ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮ್ಯಾಗಿ ನಿಷೇಧ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ನೆಸ್ಲೆ

By Mahesh
|
Google Oneindia Kannada News

ನವದೆಹಲಿ, ಜೂ.11: ಮ್ಯಾಗಿ ನಿಷೇಧ, ನಿರ್ಬಂಧ, ಗುಣಮಟ್ಟ ಪರೀಕ್ಷೆ ವಿವಾದ ಈಗ ಕೋರ್ಟ್ ಮೆಟ್ಟಿಲೇರಿದೆ. ನ್ಯೂಡಲ್ಸ್ ಬಗ್ಗೆ ಆಹಾರ ನಿಯಂತ್ರಣ ಪ್ರಾಧಿಕಾರ ನೀಡಿರುವ ಆದೇಶವನ್ನು ಪರೀಶಿಲಿಸುವಂತೆ ಬಾಂಬೆ ಹೈಕೋರ್ಟಿಗೆ ನೆಸ್ಲೆ ಇಂಡಿಯಾ ಅರ್ಜಿ ಹಾಕಿದೆ.

ಮ್ಯಾಗಿ ನ್ಯೂಡಲ್ಸ್ ಗುಣಮಟ್ಟ ಕಾಯ್ದುಕೊಳ್ಳಲಾಗುತ್ತಿದೆ. ಸಿಂಗಪುರದಲ್ಲಿ ಪರೀಕ್ಷೆ ನಡೆಸಲಾಗಿದ್ದು, ಎಂಎಸ್ ಜಿ ಪ್ರಮಾಣ ತಗ್ಗಿರುವುದು ಕಂಡು ಬಂದಿದೆ ಎಂದು ನೆಸ್ಲೆ ಇಂಡಿಯಾ ಹೇಳಿದೆ. [ನೆಸ್ಲೆ ಸಿಇಒ ಪಾಲ್‌ ಬಲ್ಕೆ ಸುದ್ದಿಗೋಷ್ಠಿ]

Nestle approaches Bombay HC against FSSAI, Maha FDA order

ನೆಸ್ಲೆ ಇಂಡಿಯಾ ಗುರುವಾರ ಕೋರ್ಟ್ ಮೆಟ್ಟಿಲೇರುತ್ತಿದ್ದಂತೆ ಷೇರುಗಳು ಮೇಲಕ್ಕೇರಿದೆ. 6105 ಮೌಲ್ಯದೊಂದಿಗೆ ದಿನದ ವಹಿವಾಟು ಆರಂಭಿಸಿದ ನೆಸ್ಲೆ ಷೇರುಗಳು ಮಧ್ಯಾಹ್ನ 3.20ರ ಸುಮಾರಿಗೆ ಬಿಎಸ್ ಇಯಲ್ಲಿ 6114.00ರು ನಂತೆ ಶೇ 0.95ರಷ್ಟು ಏರಿಕೆ ಕಂಡಿದೆ. ಇದೇ ವೇಳೆ ಎನ್ ಎಸ್ ಇನಲ್ಲಿ 6115.15 ರು ನಂತೆ ಶೇ 0.90 ರಷ್ಟು ಏರಿದೆ. [ಕರ್ನಾಟಕದಲ್ಲಿ ಮ್ಯಾಗಿ ಮಾರಾಟವಿಲ್ಲ]

ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಕಾಯ್ದೆ 2011 ಅನ್ವಯ ಮಹಾರಾಷ್ಟ್ರದ ಆಹಾರ ಮತ್ತು ಔಷಧ ಪ್ರಾಧಿಕಾರ(ಎಫ್ ಡಿಎ) ಜೂ.6, 2015ರಂದು ನೀಡಿರುವ ಆದೇಶ ಹಾಗೂ ಎಫ್ ಎಸ್ ಎಸ್ ಎಐ ಜೂ.5 ರಂದು ನೀಡಿರುವ ಆದೇಶವನ್ನು ಪುನರ್ ಪರಿಶೀಲಿಸುವಂತೆ ಬಾಂಬೆ ಹೈಕೋರ್ಟಿಗೆ ನೆಸ್ಲೆ ಇಂಡಿಯಾ ಕೇಳಿಕೊಂಡಿದೆ. [ಮ್ಯಾಗಿ ನಂತರ ಇತರೆ ಫಾಸ್ಟ್ ಫುಡ್ ಉತ್ಪನ್ನಕ್ಕೂ ಭೀತಿ]

ನೆಸ್ಲೆ ಮ್ಯಾಗಿ ನೂಡಲ್ಸ್ ನಲ್ಲಿ ಮೊನೊ ಸೋಡಿಯಂ ಗ್ಲುಟಮೇಟ್ ಅಂಶ ಅಧಿಕವಾಗಿರುವ ಕಾರಣ ಹಲವಾರು ರಾಜ್ಯಗಳಲ್ಲಿ ಮ್ಯಾಗಿ ಮಾರಾಟ, ಸೇವನೆ ನಿಷೇಧಿಸಲಾಗಿದೆ. ಇದಾದ ಬಳಿಕೆ ನೆಸ್ಲೆ ತನ್ನ ಉತ್ಪನ್ನವನ್ನು ಮಾರುಕಟ್ಟೆಯಿಂದ ಹಿಂಪಡೆದುಕೊಂಡಿದೆ. ಮಹಾರಾಷ್ಟ್ರದಲ್ಲೂ ಮ್ಯಾಗಿ ಬ್ಯಾನ್ ಆಗಿದೆ. (ಪಿಟಿಐ)

English summary
Embroiled in the Maggi controversy, Nestle India on Thursday said it has approached the Bombay High Court to seek a judicial review of the food safety regulator FSSAI's order over quality of its instant noodles.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X