್ಲಿ ನಡೆದಿದ್ದ ಈ ಪ್ರಕರಣದಲ್ಲಿ ಸಲ್ಮಾನ್ ದೋಷಿಯೆಂದು ವಿಚಾರಣಾ ನ್ಯಾಯಾಲಯ ಕಳೆದ ತಿಂಗಳು ಘೋಷಿಸಿತ್ತು. [ಹಿಟ್ ಅಂಡ್ ರನ್ ಕೇಸ್: ಟೈಮ್ ಲೈನ್]

ವಿಚಾರಣೆಯ ವೇಳೆ ಪ್ರಕರಣದಲ್ಲಿಯ ಸತ್ಯಾಂಶವನ್ನು ಬಹಿರಂಗಗೊಳಿಸದಂತೆ ಅಪಘಾತದ ಪ್ರತ್ಯಕ್ಷದರ್ಶಿ ಸಾಕ್ಷಿ ಹಾಗೂ ತನ್ನ ಪೊಲೀಸ್ ಅಂಗರಕ್ಷಕ ರವೀಂದ್ರ ಪಾಟೀಲ್ ಮೇಲೆ ಒತ್ತಡ ಹೇರಲಾಗಿದೆ. ಹೀಗಾಗಿ ಸಲ್ಮಾನ್ ಖಾನ್ ವಿರುದ್ಧ ಕಾನೂನು ಕ್ರಮವನ್ನು ಜರುಗಿಸುವಂತೆಯೂ ಅರ್ಜಿಯಲ್ಲಿ ಕೋರಲಾಗಿದೆ. [ಸಲ್ಮಾನಿಗೊಂದು ನ್ಯಾಯ, ಗೀತಾಗೊಂದು ನ್ಯಾಯ ಏಕೆ?]

ವಿಚಾರಣೆಯ ವೇಳೆ ನ್ಯಾಯಾಲಯಕ್ಕೆ ಗೈರುಹಾಜರಾಗಿದ್ದ ಪಾಟೀಲ್‌ನನ್ನು ಬಂಧಿಸಲಾಗಿತ್ತು. ಜೈಲಿನಿಂದ ಬಿಡುಗಡೆಗೊಂಡ ಬಳಿಕ ನಾಪತ್ತೆಯಾಗಿದ್ದ. ನಂತರ ಶಿವ್ಡಿಯ ಆಸ್ಪತ್ರೆಯೊಂದರಲ್ಲಿ ಪತ್ತೆಯಾಗಿದ್ದರೂ ಆ ವೇಳೆಗೆ ಕ್ಷಯರೋಗದಿಂದ ನರಳುತ್ತಿದ್ದ ಮತ್ತು 2007,ಅ.4ರಂದು ನಿಧನನಾಗಿದ್ದ. ಸಾಯುವ ವೇಳೆಗೆ ಆತ ಕೆಲಸವನ್ನು ಕಳೆದುಕೊಂಡಿದ್ದ. [ಜೈಲಿಗೆ ಕಳಿಸಿದ ಹೀರೋ ಈ ಬಾಡಿಗಾರ್ಡ್]

ಈ ಪ್ರಕರಣದಲ್ಲಿ ಸಾಕ್ಷಿಗಳು ಸಿಗದ ಕಾರಣ ಸೆಷನ್ಸ್ ಕೋರ್ಟಿನಲ್ಲಿ ಸಲ್ಮಾನ್ ಖಾನ್ ಅವರಿಗೆ ಶಿಕ್ಷೆ ಪ್ರಕಟವಾದರೂ ಹೈಕೋರ್ಟಿನಿಂದ ಮಧ್ಯಂತರ ಜಾಮೀನು ಪಡೆಯುವಲ್ಲಿ ಸಫಲರಾಗಿದ್ದರು. ಸೆ.28, 2002ರಲ್ಲಿ ಸಲ್ಮಾನ್ ಖಾನ್ ಇದ್ದ ವಾಹನ ಓರ್ವ ವ್ಯಕ್ತಿಯ ಸಾವಿಗೆ ಕಾರಣವಾಗಿತ್ತು. (ಪಿಟಿಐ)

English summary
A petition filed today in the Bombay High Court sought a probe by Maharashtra government and police into the circumstances leading to the death of a key eyewitness in the 2002 hit-and-run case in which Bollywood actor Salman Khan was convicted last month.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X