ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಯಾಖಾನ್ ಸಾವು ಪ್ರಕರಣ, ಮರು ತನಿಖೆ ಇಲ್ಲ: ಸಿಬಿಐ

By Mahesh
|
Google Oneindia Kannada News

ಮುಂಬೈ, ಜೂನ್ 16: ಬಾಲಿವುಡ್ ನಟಿ ಜಿಯಾ ಖಾನ್ ಅವರು ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾರೆ. ಈ ಪ್ರಕರಣದ ಮರು ತನಿಖೆ ಅಗತ್ಯವಿಲ್ಲ ಎಂದು ಸಿಬಿಐ ತಂಡ, ಬಾಂಬೆ ಹೈಕೋರ್ಟಿಗೆ ಹೇಳಿದೆ. ಈ ಮೂಲಕ ಜಿಯಾ ಖಾನ್ ಸಾವಿನ ಪ್ರಕರಣದಲ್ಲಿ ಎಸ್ ಐಟಿ ತನಿಖೆಗಾಗಿ ಮನವಿ ಮಾಡಿದ್ದ ಜಿಯಾ ಅವರ ತಾಯಿ ರಬಿಯಾ ಅವರಿಗೆ ಹಿನ್ನಡೆಯಾಗಿದೆ.

ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ(ಎಸ್ ಐಟಿ)ವನ್ನು ನೇಮಿಸಬೇಕು ಹಾಗೂ ಸಿಬಿಐ ತಂಡ ತನಿಖೆಯಲ್ಲಿ ಎಫ್​ಬಿಐ ಸಹಾಯ ಪಡೆದುಕೊಳ್ಳಬೇಕು ಎಂದು ಜಿಯಾ ಖಾನ್ ಅವರ ತಾಯಿ ರಬಿಯಾ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ಸಂದರ್ಭದಲ್ಲಿ ಸಿಬಿಐ ತಂಡ ತನ್ನ ಹೇಳಿಕೆಯನ್ನು ನೀಡಿದೆ.

ಪಾಂಚೋಲಿ ದಂಪತಿಯ ಪುತ್ರ ಸೂರಜ್ ನಟಿ ಜಿಯಾ ಖಾನ್ ಆತ್ಮಹತ್ಯೆಗೆ ಪ್ರೇರೇಪಣೆ ನೀಡಿದ ಆರೋಪವನ್ನು ಎದುರಿಸುತ್ತಿದ್ದಾನೆ. ಜಿಯಾ ಅವರ ತಾಯಿ ರಬಿಯಾ ಖಾನ್ ಅವರ ಕೋರಿಕೆಯ ಮೇರೆಗೆ ಈ ಪ್ರಕರಣದ ತನಿಖೆಯನ್ನು ಬಾಂಬೆ ಹೈಕೋರ್ಟ್ ಮುಂಬೈ ಪೊಲೀಸರಿಂದ ಸಿಬಿಐ ವಶಕ್ಕೆ ನೀಡಿತ್ತು.[ಜಿಯಾ ಅಮ್ಮನ ಮೇಲೆ 100 ಕೋಟಿ ಕೇಸ್]

ಬ್ರಿಟಿಷ್-ಅಮೆರಿಕನ್ ನಟಿ ಜಿಯಾ ಜುಹು ಅಪಾರ್ಟ್ಮೆಂಟ್ ನಲ್ಲಿ 2013ರ ಜೂನ್3ರಂದು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುನ್ನ 6 ಪುಟಗಳ ಡೆಟ್ ನೋಟ್‌ ಬರೆದಿದ್ದರು. ಸೂರಜ್ ಹಾಗೂ ತನ್ನ ನಡುವಿನ ಸಂಬಂಧವನ್ನು ತಿಳಿಸಿದ್ದರು. ಡೆತ್ ನೋಟ್ ಆಧಾರದ ಮೇಲೆ ಕಳೆದ ವರ್ಷ ಜೂನ್ 10 ರಂದು ಸೂರಜ್‌ನನ್ನು ಮುಂಬೈ ಪೊಲೀಸರು ಬಂಧಿಸಿದ್ದರು. ನಂತರ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ. ಮುಂದೇನು?

ರಬಿಯಾ ಅವರ ಮುಂದಿನ ನಡೆ ಏನು?

ರಬಿಯಾ ಅವರ ಮುಂದಿನ ನಡೆ ಏನು?

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಬಿಯಾ ಅವರು ಸಿಬಿಐ ಹೇಳಿಕೆಗೆ ಪ್ರತಿಕ್ರಿಯಿಸಲು ಎರಡು ವಾರಗಳ ಕಾಲಾವಕಾಶವನ್ನು ಜಸ್ಟೀಸ್ ನರೇಶ್ ಪಾಟೀಲ್ ನೀಡಿದ್ದಾರೆ. ಎಸ್ ಐಟಿ ತನಿಖೆ ಹಾಗೂ ಎಫ್ ಬಿಐ ನೆರವು ಏಕೆ ಬೇಕೆ ಎಂಬುದಕ್ಕೆ ಬಲವಾದ ಸಾಕ್ಷಿಯನ್ನು ರಬಿಯಾ ಒದಗಿಸಬೇಕಿದೆ. ಈ ನಿಟ್ಟಿನಲ್ಲಿ ಫೊರೆನ್ಸಿಕ್ ವರದಿ ಮಹತ್ವದ ಪಾತ್ರವಹಿಸಲಿದ್ದು, ಆತ್ಮಹತ್ಯೆಯಲ್ಲ ಎಂಬುದನ್ನು ಸಾಬೀತುಪಡಿಸಬಹುದಾಗಿದೆ.

ಜಿಯಾ ಸಾವಿನ ಕಾರಣವೇನು?

ಜಿಯಾ ಸಾವಿನ ಕಾರಣವೇನು?

ನಿರಂತರವಾಗಿ ಗರ್ಭಿಣಿಯಾಗಿ ಗರ್ಭಪಾತ ಮಾಡಿಸಿಕೊಂಡಿದ್ದಾರೆ. ಇದರಿಂದ ಮನನೊಂದಿದ್ದರು. ಪ್ರೇಮ ವೈಫಲ್ಯದಿಂದ ಬಳಲುವುದಕ್ಕೂ ಮುನ್ನ ಆಕೆ ನಾಲ್ಕು ವಾರಗಳ ಗರ್ಭಿಣಿಯಾಗಿದ್ದರು. ಈ ವಿಷಯವನ್ನು ಪಂಚೋಲಿ ಫ್ಯಾಮಿಲಿ ಅರಗಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಗರ್ಭವನ್ನು ತೆಗೆಸುವಂತೆ ಒತ್ತಾಯಿಸಿದರು.ಒತ್ತಾಯದಿಂದ ತುರ್ತಾಗಿ ವೈದ್ಯಕೀಯ ನೆರವು ಬಯಸಿದ ಜಿಯಾಗೆ ಸೂರಜ್ ಆಸರೆ ಸಿಗಲಿಲ್ಲ.

ಸಿಸಿಟಿವಿ ಕೆಮೆರಾದಲ್ಲಿ ಸೆರೆಯಾದ ತುಣುಕು ಏನಾಯ್ತು?

ಸಿಸಿಟಿವಿ ಕೆಮೆರಾದಲ್ಲಿ ಸೆರೆಯಾದ ತುಣುಕು ಏನಾಯ್ತು?

ಬಾಲಿವುಡ್ ನಟಿ ಜಿಯಾಖಾನ್ ಸಾವನ್ನಪ್ಪಿ ನಾಲ್ಕು ತಿಂಗಳುಗಳ ನಂತರ ರಬಿಯಾ ಖಾನ್ ಅವರು ಪ್ರಕರಣದಲ್ಲಿ ಪ್ರಮುಖ ಸಾಕ್ಷಿ ಎನ್ನಲಾದ ಸಿಸಿಟಿವಿ ಕೆಮೆರಾದಲ್ಲಿ ಸೆರೆಯಾಗಿರುವ ವಿಡಿಯೋ ತುಣುಕುಗಳನ್ನು ಬಹಿರಂಗಪಡಿಸಿದ್ದರು. ಜಿಯಾ ಖಾನ್ ಆತ್ಮಹತ್ಯೆ ಮಾಡಿಕೊಂಡ ರಾತ್ರಿ ಆದಿತ್ಯಾ ಪಂಚೋಲಿ ಅವರು ಸಾಗರ್ ಸಂಗೀತ್ ಅಪಾರ್ಟ್ಮೆಂಟ್ ಗೆ ಬಂದು ಹೋಗಿರುವುದು ಖಚಿತವಾಗಿತ್ತು. ಸಾಕ್ಷಿ ನಾಶ ಎಂದು ಪ್ರಕರಣ ದಾಖಲಿಸಬೇಕು ಎಂದು ರಬಿಯಾ ಕೋರಿಕೊಂಡಿದ್ದರು

ಪತ್ರಗಳ ನಿಗೂಢತೆ ಬಯಲಾಗಲಿಲ್ಲ

ಪತ್ರಗಳ ನಿಗೂಢತೆ ಬಯಲಾಗಲಿಲ್ಲ

ಜಿಯಾ ಬರೆದಿದ್ದಾಳೆ ಎನ್ನಲಾದ ಎರಡು ಪತ್ರಗಳ ಕೈಬರಹದ ಸ್ಯಾಂಪಲ್ ಕೋರ್ಟಿಗೆ ನೀಡಿ ಇದರ ವರದಿ ಆಧಾರದ ಮೇಲೆ ನನ್ನ ಕಕ್ಷಿದಾರ ಮೃತಳಿಗೆ ಹಿಂಸೆ ನೀಡಿದ ದಿನಾಂಕ ಹಾಗೂ ಪತ್ರ ಬರೆದಿರುವ ದಿನಾಂಕ ಪರಿಶೀಲಿಸಿ ಎಂದು ಸೂರಜ್ ವಕೀಲರು ವಾದಿಸಿದ್ದು ಪ್ರಕರಣಕ್ಕೆ ಬೇರೆ ತಿರುವು ನೀಡಿತ್ತು. ರಬಿಯಾ ಅವರ ಸತತ ಪ್ರಯತ್ನದಿಂದ ಕುಂಠಿತಗೊಂಡಿದ್ದ ತನಿಖೆ ಮತ್ತೆ ಆರಂಭವಾದರೂ ಹಲವಾರು ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ.

ಸೂರಜ್ ವಿಳಂಬ ಮಾಡಿದ್ದು ಮಾರಕವಾಯಿತು

ಸೂರಜ್ ವಿಳಂಬ ಮಾಡಿದ್ದು ಮಾರಕವಾಯಿತು

ಒತ್ತಾಯಕ್ಕೆ ಮಣಿದು ಪ್ರಸೂತಿ ತಜ್ಞರನ್ನು ಸಂಪರ್ಕಿಸಿದ ಜಿಯಾಗೆ ಕೊಟ್ಟ ಮಾತ್ರೆಗಳು ಕೆಲಸಕ್ಕೆ ಬರಲಿಲ್ಲ. ಮತ್ತೊಂದೆಡೆ ವೈದ್ಯರನ್ನು ಕಂಡು ಮಾತ್ರೆಗಳನ್ನು ತೆಗೆದುಕೊಂಡ ಜಿಯಾ ತನ್ನ ಸಾವಿಗೆ ಮುನ್ನಡಿ ಬರೆದಿದ್ದಳು. ಈ ಸಮಯದಲ್ಲಿ ಸೂರಜ್ ನೆರವು ಕೋರಿದ್ದಾಳೆ. ಅದರೆ, ಸೂರಜ್ ವಿಳಂಬ ಮಾಡಿ, ತಜ್ಞ ವೈದ್ಯರನ್ನು ಕರೆ ತರುವುದಾಗಿ ಹೇಳಿದ್ದಾನೆ. ಅದರೆ, ಅಷ್ಟರಲ್ಲಿ ಗರ್ಭಪಾತವಾಗಿದೆ. ನೋವಿನಿಂದ ಬಳಲುತ್ತಿದ್ದ ಜಿಯಾಳನ್ನು ಆಸ್ಪತ್ರೆಗೆ ಸೇರಿಸಿದರೂ ಪ್ರಯೋಜನವಾಗಿಲ್ಲ

English summary
Jiah Khan's death was caused by 'suicidal hanging'; no need to reinvestigate: CBI. Jiah Khan's mother Rabia Khan sought a special investigation team (SIT) to probe the case, and also demanded that the CBI approach FBI for help.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X