ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿಂದಿ ಆಯುವವರ ಮಗಳು ಎಂಬಿಎ ಪದವೀಧರೆ!

By Srinath
|
Google Oneindia Kannada News

Mumbai poor girl Savita Doke to get MBA with donations
ಮುಂಬೈ, ಫೆ.4-ಬುದ್ಧಿ ಯಾರಪ್ಪನ ಮನೆಯ ಆಸ್ತಿಯೂ ಅಲ್ಲ. ಅದು ಸ್ವಯಾರ್ಜಿತ. ಆದರೂ ಈಗಿನ ಶಿಕ್ಷಣ ಬಿಡಿ. ತುಂಬಾನೇ ದುಬಾರಿ. ಆಸ್ತಿ, ಅಂದರೆ ದುಡ್ಡು ಇಲ್ಲದಿದ್ದರೆ ಶಿಕ್ಷಣವೆಂಬುದು ಕೈಗೆಟುಕದ ಗಗನ ಕುಸುಮವೇ. ಅದರಲ್ಲು ಬೀದಿ ಬದಿ ಚಿಂದಿ ಆಯುವ, ಕೆಳಸ್ತರದ ಮಕ್ಕಳಲ್ಲಿ ಶಿಕ್ಷಣದ ಗಂಧಗಾಳಿಯೂ ಸುಳಿಯುವುದಿಲ್ಲ.

ಆದರೆ ಇಲ್ಲೊಬ್ಬ ಬಾಲಕಿ ಇದ್ದಾಳೆ. ತನ್ನ ಕಷ್ಟಕೋಟಲೆಗಳ ಮಧ್ಯೆಯೇ ಶಿಕ್ಷಣದತ್ತ ಗಮನಹರಿಸಿ, ಇದೀಗ ಎಂಬಿಎ ಪದವಿ ಪಡೆಯುವ ಹಂತಕ್ಕೆ ಬೆಳೆದು ನಿಂತಿದ್ದಾಳೆ. ಈ ಸರಸ್ವತೀ ಪುತ್ರಿಗೆ ಒಂದು ನಮಸ್ಕಾರ! ಮಾಯಾನಗರಿ ಮುಂಬೈನಲ್ಲಿ ಸವಿತಾ ದೋಕೆ ಎಂಬ ಹೆಣ್ಣುಮಗಳಿದ್ದಾಳೆ. ಆಕೆಯೇ ಈ ಕಥೆಯ ನಾಯಕಿ.

ಅವರಮ್ಮ ಹಳೆ ಸಾಮಾನು ಮಾರಾಟ ಮಾಡಿ ಬದುಕು ರೂಪಿಸಿಕೊಳ್ಳುತ್ತಿದ್ದಾಳೆ. ಇನ್ನು, ಅಪ್ಪ ಮನೆ ಮನೆಗೂ ಹೋಗಿ ಹಳೆ ಬಟ್ಟೆ ವ್ಯಾಪಾರ ಮಾಡಿ, ಕುಟುಂಬದವರ ಹೊಟ್ಟೆ ತುಂಬಿಸುತ್ತಾನೆ. ಅದರಾಚೆಗೆ ಈ ಅಪ್ಪ-ಅಮ್ಮನಿಂದ ಹೆಚ್ಚಿನದೇನೂ ಆಗದು. ಆದರೆ ಅವರ ಮುದ್ದಿನ ಮಗಳು ಸವಿತಾ ಅಷ್ಟಕ್ಕೇ ನಮ್ಮ ಹಣೆಬರಹವೇ ಇಷ್ಟು ಎಂದುಕೊಂಡು ಸುಮ್ಮನಾಗಲಿಲ್ಲ. ಕುಟುಂಬದ ಆದಾಯ ದಿನಕ್ಕೆ 250 ರೂ ಇರುವಾಗ ಶಿಕ್ಷಣಕ್ಕೆ ಅಂತ ಎಲ್ಲಿಂದ ದುಡ್ಡು ತರೋದು.

22 ವರ್ಷದ ಸವಿತಾ ಹಾಗೂಹೀಗೂ ಕಷ್ಟಪಟ್ಟು ಪದವಿ ಮುಗಿಸಿದ್ದಳು. ಆದರೆ ಅಷ್ಟಕ್ಕೇ ಸುಮ್ಮನಾಗದೆ, ಮುಂದೆ ಪಿಜ್ಜಾ ಅಂಗಡಿಯಲ್ಲಿ ಕೆಲಸಕ್ಕೆ ಸೇರಿಕೊಂಡು ತಿಂಗಳಿಗೆ 4,500 ರೂ ಸಂಬಳ ಎಣಿಸತೊಡಗಿದಳು. ಮುಂದೆ ಶಿಕ್ಷಣಕ್ಕೆ ಪೂರ್ಣವಿರಾಮ ಹಾಕದೆ ಪಿಜ್ಜಾದಲ್ಲಿ ಕೆಲಸ ಮಾಡಿಕೊಂಡಿದ್ದೇ ಸಮೀಪದ ಕಾಲೇಜಿನಲ್ಲಿ MBA ಪದವಿ ಶಿಕ್ಷಣಕ್ಕೆ ಸೇರಿಕೊಂಡಳು.

ಹುಟ್ಟುತ್ತಾ ತನ್ನೊಂದಿಗೆ ಬಂದಿದ್ದ ದಲಿತ ಹಣೆಪಟ್ಟಿಯನ್ನು ಬಳಸಿಕೊಂಡು ಮೀಸಲಾತಿಯಡಿ ಸೀಟು ಪಡೆದಿದ್ದೂ ಅಲ್ಲದೆ ವಾರ್ಷಿಕ ಶುಲ್ಕವಾದ 1 ಲಕ್ಷ ರೂ. ಗಳನ್ನು ಅರ್ಧಕ್ಕೆ ತಗ್ಗಿಸಿಕೊಂಡಳು. ಸರಕಾರವೂ 25 ಸಾವಿರ ರೂ ಶಿಷ್ಯವೇತನ ನೀಡಿತ್ತು. ಅಷ್ಟೇ ಮೊತ್ತವನ್ನು ತನ್ನ ಸಂಬಳದಿಂದಲೂ ಕೂಡಿಹಾಕಿದಳು.

ಅಲ್ಲಿಗೆ ದುಡ್ಡಿನ ವ್ಯವಹಾರ ಚುಕ್ತಾ ಆಯಿತು. ಆದರೆ ದುಡ್ಡಿದ್ದುಬಿಟ್ರೆ ಜ್ಞಾನಾರ್ಜನೆ ಆಗೋದಿಲ್ಲ ಅಲ್ವಾ? ಅದೂ ತಾನು ದಿನಕ್ಕೆ 9 ಗಂಟೆ ಕಾಲ ಪಿಜ್ಜಾ ಅಂಗಡಿಯಲ್ಲೇ ದುಡಿಯಬೇಕಾಗಿರುವಾಗ ಓದಿಗೆ ಅಂತ ಎಲ್ಲಿಂದ ಸಮಯ ಹೊಂದಿಸುವುದು. ಮುಂದಿನ ವರ್ಷದ ಶುಲ್ಕ ತುಂಬುವುದು ಹೇಗೆ ಎಂಬುದೇ ಆಕೆಯ ತಲೆಯಲ್ಲಿ ಗಿರಕಿ ಹೊಡೆಯುತ್ತಿತ್ತು. ಆದ ಸ್ಥಳೀಯ ದೈನಿಕವೊಂದು ಆಕೆಯ ನೆರವಿಗೆ ಬಂದು, ಶಿಕ್ಷಣಕ್ಕಾಗಿ ಅವಳು ಪಡಿಪಾಟಿಲು ಬೀಳುತ್ತಿರುವುದನ್ನು ವರದಿ ಮಾಡಿತು.

ಇದೀಗ ಅವಳ ಭಾಗ್ಯದ ಬಾಗಿಲು ತೆರೆದಿದೆ. ಎಲ್ಲೆಲ್ಲಿಂದಲೋ ಹಣ ಹರಿದುಬರುತ್ತಿದೆ. ಪ್ರಪಂಚ ಇಷ್ಟೊಂದು ಸಕಾರಾತ್ಮಕವಾಗಿ ಸ್ಪಂದಿಸುತ್ತದೆ ಎಂಬುದನ್ನು ತಿಳಿದು ಓದುವ ಉತ್ಸಾಹ ಮತ್ತಷ್ಟು ಹೆಚ್ಚಾಗಿದೆ ಎನ್ನುತ್ತಾಳೆ ಭಾವಿ ಎಂಬಿಎ ಪದವೀಧರೆ!

English summary
Mumbai Rag pickers daughter Savita Doke to get MBA with donations. Her mother sells scrap for a living. Her father goes door to door and trades in old clothes. But a city paper reported her problem and overnight her destiny seems to have changed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X