ಉಗ್ರ ಹಫೀಸ್ ಬಹಿಷ್ಕಾರಕ್ಕೆ ಮುಸ್ಲಿಂ ಧರ್ಮಗುರುಗಳಿಂದಲೇ ಒತ್ತಾಯ

Posted By:
Subscribe to Oneindia Kannada

ಮುಂಬೈ, ಆಗಸ್ಟ್ 10: 2012ರಲ್ಲಿ ನಡೆದಿದ್ದ ಮುಂಬೈ ಮೇಲಿನ ಉಗ್ರರ ದಾಳಿಯ ರೂವಾರಿ ಜಮ್ಮಾತ್-ಉಲ್-ದಾವಾ (ಜೆಯುಡಿ) ಮುಖ್ಯಸ್ಥ ಹಫೀಜ್ ಸಯೀದ್ ಮೇಲೆ ನಿಷೇಧ ಹೇರಬೇಕೆಂದು ಭಾರತದಲ್ಲಿರುವ ಸುಮಾರು ಒಂದು ಸಾವಿರಕ್ಕಿಂತಲೂ ಹೆಚ್ಚು ಮುಸ್ಲಿಂ ಧರ್ಮಗುರುಗಳು ವಿಶ್ವಸಂಸ್ಥೆಯನ್ನು ಆಗ್ರಹಿಸಿದ್ದಾರೆ.

ರಾಜಕೀಯ ಪಕ್ಷ ಕಟ್ಟಿದ ಮುಂಬೈ ದಾಳಿ ರೂವಾರಿ ಹಫೀಜ್ ಸಯೀದ್

ಬುಧವಾರ, ಇಲ್ಲಿನ ಮದ್ರಾಸಾ ದರೂಲ್ ಉಲೂಮ್ ಅಲಿ ಹಸನ್ ಅಹ್ಲೆಯಲ್ಲಿ ಸೇರಿದ ಸುಮಾರು ಸಾವಿರಕ್ಕೂ ಹೆಚ್ಚು ಧರ್ಮಗುರುಗಳು ಹಫೀಜ್ ವಿರುದ್ಧ ಠರಾವು ಕೈಗೊಂಡರು.

Muslim clerics urge UN to take action against Hafiz Saeed for anti-India agenda

ಈ ಠರಾವಿನ ಪ್ರತಿಗೆ ಎಲ್ಲಾ ಧರ್ಮಗುರುಗಳೂ ಸಹಿ ಹಾಕಿದ್ದು, ಸೇರಿದಂತೆ ವಿಶ್ವಸಂಸ್ಥೆ ಕಚೇರಿಗೆ ರವಾನಿಸಲಾಯಿತು. ಇದರ ಒಂದು ಪ್ರತಿಯನ್ನು ಪ್ರಧಾನಿ ನರೇಂದ್ರ ಮೋದಿ ಕಚೇರಿಗೂ ಕಳುಹಿಸಲಾಗಿದೆ ಎಂದು ಈ ಧರ್ಮಗುರುಗಳ ಸಭೆ ಏರ್ಪಡಿಸಿದ್ದ ಮುಂಬೈನ ಸರ್ಕಾರೇತರ ಸಂಸ್ಥೆಯಾದ ಇಸ್ಲಾಮಿಕ್ ಡಿಫೆನ್ಸ್ ಸೈಬರ್ ಸೆಲ್ ನ ಮುಖ್ಯಸ್ಥ ಅಬ್ದುರ್ ರಹಮಾನ್ ಅಂಜಾರಿಯಾ ತಿಳಿಸಿದ್ದಾರೆ.

ಮುಂಬೈ ದಾಳಿಯ ಸಂಚುಕೋರ ಹಫೀಜ್ ಸಯೀದ್ ಗೃಹ ಬಂಧನ ವಿಸ್ತರಣೆ

ಭಾರತದ ವಿರೋಧಿ ನಿಲುವು ಹೊಂದಿರುವ ಹಫೀಜ್, ಕೇವಲ ಭಾರತಕ್ಕೆ ಮಾತ್ರವಲ್ಲ ಇಸ್ಲಾಂ ಧರ್ಮಕ್ಕೂ ವಿರೋಧಿಯಾಗಿದ್ದಾರೆ. ಇಂಥ ಉಗ್ರರನ್ನು ನಿಷೇಧಿಸುವ ಅಗತ್ಯವಿದೆ ಎಂದು ಅವರು ತಿಳಿಸಿದರು. ಇದಲ್ಲದೆ, ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿದ್ದು, ಅಲ್ಲಿನ ಸಮಸ್ಯೆ ನಿವಾರಣೆಗೆ ಯಾವುದೇ ತೃತೀಯ ರಾಷ್ಟ್ರಗಳ ಮಧ್ಯಸ್ಥಿಕೆ ಅವಶ್ಯಕತೆಯಿಲ್ಲ ಎಂದೂ ಹೇಳಿದರು.

2015ರಲ್ಲೂ ಅಬ್ದುರ್ ರೆಹಮಾನ್ ಅವರು ಇಸ್ಲಾಮಿಕ್ ಸ್ಟೇಟ್ ಉಗ್ರರ ವಿರುದ್ಧ ಇದೇ ರೀತಿಯಲ್ಲಿ ಮುಸ್ಲಿಂ ಧರ್ಮಗುರುಗಳಿಂದ ಸಹಿ ಸಂಗ್ರಹಿಸುವ ಅಭಿಯಾನ ನಡೆಸಿದ್ದರು.

Once Richest Raymond Man Now Struggling For Money

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Over 1,000 Muslim clerics and imams have called on the United Nations to take action against the 26/11 Mumbai terror attack mastermind and Jamaat-ud-Dawa (JuD) chief Hafiz Saeed for his “anti-India” activities.
Please Wait while comments are loading...