ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾ ಶ್ರೀಮಂತರ ಪಟ್ಟಿಗೆ ಸೇರಿದ ಮುಂಬೈ ನಗರ

By Vanitha
|
Google Oneindia Kannada News

ಮುಂಬೈ,ಮಾರ್ಚ್,04: ದೇಶದ ವಾಣಿಜ್ಯ ನಗರಿ ಮುಂಬೈ ದೇಶದಲ್ಲಿಯೇ ಹೆಚ್ಚಿನ ಶ್ರೀಮಂತರನ್ನು ಒಳಗೊಂಡ ನಗರ ಎಂಬ ಖ್ಯಾತಿ ಪಡೆದುಕೊಂಡಿದೆ ಎಂದು ನ್ಯೂ ವರ್ಡ್ ವೆಲ್ತ್ ಸಂಸ್ಥೆ (ಸಂಪತ್ತಿಗೆ ಸಂಬಂಧಿಸಿದ ಗುಪ್ತಚರ ಕಂಪೆನಿ) ತನ್ನ ವರದಿಯಲ್ಲಿ ಹೇಳಿದೆ.

ನೈಟ್ ಫ್ರಾಂಕ್ ವೆಲ್ತ್ ರಿಪೋರ್ಟ್- 2016ರ ಪ್ರಕಾರ ಮುಂಬೈ 1,094, ನವದೆಹಲಿ 545 ಮಂದಿ ಧನಿಕರನ್ನು ಒಳಗೊಂಡಿದೆ. ಮುಂದಿನ ದಶಕಕ್ಕೆ ಈ ಸಂಖ್ಯೆ ಮುಂಬಯಿಯಲ್ಲಿ 2,243ಕ್ಕೆ ಏರಿಕೆ ಕಂಡರೆ, ದಿಲ್ಲಿಯಲ್ಲಿ 1,128ಕ್ಕೆ ಹೆಚ್ಚಳ ಕಾಣಲಿದೆ.[ಉಡುಪಿಯಲ್ಲಿ 'ಹೆಲಿ ಟೂರಿಸಂ', ರಾಜ್ಯದಲ್ಲೇ ಪ್ರಥಮ]

Mumbai

ಈ ಪಟ್ಟಿಯನ್ನು ಹೇಗೆ ಸಿದ್ಧಗೊಳಿಸಲಾಗಿದೆ?

204 ಕೋಟಿ ರೂ. ಗಳಿಗೂ ಹೆಚ್ಚು ಅಧಿಕ ಆಸ್ತಿಯನ್ನು ಹೊಂದಿರುವ ವ್ಯಕ್ತಿಗಳನ್ನು ಶ್ರೀಮಂತರ ಪಟ್ಟಿಯಲ್ಲಿ ಸೇರಿಸಲಾಗಿದೆ. ಒಟ್ಟಾರೆ ವಿಶ್ವದಾದ್ಯಂತ 1,87,500 ಮಂದಿ ಶ್ರೀಮಂತರಿದ್ದಾರೆ ಎಂದು ನ್ಯೂ ವರ್ಲ್ಡ್ ವೆಲ್ತ್ ಹೇಳಿದೆ. 2025ರ ಹೊತ್ತಿಗೆ ವಿಶ್ವದ ಶತ ಕೋಟ್ಯಾಧಿಪತಿಗಳ ಸಂಖ್ಯೆ ಶೇ.6 ರಷ್ಟು ಮಂದಿ ಭಾರತೀಯರು ಇರುತ್ತಾರೆ ಎಂದು ಅಂದಾಜಿಸಿದೆ.[ಚಿನ್ನಾಭರಣ ಮಳಿಗೆಗಳು ಇಂದು ಮತ್ತು ನಾಳೆಯೂ ಬಂದ್]

ರಾಷ್ಟ್ರಗಳಲ್ಲಿ ಯಾವುದು ಮುಂಚೂಣಿಯಲ್ಲಿದೆ?

ಶ್ರೀಮಂತ ದೇಶಗಳ ಪಟ್ಟಿಯಲ್ಲಿ ಲಂಡನ್ ದೇಶವು ಮೊದಲ ಸ್ಥಾನದಲ್ಲಿದ್ದರೆ, ಅಮೆರಿಕಾದ ನ್ಯೂಯಾರ್ಕ್ ಎರಡನೇ ಸ್ಥಾನದಲ್ಲಿದೆ. ಜಗತ್ತಿನ ಪ್ರಸಿದ್ಧ ನಗರಗಳಲ್ಲಿನ ಮನೆ ಮತ್ತು ಕಚೇರಿ ಸ್ಥಳದ ಬಾಡಿಗೆಯ ವಾರ್ಷಿಕ ವೆಚ್ಚವನ್ನು ಆಧರಿಸಿ ಈ ಪಟ್ಟಿಯನ್ನು ರೂಪಿಸಲಾಗಿದೆ.

English summary
Mumbai is the only Indian city in the top 25 cities globally for multi-millionaires
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X