ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೋರ್ನ್ ಬ್ಯಾನ್ ಮಾಡಿದರೆ ಅನಾಹುತ: ಆರ್ ಜಿವಿ

By Mahesh
|
Google Oneindia Kannada News

ಮುಂಬೈ, ಆಗಸ್ಟ್ 03: ಅಶ್ಲೀಲ ವೆಬ್ ತಾಣಗಳ ವಿರುದ್ಧ ಸಮರ ಸಾರಿರುವ ಸರ್ಕಾರ ಸರಿ ಸುಮಾರು 857ಕ್ಕೂ ಅಧಿಕ ವೆಬ್ ಸೈಟ್ ಗಳನ್ನು ಬಂದ್ ಮಾಡಿರುವುದು ಯಾವುದೇ ರೀತಿಯಿಂದಲೂ ಆರೋಗ್ಯಕರ ಬೆಳವಣಿಗೆಯಲ್ಲ ಎಂದು ಚಿತ್ರಕರ್ಮಿ ರಾಮ್ ಗೋಪಾಲ್ ವರ್ಮಾ ಅಭಿಪ್ರಾಯಪಟ್ಟಿದ್ದಾರೆ.

ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ಬಳಸಿಕೊಂಡು ಸರಣಿ ಟ್ವೀಟ್ ಗಳ ಮೂಲಕ ತಮ್ಮ ಅಭಿಪ್ರಾಯ ಹೇಳಿಕೊಂಡಿದ್ದಾರೆ. ಇಂಥ ವಿಷಯಗಳಲ್ಲಿ ಕಠಿಣ ಕ್ರಮ ಕೈಗೊಂಡಷ್ಟು ಅಪಾಯ ಜಾಸ್ತಿ. ಮಕ್ಕಳು ಪೋರ್ನ್ ನೋಡಬಾರದು ಎಂದರೆ ಅವರ ನೈಸರ್ಗಿಕ ಹಕ್ಕು ಕಿತ್ತುಕೊಂಡಂತೆ ಆಗುತ್ತದೆ. ಪೋರ್ನ್ ಬ್ಯಾನ್ ಮಾಡಿದ ಸರ್ಕಾರ ಹೇಗೆ ಮುಂದಿನ ಎಲೆಕ್ಷನ್ ಎದುರಿಸುತ್ತದೆಯೋ ನಾ ಕಾಣೆ ಎಂದು ವರ್ಮಾ ಟ್ವೀಟ್ ಮಾಡಿದ್ದಾರೆ. [ಚೀನಾ ಹಾದಿಯಲ್ಲಿ ಭಾರತ, ಪೋರ್ನ್ ಸೈಟ್ಸ್ ಬಂದ್]

Ram Gopal Varma criticizes porn ban in India

ಅಂತಾರಾಷ್ಟ್ರೀಯ ಮಟ್ಟದ ಸಮೀಕ್ಷೆಗಳ ಪ್ರಕಾರ, ಪೋರ್ನ್ ನೋಡುವುದರಿಂದ ಸೆಕ್ಸುಯಲ್ ಕ್ರೈಂಗಳಿಗೆ ಕುಮ್ಮುಕ್ಕು ನೀಡುತ್ತದೆ ಎಂಬುದು ಸುಳ್ಳು . ಇದರ ಬದಲು ವಯಸ್ಸಿಗೆ ಸಹಜವಾದ ಕಾಮನೆಗಳನ್ನು ತೀರಿಸಿಕೊಳ್ಳಲು ಇಂಥ ತಾಣಗಳು ಸಹಾಯಕವಾಗಿದೆ.


ಭಾರತದಲ್ಲಿ ಇನ್ನೂ ರಿವೇಂಜ್ ಪೋರ್ನ್ ನಂಥ ದುಶ್ಚಟಗಳು ಹೆಚ್ಚಿಲ್ಲ. ಈ ಬಗ್ಗೆ ತಂತ್ರಜ್ಞಾನ ಬಳಸಿ ಹೊಸ ವಿಧಾನ ಕಂಡು ಹಿಡಿಯುವ ಬದಲು ಬ್ಯಾನ್ ಮಾಡುವುದು ದುರಂತ ಎಂದಿದ್ದಾರೆ. (ಪಿಟಿಐ)

ನೈಸರ್ಗಿಕ ಹಕ್ಕು ಕಿತ್ತುಕೊಂಡಂತೆ ಆಗುತ್ತದೆ

ನೈಸರ್ಗಿಕ ಹಕ್ಕು ಕಿತ್ತುಕೊಂಡಂತೆ ಆಗುತ್ತದೆ

ಅಂತಾರಾಷ್ಟ್ರೀಯ ಮಟ್ಟದ ಸಮೀಕ್ಷೆಗಳ ಪ್ರಕಾರ, ಪೋರ್ನ್ ನೋಡುವುದರಿಂದ ಸೆಕ್ಸುಯಲ್ ಕ್ರೈಂಗಳಿಗೆ ಕುಮ್ಮುಕ್ಕು ನೀಡುತ್ತದೆ ಎಂಬುದು ಸುಳ್ಳು .

ಈ ವಿಷಯದ ಬಗ್ಗೆ ಮುಕ್ತ ಚರ್ಚೆ ಅಗತ್ಯ

ಈ ವಿಷಯದ ಬಗ್ಗೆ ಮುಕ್ತ ಚರ್ಚೆ ಅಗತ್ಯ, ಆತುರದ ನಿರ್ಧಾರದಿಂದ ಯುವ ಜನತೆ ಮೇಲೆ ಅಡ್ಡ ಪರಿಣಾಮ ಬೀರುತ್ತದೆ.

ವಯೋ ಸಹಜ ಪ್ರಕ್ರಿಯೆಗೆ ಅಡ್ಡಿ ಏಕೆ?

ವಯೋ ಸಹಜ ಪ್ರಕ್ರಿಯೆಗೆ ಅಡ್ಡಿ ಏಕೆ? ಸಹಜವಾಗಿ ಲೈಂಗಿಕ ಕಾಮನೆ ಹೆಚ್ಚಾಗುತ್ತದೆ. ಅದರೆ, ಅದನ್ನು ಬಲವಂತವಾಗಿ ಕಸಿದುಕೊಳ್ಳುವುದಕ್ಕೆ ಅಥವಾ ಹತ್ತಿಕ್ಕುವುದಕ್ಕೆ ಆಗುವುದಿಲ್ಲ.

ಸರ್ಕಾರ ಬೇರೆ ಮಾರ್ಗಗಳನ್ನು ಹುಡುಕಲಿ

ಸರ್ಕಾರ ಬೇರೆ ಮಾರ್ಗಗಳನ್ನು ಹುಡುಕಲಿ, ಕ್ರೈಂ ಕಡಿಮೆ ಮಾಡಲು ಅನೇಕ ಮಾರ್ಗಗಳಿವೆ. ರಸ್ತೆ ಬಂದ್ ಆಗಿದ್ದರೆ, ಹೊಸ ಮಾರ್ಗ ಹುಡುಕಿಕೊಳ್ಳುವಂತೆ ಪ್ರೇರಿಪಿಸಬೇಡಿ.

ಬ್ಯಾನ್ ಮಾಡಿದ ಸರ್ಕಾರಕ್ಕೆ ತೊಂದರೆ

ಬ್ಯಾನ್ ಮಾಡಿದ ಸರ್ಕಾರಕ್ಕೆ ತೊಂದರೆ ಕಟ್ಟಿಟ್ಟಬುತ್ತಿ, ಇಂದಲ್ಲ ನಾಳೆ ಅನಾಹುತ ಸಂಭವಿಸುತ್ತದೆ. ಅದರ ಪರಿಣಾಮ ಎದುರಿಸಬೇಕಾಗುತ್ತದೆ.

English summary
Filmmaker Ram Gopal Varma, in a series of tweets, has criticised the ban of porn websites in India.The 53-year-old "Satya" director feels government should rather try to make sure the content does not go in "wrong direction."
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X