ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬೈ: ಚಲಿಸುವ ಕಾರಿನಲ್ಲಿ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ

|
Google Oneindia Kannada News

ಮುಂಬೈ, ಜೂನ್ 7: ಇತ್ತೀಚೆಗಂತೂ ಚಲಿಸುವ ಕಾರಿನಲ್ಲಿ ಸಾಮೂಹಿಕ ಅತ್ಯಾಚಾರ ನಡೆಯುತ್ತಿರುವ ಅದೆಷ್ಟು ಘಟನೆಗಳು ವರದಿಯಾಗುತ್ತಿವೆಯೋ! ಈ ಪಟ್ಟಿಗೆ ಹೊಸ ಸೇರ್ಪಡೆ, ಮುಂಬೈಯಲ್ಲಿ ನಿನ್ನೆ(ಜು.6) ನಡೆದ ಘಟನೆ.

ಚಲಿಸುತ್ತಿರುವ ಕಾರಿನಲ್ಲಿ ಎಂಟು ಗಂಟೆ ಅತ್ಯಾಚಾರ ಮಾಡಿದ ಅಮಾನವೀಯರುಚಲಿಸುತ್ತಿರುವ ಕಾರಿನಲ್ಲಿ ಎಂಟು ಗಂಟೆ ಅತ್ಯಾಚಾರ ಮಾಡಿದ ಅಮಾನವೀಯರು

ಮುಂಬೈನ ಚರ್ಕೋಪ್ ಎಂಬಲ್ಲಿ ನಿನ್ನೆ ಬೆಳಗ್ಗೆ, 7 ಗಂಟೆಯ ಸಮಯದಲ್ಲಿ ಕಾಲೇಜಿಗೆ ಹೊರಟಿದ್ದ ಯುವತಿಯೊಬ್ಬಳನ್ನು ಕಾರಿನಲ್ಲಿ ಬಂದ ಮೂವರು ದುಷ್ಕರ್ಮಿಗಳು ಅಪಹರಿಸಿದ್ದರು. ಚಲಿಸುತ್ತಿರುವ ಕಾರಿನಲ್ಲಿಯೇ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಲ್ಲದೆ, ನಂತರ ಆಕೆಯನ್ನು ನಿರ್ಜನ ಪ್ರದೇಶವೊಂದಕ್ಕೆ ಕರೆದೊಯ್ದು ಮತ್ತೆ ಅತ್ಯಾಚಾರ ಎಸಗಿದ್ದರು.

Mumbai girl gang raped inside a moving car

ಸದ್ಯಕ್ಕೆ ಸಂತ್ರಸ್ಥೆಯನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಅತ್ಯಾಚಾರಿಗಳ ವಿರುದ್ಧ ಸಂತ್ರಸ್ಥೆಯ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿಗಳ ಬಗ್ಗೆ ಪೊಲೀಸರಿಗೆ ಯಾವುದೇ ಸುಳಿವೂ ಸಿಕ್ಕಿಲ್ಲ. ಹೆಚ್ಚಿನ ತನಿಖೆ ನಡೆಯುತ್ತಿದೆ.

ಚಲಿಸುತ್ತಿದ್ದ ವಾಹನದಲ್ಲಿ ನಡೆದ ಹತ್ತು ಅತ್ಯಾಚಾರಗಳುಚಲಿಸುತ್ತಿದ್ದ ವಾಹನದಲ್ಲಿ ನಡೆದ ಹತ್ತು ಅತ್ಯಾಚಾರಗಳು

ಇತ್ತೀಚೆಗೆ ತಾನೇ ಹರ್ಯಾಣದ ಯುವತಿಯೊಬ್ಬರ ಮೇಲೆ ಕಾರಿನಲ್ಲಿ ಕಾಮುಕರು ಎಂಟುಗಂಟೆಗಳ ಕಾಲ ಸತತ ಅತ್ಯಾಚಾರ ನಡೆಸಿದ್ದರು. ಹರ್ಯಾಣಾ, ದೆಹಲಿ ಮತ್ತು ಉತ್ತರ ಪ್ರದೇಶ ಮೂರೂ ರಾಜ್ಯಗಳನ್ನೂ ಎಂಟು ಗಂಟೆ ಸುತ್ತುಹೊಡೆಯುತ್ತ, ಆಕೆಯ ಮೇಲೆ ನಿರಂತರ ಅತ್ಯಾಚಾರ ನಡೆಸಿದ್ದರು. ಈ ಘಟನೆ ನಡೆದ ಕೆಲವೇ ದಿನಗಳಲ್ಲಿ ವಾಣಿಜ್ಯ ನಗರಿ ಮುಂಬೈಯಲ್ಲೂ ಇಂಥದೇ ಘಟನೆ ನಡೆದಿರುವುದು ಆತಂಕ ಸೃಷ್ಟಿಸಿದೆ.

English summary
In a shameful incident, a college girl was allegedly kidnapped and raped inside a moving car in Charkop area in Mumbai. The incident took place on July 6th morning. No arrests have been made yet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X