ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರ ಕಟ್ಟಡ ಕುಸಿತ, ಐವರು ಕನ್ನಡಿಗರ ದುರ್ಮರಣ

|
Google Oneindia Kannada News

ಮುಂಬೈ, ಆಗಸ್ಟ್ 4 : ಮಹಾರಾಷ್ಟ್ರದ ನೌಪಾಡದಲ್ಲಿ ಕುಸಿದ ಕಟ್ಟಡದ ಅವಶೇಷಗಳಡಿ ಸಿಲುಕಿ 5 ಕನ್ನಡಿಗರು ಮೃತಪಟ್ಟಿದ್ದಾರೆ. ಮೃತಪಟ್ಟರೆಲ್ಲಾ ಬಂಟ್ವಾಳದವರು ಎಂದು ತಿಳಿದುಬಂದಿದೆ. ಮೃತಪಟ್ಟವರನ್ನು ಪಾಂಡುರಂಗ ಭಟ್ (62), ಮೀರಾ ಪಾಂಡುರಂಗ ಭಟ್ (58), ಸುಬ್ರಾಯ್ ಭಟ್ (56), ರುಚಿತ ಭಟ್ (25), ರಶ್ಮಿ ರಾಮಚಂದ್ರ ಭಟ್ (25) ಎಂದು ಗುರುತಿಸಲಾಗಿದೆ.

ಕಟ್ಟಡ ಕುಸಿತ 11 ಸಾವು : ಮಹಾರಾಷ್ಟ್ರದ ನೌಪಾಡದಲ್ಲಿ ಮೂರು ಅಂತಸ್ತಿನ ಕಟ್ಟಡ ಕುಸಿದು ಬಿದ್ದಿದ್ದು 11 ಜನರು ಸಾವನ್ನಪ್ಪಿದ್ದಾರೆ. ಅವಶೇಷಗಳ ಅಡಿಯಿಂದ 8 ಜನರನ್ನು ರಕ್ಷಣೆ ಮಾಡಲಾಗಿದ್ದು, ಇನ್ನೂ 9 ಜನರು ಸಿಲುಕಿರುವ ಸಾಧ್ಯತೆ ಇದೆ.

death

ಮಂಗಳವಾರ ಮುಂಜಾನೆ 2.30ರ ಸುಮಾರಿಗೆ 50 ವರ್ಷಗಳಷ್ಟು ಹಳೆಯದಾದ ಮೂರು ಅಂತಸ್ತಿನ ಕಟ್ಟಡ ಕುಸಿದು ಬಿದ್ದಿದೆ. ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ 8 ಜನರನ್ನು ರಕ್ಷಣೆ ಮಾಡಿದ್ದಾರೆ. [ಥಾಣೆ ದುರಂತ: ಮೃತ್ಯುಕೂಪವಾದ ಮಾತೃಛಾಯಾ ಕಟ್ಟಡ]

ಕಟ್ಟಡಗಳ ಅವಶೇಷಗಳನ್ನು ತೆರವುಗೊಳಿಸಿ ಸಿಲುಕಿಕೊಂಡವರನ್ನು ರಕ್ಷಣೆ ಮಾಡಲು ಅಗ್ನಿ ಶಾಮಕ ದಳದವರು ಕಾರ್ಯಾಚರಣೆ ಮುಂದುವರೆಸಿದ್ದಾರೆ. ಸುಮಾರು 9 ಜನರು ಅವಶೇಷಗಳ ಅಡಿ ಸಿಲುಕಿರಬಹುದು ಎಂದು ಶಂಕಿಸಲಾಗಿದೆ. [ಬೆಂಗಳೂರು : ಮೂವರ ಜೀವ ತಗೆದ 6 ಅಂತಸ್ತಿನ ಕಟ್ಟಡ]

ಕಟ್ಟಡ ಶಿಥಿಲಗೊಂಡಿದೆ ಎಂದು ಹಲವು ಬಾರಿ ಜಿಲ್ಲಾಡಳಿತ ಅಲ್ಲಿನ ನಿವಾಸಿಗಳಿಗೆ ಮಾಹಿತಿ ನೀಡಿತ್ತು. ಆದರೂ ಸಹ ನಿವಾಸಿಗಳು ಮನೆಗಳನ್ನು ತೆರವುಗೊಳಿಸಿರಲಿಲ್ಲ. ಇಂದು ಮುಂಜಾನೆ ಕಟ್ಟಡ ಕುಸಿದು ಬಿದ್ದಿದೆ.

English summary
11 people have died after a three-store building collapsed in Naupada, Maharashtra. At least 8 people have been pulled out of the debris so far. The building collapsed around 2.30 am on Tuesday early morning.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X