ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಲಿವುಡ್ ಸಿನಿಮಾ ನೋಡಿ ಯುವಕರು ಮಾಡಿದ್ದೇನು ಗೊತ್ತಾ?

|
Google Oneindia Kannada News

ದೃಶ್ಯ ಮಾಧ್ಯಮ ಮನುಷ್ಯನ ಬದುಕಿನಲ್ಲಿ ಎಷ್ಟು ಪ್ರಭಾವ ಬೀರುತ್ತೆ ಎನ್ನುವುದನ್ನು ಕಂಡಿದ್ದೇವೆ, ಕೇಳಿದ್ದೇವೆ. ಒಳ್ಳೆದಾಗಿದ್ದೂ ಉಂಟು, ಕೆಟ್ಟದ್ದಾದ ಉದಾಹರಣೆಗಳೂ ನಮ್ಮ ಮುಂದಿವೆ.

ರಾಜ್ ಅವರ ಬಂಗಾರದ ಮನುಷ್ಯ ನೋಡಿ ಎಷ್ಟೋ ಯುವಕರು ಹಳ್ಳಿಗೆ ತೆರಳಿ ವ್ಯವಸಾಯದಲ್ಲಿ ತೊಡಗಿದ್ದರೆ, ಚೆಲುವಿನ ಚಿತ್ತಾರ ನೋಡಿ ಯುವ ಪ್ರೇಮಿಗಳು ಮನೆಬಿಟ್ಟು ಹೋದ/ ಆತ್ಮಹತ್ಯೆ ಮಾಡಿಕೊಂಡಿದ್ದೂ ಉಂಟು. [ನಗೆಪಾಟಲಾದ ಮಹಾರಾಷ್ಟ್ರದಆಟೋರಿಕ್ಷಾ ಮುಷ್ಕರ]

ಕಿರುತೆರೆಯಲ್ಲಿ ಬರುವ ಕ್ರೈಂ ಸ್ಟೋರಿಗಳಿಂದ ಚಿಗುರು ಮೀಸೆಯ ಹುಡುಗರು ದಾರಿ ತಪ್ಪಿ ಸುಂದರ ಬದುಕನ್ನೇ ಹಾಳು ಮಾಡಿಕೊಂಡ ವರದಿಗಳು ಪೊಲೀಸ್ ಇಲಾಖೆಯಿಂದ ಬರುತ್ತಲೇ ಇರುತ್ತವೆ.[ಸಲ್ಮಾನಿಗೊಂದು ನ್ಯಾಯ, ಗೀತಾಗೊಂದು ನ್ಯಾಯ ಏಕೆ?]

ಮುಂಬೈನಲ್ಲಿನ ಯುವಕರ ತಂಡವೊಂದು ಬಾಲಿವುಡ್ ಚಿತ್ರದಿಂದ ಉತ್ತೇಜಿತರಾಗಿ ಮಾಡಬಾರದನ್ನು ಮಾಡಿ, ಈಗ ಪೊಲೀಸರ ಅತಿಥಿಯಾಗಿದ್ದಾರೆ. [ದೆಹಲಿ, ಮುಂಬೈಗೆ 'ವಿಸ್ತಾರ' ವಿಮಾನ ಸೇವೆ ಆರಂಭ]

ಏನೋ ಮಾಡಲು ಹೋಗಿ, ಏನೋ ಆದ ಯುವಕರ ಇಂಟರೆಸ್ಟಿಂಗ್ ಕಥೆಯನ್ನು ಸ್ಲೈಡಿನಲ್ಲಿ ವಿವರಿಸಲಾಗಿದೆ (ಮಾಹಿತಿ ಕೃಪೆ: ಎನ್ಡಿಟಿವಿ)

ಸ್ಪೆಷಲ್ 26 ಎಫೆಕ್ಟ್

ಸ್ಪೆಷಲ್ 26 ಎಫೆಕ್ಟ್

ಲೇಖನದ ಕಥಾನಾಯಕ ಒಟ್ಟು ಏಳು ಜನರ ಗುಂಪನ್ನು ಹೊಂದಿರುತ್ತಾನೆ. ಈತ 'ಸ್ಪೆಷಲ್ 26'ಎನ್ನುವ ಹಿಂದಿ ಚಿತ್ರವನ್ನು ಕನಿಷ್ಟ ಏಳು ಬಾರಿ ನೋಡಿ ತನ್ನ ಏಳು ಜನ ಸ್ನೇಹಿತರಿಗೆ ಕನಿಷ್ಠ ಐದು ಬಾರಿಯಾದರೂ ಈ ಚಿತ್ರವನ್ನು ನೋಡಲು ತಾಕೀತು ಮಾಡುತ್ತಾನೆ.

ಮಾವನ ಮನೆಯೇ ಟಾರ್ಗೆಟ್

ಮಾವನ ಮನೆಯೇ ಟಾರ್ಗೆಟ್

ಚಿತ್ರ ನೋಡಿ ಉತ್ತೇಜಿತನಾದ ಕಥಾನಾಯಕ ಮತ್ತು ಸ್ನೇಹಿತರರು, ಚಿತ್ರದ ಶೈಲಿಯಲ್ಲೇ ರಾಬರಿ ಮಾಡಲು ಸ್ಕೆಚ್ ಹಾಕುತ್ತಾರೆ. ದುರಂತವೆಂದರೆ ಕಥಾನಾಯಕನ ಮಾವನ ಮನೆಯನ್ನೇ ಈ ಗುಂಪು ಟಾರ್ಗೆಟ್ ಮಾಡಿಕೊಂಡಿದ್ದು.

ಆದಾಯ ತೆರಿಗೆ

ಆದಾಯ ತೆರಿಗೆ

ತನ್ನ ಮಾವನ ಮನೆಯಲ್ಲಿ ಅವರ ಸ್ನೇಹಿತರೊಬ್ಬರು ಆದಾಯ ತೆರಿಗೆ ಇಲಾಖೆಯ ಕಣ್ಣು ತಪ್ಪಿಸಲು ಕೋಟ್ಯಾಂತರ ರೂಪಾಯಿ ಬೆಲೆಬಾಳುವ ವಸ್ತುವನ್ನು ಮುಚ್ಚಿಟ್ಟಿರುತ್ತಾರೆ ಎನ್ನುವ ವಿಷಯ ಅಳಿಮಯ್ಯನಿಗೆ ಗೊತ್ತಿರುತ್ತದೆ. ಅದನ್ನು ಲಪಟಾಯಿಸುವುದೇ ಈತನ ಮತ್ತು ತಂಡದ ಏಕಮೇವ ಗುರಿ.

ಮಾರುವೇಷದಲ್ಲಿ ಮಾವನ ಮನೆಗೆ

ಮಾರುವೇಷದಲ್ಲಿ ಮಾವನ ಮನೆಗೆ

ಹಾಗಾಗಿ, ತನ್ನ ಏಳು ಜನ ಸ್ನೇಹಿತರನ್ನು ಐಟಿ ಅಧಿಕಾರಿಗಳ ಮಾರುವೇಷದಲ್ಲಿ ಮುಂಬೈನಲ್ಲಿನ ಮಾವನ ಮನೆಗೆ ಕಳುಹಿಸುತ್ತಾನೆ. ಅದರಲ್ಲಿ ಐದು ಜನ ಮನೆಯೊಳಗೆ ನುಗ್ಗಿದರೆ, ಇನ್ನಿಬ್ಬರು ಗೇಟ್ ಕಾಯುತ್ತಿರುತ್ತಾರೆ.

ಮಾವನ ಅಪಹರಣ

ಮಾವನ ಅಪಹರಣ

ಐಟಿ ಅಧಿಕಾರಗಳ ರೂಪದಲ್ಲಿ ರೈಡ್ ಮಾಡುವ ಯುವಕರ ತಂಡ ಕೇವಲ ಮೂವತ್ತೇ ನಿಮಿಷದಲ್ಲಿ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ವಸ್ತುಗಳನ್ನು, ಜೊತೆಗೆ ಆತನ ಮಾವನನ್ನು ತಾವು ಬಂದಿದ್ದ ಕಾರಿನಲ್ಲಿ ಅಪಹರಿಸುತ್ತಾರೆ.

ಗುರಗಾಂ ಬೈಪಾಸ್

ಗುರಗಾಂ ಬೈಪಾಸ್

ಪ್ರೀಪ್ಲಾನ್ ಪ್ರಕಾರ ಬಹುದೂರ ಕ್ರಮಿಸಿದ ನಂತರ ಮಾರ್ಗ ಮಧ್ಯದ ಗುರಗಾಂ ಬೈಪಾಸಿನಲ್ಲಿ ಟೀ ಕುಡಿಯಲು ಬ್ರೇಕ್ ನೀಡಲಾಗಿ, ಮಾವನಿಗೆ ನೇರವಾಗಿ ಐಟಿ ಕಚೇರಿಗೆ ಬರುವಂತೆ ಯುವಕರ ತಂಡ ಸೂಚಿಸುತ್ತೆ. ಇಲ್ಲೇ ಯುವಕರ ತಂಡ ಮಾಡಿದ ಎಡವಟ್ಟು, ಜೊತೆಗೆ ಮಾವನಿಗೆ ಯುವಕರ ಮೇಲೆ ಸಂದೇಹ ಬರಲು ಕಾರಣವಾಗುತ್ತೆ.

ಪೊಲೀಸರಿಗೆ ಮಾಹಿತಿ

ಪೊಲೀಸರಿಗೆ ಮಾಹಿತಿ

ಕೂಡಲೇ ಪೊಲೀಸರನ್ನು ಸಂಪರ್ಕಿಸಿದ ಮಾವ ನಡೆದ ಘಟನೆಯನ್ನು ವಿವರಿಸುತ್ತಾನೆ. ಘಟನೆ ನಡೆದ ಸ್ವಲ್ಪ ದಿನದ ನಂತರ ದುಡ್ಡಿ ನೀಡುವಂತೆ ಯಾರದಾರೂ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರಾ ಎನ್ನುವ ಪೊಲೀಸರಿಗೆ ಪ್ರಶ್ನೆಗೆ, ಲಾಟರಿಯ ದಾಸನಾಗಿದ್ದ ಅಳಿಯ ದುಡ್ಡು ನೀಡುವಂತೆ ತನಗೆ ಧಮ್ಕಿ ಹಾಕುತ್ತಿದ್ದ ವಿಚಾರವನ್ನೂ ಮಾವ ಪೊಲೀಸರಿಗೆ ತಿಳಿಸುತ್ತಾನೆ.

ಹ್ಯಾಪ್ಪಿ ಎಂಡಿಂಗ್

ಹ್ಯಾಪ್ಪಿ ಎಂಡಿಂಗ್

ಏನೋ ಡೌಟು ಬಂದು ಜೊತೆಗೆ ತಲೆ ಓಡಿಸಿದ ಪೊಲೀಸರು ಅಳಿಯನನ್ನು ಕರೆದು ಏರೋಪ್ಲೇನ್ ಹತ್ತಿಸಿದಾಗ, ನಡೆದ ಘಟನೆಯನ್ನು ವಿವರಿಸಿ ತನ್ನ ಗೆಳೆಯರಿಂದ ಈ ಕೆಲಸವನ್ನು ಮಾಡಿಸಿದ್ದೇನೆ ಎಂದು ಅಳಿಯ ತಪ್ಪೊಪ್ಪಿಕೊಳ್ಳುತ್ತಾನೆ. ಅರೇ ಇಸ್ಕಿ ಎಂದು... ಪೊಲೀಸರು ಅಳಿಯಮಯ್ಯನಿಗೆ ಜೊತೆಗೆ ಆತನ ಸ್ನೇಹಿತರನ್ನು ಬಂಧಿಸಿದ್ದಾರೆ.

English summary
Mumbai police nabbed a gang of eight for deceiving one of their uncles by posing as IT officials.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X