ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೂದಲೆಳೆ ಅಂತರದಲ್ಲಿ ತಪ್ಪಿತು ಭಾರೀ ವಿಮಾನ ದುರಂತ

ಮುಂಬೈನಿಂದ ಚಂಡೀಗಢಕ್ಕೆ ಪ್ರಯಾಣಿಸಬೇಕಾಗಿದ್ದ ಇಂಡಿಯೋ ಏರ್ ಲೈನ್ಸ್ ವಿಮಾನದಲ್ಲಿ ಪ್ರಯಾಣಿಕರೊಬ್ಬರು ಟೇಕ್ ಆಫ್ ಗೆ ಕೆಲವೇ ನಿಮಿಷಗಳ ಮೊದಲು ಸುರಕ್ಷಾ ಬಾಗಿಲು (ತುರ್ತು ನಿರ್ಗಮನ) ತೆಗೆದಿದ್ದರಿಂದ ಸ್ಥಳದಲ್ಲಿ ಭೀಕರ ದುರಂತ ನಡೆಯಲಿತ್ತು.

By Sachhidananda Acharya
|
Google Oneindia Kannada News

ಮುಂಬೈ, ಫೆಬ್ರವರಿ 10: ಕೂದಲೆಳೆ ಅಂತರದಲ್ಲಿ ಭಾರಿ ವಿಮಾನ ದುರ್ಘಟನೆಯೊಂದು ತಪ್ಪಿದ ವರದಿಯ಻ಗಿದೆ. ಮುಂಬೈನಿಂದ ಚಂಡೀಗಢಕ್ಕೆ ಪ್ರಯಾಣಿಸಬೇಕಾಗಿದ್ದ ಇಂಡಿಯೋ ಏರ್ ಲೈನ್ಸ್ ವಿಮಾನದಲ್ಲಿ ಪ್ರಯಾಣಿಕರೊಬ್ಬರು ಟೇಕ್ ಆಫ್ ಗೆ ಕೆಲವೇ ನಿಮಿಷಗಳ ಮೊದಲು ಸುರಕ್ಷಾ ಬಾಗಿಲು (ತುರ್ತು ನಿರ್ಗಮನ) ತೆಗೆದಿದ್ದರಿಂದ ಸ್ಥಳದಲ್ಲಿ ಭೀಕರ ದುರಂತ ನಡೆಯಲಿತ್ತು. ಅದೃಷ್ಟಾವಶಾತ್ ಪೈಲಟ್ ನೋಡಿದ್ದರಿಂದ ಏನೂ ಆಗಿಲ್ಲ.

ಸದ್ಯ ಬಾಗಿಲು ತೆಗೆದವನನ್ನು ಪೊಲೀಸರು ಬಂಧಿಸಿದ್ದಾರೆ. ಏರ್ ಲೈನ್ಸ್ ಆತನ ವಿರುದ್ಧ ದೂರು ನೀಡಿದ್ದು ಎಫ್ಐಆರ್ ದಾಖಲಿಸಲಾಗಿದೆ. ಏಪ್ರಿಲ್ 1, 2016ರಲ್ಲಿ ಈ ಘಟನೆ ವಿಮಾನ ಸಂಖ್ಯೆ 6E 4134ನಲ್ಲಿ ನಡೆದಿತ್ತು. ವಿಮಾನದಲ್ಲಿ ಆ ಸಂದರ್ಭ ನೂರಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ತುರ್ತು ಬಾಗಿಲು ತೆರೆದಿದ್ದರಿಂದ ವಿಮಾನದ ಪ್ರಯಾಣ ತಡವಾಗಿತ್ತು.[ಹಾವಿನ ಜತೆ ಫೋಟೋ ಹಾಕಿದ ಟಿವಿ ನಟಿಯ ಬಂಧನ!]

 Passenger opens safety door, major security breach in IndiGo flight

ಈ ಕುರಿತು ತನಿಖೆಗೆ ಆದೇಶ ನೀಡಲಾಗಿತ್ತು. ತನಿಖೆಯಲ್ಲಿ ತಿಲಕ್ ರಾಜ್ ಎಂಬ ಶ್ರೀನಗರ ವಿಮಾನ ನಿಲ್ದಾಣದ ಸುರಕ್ಷಾ ಅಧಿಕಾರಿ ಈ ರೀತಿಯ ತಪ್ಪು ಮಾಡಿದ್ದರು. ಅವರು ವಿಮಲ್ ಕುಮಾರ್ ಹೆಸರಿನಲ್ಲಿ ಬೋರ್ಡಿಂಗ್ ಪಾಸಿನಲ್ಲಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಸುರಕ್ಷಾ ನಿಯಮಗಳನ್ನು ಉಲ್ಲಂಘಟನೆ ಮಾಡಿ ಇವರು ತುರ್ತು ಬಾಗಿಲನ್ನು ತೆರೆದಿದ್ದರು. ಇವರು ಈ ಹಿಂದೆಯೂ ಶ್ರೀನಗರದಲ್ಲಿ ಇದೇ ರೀತಿ ಹಲವು ಬಾರಿ ತುರ್ತು ಬಾಗಿಲು ತೆರೆದಿದ್ದಾರೆ ಎನ್ನಲಾಗಿದೆ.[ಜಿಯಾಖಾನ್ ಸಾವಿನ ಪ್ರಕರಣ, ಎಸ್ಐಟಿ ತನಿಖೆ ಇಲ್ಲ: ಹೈಕೋರ್ಟ್]

(ಚಿತ್ರ ಕೃಪೆ: ಪಿಟಿಐ)

English summary
A major security breach was reported in IndiGo flight as a passenger opened the safety door right before the flight was supposed to take off. The flight was scheduled from Mumbai to Chandigarh when this breach was happened.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X