ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಾಯಿಯನ್ನು ಕೊಂದು ರಕ್ತದಲ್ಲಿ ಸ್ಮೈಲಿ ಬರೆದಿದ್ದ ಪಾತಕಿ ಪುತ್ರನ ಬಂಧನ

ಶೀನಾ ಬೋರಾ ಹತ್ಯೆ ಪ್ರಕರಣದ ತನಿಖೆ ನಡೆಸಿದ್ದ ಪೊಲೀಸ್​ ಅಧಿಕಾರಿ ಧ್ಯಾನೇಶ್ವರ್​ ಗನೋರೆ ಅವರ ಪತ್ನಿ ದೀಪಾಲಿ ಅವರನ್ನು ಹತ್ಯೆಗೈದು ಪರಾರಿಯಾಗಿದ್ದ ಅವರ ಮಗನನ್ನು ಗುರುವಾರದಂದು ಪೊಲೀಸರು ಬಂಧಿಸಿದ್ದಾರೆ.

By ವಿಕಾಸ್ ನಂಜಪ್ಪ
|
Google Oneindia Kannada News

ಮುಂಬೈ, ಮೇ 25: ಶೀನಾ ಬೋರಾ ಹತ್ಯೆ ಪ್ರಕರಣದ ತನಿಖೆ ನಡೆಸಿದ್ದ ಪೊಲೀಸ್​ ಅಧಿಕಾರಿ ಧ್ಯಾನೇಶ್ವರ್​ ಗನೋರೆ ಅವರ ಪತ್ನಿ ದೀಪಾಲಿ ಅವರನ್ನು ಹತ್ಯೆಗೈದು ಪರಾರಿಯಾಗಿದ್ದ ಅವರ ಮಗ ಸಿದ್ದಾಂತ್ ನನ್ನು ಗುರುವಾರದಂದು ಜೋಧ್ ಪುರದಲ್ಲಿ ಬಂಧಿಸಲಾಗಿದೆ. ತನ್ನ ತಾಯಿಯನ್ನು ಕೊಂದು ಆಕೆಯ ರಕ್ತದಲ್ಲೇ ಸ್ಮೈಲಿ ಚಿತ್ರ ಬಿಡಿಸಿ, ಪರಾರಿಯಾಗಿದ್ದ.

ರಕ್ತದ ಮಡುವಿನಲ್ಲಿ ಬಿದ್ದಿದ್ದ ದೀಪಾಲಿ ಅವರ್ ಶವದ ಪಕ್ಕ ಸಿಕ್ಕ ಚಾಕು ಮತ್ತು ರಕ್ತದಿಂದಲೇ ಬರೆದ ಒಂದು ವಾಕ್ಯ ' 'ನಂಗೆ ಇವರ ಸಹವಾಸ ಸಾಕಾಗಿದೆ, ನನ್ನನ್ನು ಹಿಡಿಯಿರಿ, ನೇಣಿಗೆ ಹಾಕಿ...'ಕೊಲೆಗಾರನ ಪತ್ತೆಗೆ ಮಹತ್ವದ ಸುಳಿವು ನೀಡಿತ್ತು.ತಾಯಿ ಪಾಕೆಟ್ ಮನಿ ನೀಡಿಲ್ಲ ಎಂಬ ಕಾರಣಕ್ಕೇ ಆಕೆಯನ್ನು ಕೊಲೆಮಾಡಲಾಗಿದೆ ಎಂದು ಪೊಲೀಸರು ಮೊದಲ ಹಂತದ ತನಿಖೆಯಲ್ಲಿ ಶಂಕಿಸಿದ್ದರು. ಈಗ ವಿಚಾರಣೆ ಬಳಿಕ ಸ್ಪಷ್ಟತೆ ಸಿಗಲಿದೆ.[ಶೀನಾ ಬೋರಾ ಕೊಲೆ ಕೇಸ್: ಇಂದ್ರಾಣಿ, ಪೀಟರ್ ವಿರುದ್ಧ ಸಿಬಿಐ ಆರೋಪ ಪಟ್ಟಿ]

Man who drew smiley in blood next to mother's body arrested

ಧ್ಯಾನೇಶ್ವರ್​ ಗನೋರೆ ಅವರ ಪತ್ನಿ 42 ವರ್ಷ ವಯಸ್ಸಿನ ದೀಪಾಲಿ ಗನೋರಿ ಅವರು ಮಂಗಳವಾರ ಮುಂಜಾನೆ 3.30ರ ಸುಮಾರಿಗೆ ಹತ್ಯೆಗೀಡಾಗಿದ್ದಾರೆ. ಸಾಂತಾಕ್ರೂಜ್ ನಲ್ಲಿರುವ ತಮ್ಮ ನಿವಾಸಕ್ಕೆ ಬಂದ ಧ್ಯಾನೇಶ್ವರ್ ಅವರಿಗೆ ಪತ್ನಿ ಶವ ಕಂಡು ಹೌಹಾರಿದ್ದರು.[ಶೀನಾ ಬೋರಾ ಹತ್ಯೆ ಕೇಸ್ ತನಿಖಾಧಿಕಾರಿ ಪತ್ನಿ ಕೊಲೆ]

ಜತೆಗೆ ಮಗ ಕೂಡಾ ನಾಪತ್ತೆಯಾಗಿದ್ದ. 2012ರ ಶೀನಾ ಬೋರಾ ಹತ್ಯೆ ಪ್ರಕರಣದಲ್ಲಿ ಶೀನಾ ಬೋರಾ ಅವರ ತಾಯಿ ಇಂದ್ರಾಣಿ ಮುಖರ್ಜಿ ಮತ್ತು ಇಂದ್ರಾಣಿ ಮುಖರ್ಜಿಯ ಪತಿ ಪೀಟರ್​ ಮುಖರ್ಜಿ ಪ್ರಮುಖ ಆರೋಪಿಗಳಾಗಿದ್ದಾರೆ.[ಶೀನಾ ಬೊರಾ ಹತ್ಯೆ: ಸಂಚು ರೂಪಿಸಿದ್ದು ಪೀಟರ್ ಮುಖರ್ಜಿಯೇ!]

ಈ ಪ್ರಕರಣದ ತನಿಖೆಯನ್ನು ಮೊದಲಿಗೆ ಮುಂಬೈ ಪೊಲೀಸರು ಕೈಗೆತ್ತಿಕೊಂಡಿದ್ದರು. ಈ ತನಿಖಾ ತಂಡದಲ್ಲಿ ಧ್ಯಾನೇಶ್ವರ್ ಅವರು ಕೂಡಾ ಇದ್ದರು. ನಂತರ ಸಿಬಿಐಗೆ ಪ್ರಕರಣವನ್ನು ಹಸ್ತಾಂತರಿಸಲಾಗಿದೆ.

English summary
The son who killed his mother in Mumbai and drew a smiley in blood has been arrested from Jodhpur. The wife of an inspector who probed the Sheena Bora murder case was found dead in Mumbai and the cops had launched a manhunt for the 21 year old son.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X