ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬೈ ರಾಷ್ಟ್ರೀಯ ಹೆದ್ದಾರಿ ಅಪಘಾತದಲ್ಲಿ 11 ಜನ ಸಾವು

By Mahesh
|
Google Oneindia Kannada News

ಮುಂಬೈ, ಮೇ.24: ಮುಂಬೈ -ಅಹಮದಾಬಾದ್ ಹೆದ್ದಾರಿಯಲ್ಲಿ ಸೋಮವಾರ ಮುಂಜಾನೆ ಸಂಭವಿಸಿದ ಭೀಕರ ಅಪಘಾತದಲ್ಲಿ 5 ವರ್ಷ ಹೆಣ್ಣು ಮಗು ಸೇರಿದಂತೆ 11 ಮಂದಿ ಸಾವನ್ನಪ್ಪಿದ್ದಾರೆ.

ಮಹಾರಾಷ್ಟ್ರದ ಪಲ್ಘಾರ್ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 8ರಲ್ಲಿ ಬಸ್ ಹಾಗೂ ಮಿನಿ ಬಸ್ ನಡುವೆ ಸಂಭವಿಸಿದ ಅಪಘಾತದಲ್ಲಿ 11 ಜನ ಸ್ಥಳದಲ್ಲೇ ಮೃತಪಟ್ಟಿದ್ದರೆ, 15ಕ್ಕೂಅಧಿಕ ಮಂದಿಗೆ ತೀವ್ರ ಗಾಯಗಳಾಗಿವೆ.

ಸೂರತ್ ಕಡೆ ತೆರಳುತ್ತಿದ್ದ ದೊಡ್ದ ಬಸ್ ಎದುರಿಗೆ ಬರುತ್ತಿತ್ತು, ಮಿನಿ ಬಸ್ ಚಾಲಕ ನಿದ್ದೆ ಮಂಪರಿನಲ್ಲಿ ಬಸ್ ನೋಡಲಾಗದೆ ನೇರವಾಗಿ ಡಿಕ್ಕಿ ಹೊಡೆಸಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

Mumbai NH 8: 11 killed, 17 injured as vehicle collides with bus

ತಲಸರಿ ಗ್ರಾಮದ ಬಳಿ ನಡೆದ ಈ ದುರ್ಘಟನೆಯಲ್ಲಿ ಮೃತರಾದವರ ಪೈಕಿ 6 ಜನ ಪುರುಷರ, 5 ಜನ ಮಹಿಳೆಯರು ಓರ್ವ ಬಾಲಕಿ ಇದ್ದಾರೆ. ಇವೆರೆಲ್ಲರ ಗುರುತು ಪರಿಚಯ ಇನ್ನೂ ಸಿಕ್ಕಿಲ್ಲ ಎಂದು ಜಿಲ್ಲಾ ಪೊಲೀಸ್ ವಕ್ತಾರ ಮನೋಜ್ ಲಹಾಂಗೆ ಹೇಳಿದ್ದಾರೆ.

ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ದೇಶದ ಅತ್ಯಂತ ಹೆಚ್ಚು ಸಂಚಾರ ದಟ್ಟಣೆ ಹೊಂದಿರುವ ರಾಷ್ಟ್ರೀಯ ಹೆದ್ದಾರಿಗಳ ಪೈಕಿ ಎನ್ ಎಚ್ 8 ಕೂಡಾ ಒಂದಾಗಿದ್ದು, ಮುಂಬೈ -ಅಹಮದಾಬಾದ್ ನಡುವೆ ಸಂಪರ್ಕ ಒದಗಿಸುತ್ತದೆ.

ಕರ್ನೂಲ್ : ಮತ್ತೊಂದು ದುರಂತದಲ್ಲಿ ಮನೆಯೊಂದಕ್ಕೆ ಸ್ಕಾರ್ಪಿಯೋ ವಾಹನ ನುಗ್ಗಿದ ಪರಿಣಾಮ 7 ಮಂದಿ ಸಾವನ್ನಪ್ಪಿರುವ ಘಟನೆ ಸೋಮವಾರ ನಡೆದಿದೆ.

ತಿರುಮಲದ ಕಡೆಗೆ ತೆರಳುತ್ತಿದ್ದ ಸ್ಕಾರ್ಪಿಯೋ ವಾಹನ ಅತಿವೇಗದಿಂದ ಮನೆಯೊಂದರೊಳಗೆ ನುಗ್ಗಿದೆ. ಈ ಘಟನೆಯಲ್ಲಿ 7 ಮಂದಿ ಸಾವನ್ನಪ್ಪಿದ್ದರೆ 2 ಇಬ್ಬರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.(ಪಿಟಿಐ)

English summary
Eleven people, including a five-year-old girl, were killed and 17 others injured when a vehicle collided head-on with a bus on Mumbai-Ahmedabad Highway here in the wee hours Monday, police said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X