ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬೈ ಜೋಡಿ ಕೊಲೆ: ವಾರಣಾಸಿಯಲ್ಲಿ ಸಿಕ್ಕ ಸಾಧು, ಕೊಲೆ ಪಾತಕ!

By Mahesh
|
Google Oneindia Kannada News

ಮುಂಬೈ, ಡಿ. 14: ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದೆ ಹೇಮಾ ಉಪಾಧ್ಯಾಯ್ ಅವರ ಪಾರ್ಥೀವ ಶರೀರ ಅಂತಿಮ ಸಂಸ್ಕಾರಕ್ಕೆ ಸಿದ್ಧವಾಗುವ ಮುನ್ನ, ವಾರಣಾಸಿಯಲ್ಲಿ ಕೊಲೆಪಾತಕ ಗ್ಯಾಂಗಿನ ಪ್ರಮುಖ ಸದಸ್ಯನನ್ನು ಬಂಧಿಸಲಾಗಿದೆ.

ಸಾಧು ರಜ್ ಭರ್ ಅಲಿಯಾಸ್ ವಿಜಯ್ ಕುಮಾರ್ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ. ಉತ್ತರ ಪ್ರದೇಶ ಪೊಲೀಸರ ವಶದಲ್ಲಿರುವ ವಿಜಯ್ ನನ್ನು ಮಂಗಳವಾರ ಮುಂಬೈ ಪೊಲೀಸರ ವಶಕ್ಕೆ ನೀಡಲಾಗುತ್ತದೆ.[ಮುಂಬೈ ಡಬಲ್ ಮರ್ಡರ್ : ಯಾರು ಕೊಂದವರು?]

ಹೇಮಾ ಅವರು ಚಾರ್ಕ್ ಕೊಪ್ ವೇರ್ ಹೌಸ್ ನಲ್ಲಿ ತಮ್ಮ ಕಲಾಕೃತಿಗಳನ್ನು ಇರಿಸುತ್ತಿದ್ದರು. ಇದರ ಮಾಲೀಕ ಗೋಟು ಎಂಬಾತನಿಗೂ ಹೇಮಾ ಅವರಿಗೂ 5 ಲಕ್ಷ ರು ಗಾಗಿ ಈ ಹಿಂದೆ ಕಿತ್ತಾಟ ನಡೆದಿತ್ತು.

ಈ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಲು ಗೋಟುವಿಗಾಗಿ ಬಲೆ ಬೀಸಲಾಗಿತ್ತು. ಈ ನಡುವೆ ಹೇಮಾ ಸಾವು ಪ್ರಕರಣದ ಮುಖ್ಯ ಶಂಕಿತ ವಾರಣಾಸಿಯ ಬಡಗಾಂವ್ ನ ನಿವಾಸಿ ಶಿವಕುಮಾರ್ ಅಲಿಯಾಸ್ ಸಾಧು ರಜ್ ಭರ್ ವಾರಣಾಸಿಯಲ್ಲಿ ಉತ್ತರ ಪ್ರದೇಶದ ವಿಶೇಷ ಟಾಸ್ಕ್ ಫೋರ್ಸ್ ಸೋಮವಾರ ಬಂಧಿಸಿತ್ತು.

ಈ ನಡುವೆ ಸೋಮವಾರದಂದು ಕಲಾವಿದೆ ಹೇಮಾ ಅವರ ಅಂತ್ಯಸಂಸ್ಕಾರ ನೆರವೇರಿದೆ. ಪೊಲೀಸ್ ಕಸ್ಟಡಿಯಲ್ಲಿರುವ ಚಿಂತನ್ ಅವರು ಪತ್ನಿಗೆ ಅಂತಿಮ ನಮನ ಸಲ್ಲಿಸಿ ಕಣ್ಣೀರಿಟ್ಟರು. ಕೆಲ ಕಾಲ ಹೇಮಾ ಅವರ ಸೋದರನ ಜೊತೆ ಚಿಂತನ್ ಕಾಣಿಸಿಕೊಂಡರು. ನಂತರ ಪೊಲೀಸರ ಜೊತೆ ಠಾಣೆ ಹೊರಟರು.

ಮುಖ್ಯ ಆರೋಪಿಗಾಗಿ ಶೋಧಕಾರ್ಯ

ಮುಖ್ಯ ಆರೋಪಿಗಾಗಿ ಶೋಧಕಾರ್ಯ

ಪ್ರಕರಣದ ಪ್ರಮುಖ ಆರೋಪಿ ವಿದ್ಯಾಸಾಗರ್ ರಜ್ ಭರ್ ನಾಪತ್ತೆಯಾಗಿದ್ದು, ಶೋಧಕಾರ್ಯ ಜಾರಿಯಲ್ಲಿದೆ. ಈಗಾಗಲೇ ಅಜಾದ್ ರಜ್ ಭರ್, ಪ್ರದೀಪ್ ರಜ್ ಭರ್ ಹಾಗೂ ವಿಜಯ್ ರಜ್ ಭರ್ ಬಂಧಿಸಿ ವಿಚಾರಣೆ ನಡೆಸಲಾಗಿದೆ.

ಈ ಎಲ್ಲಾ ಆರೋಪಿಗಳು ಕೆಲ ಕಾಲ ಹೇಮಾ ಅವರ ಪತಿ ಚಿಂತನ್ ಜೊತೆ ಸಂಪರ್ಕ ಹೊಂದಿದ್ದರು. ಆರೋಪಿಗಳಲ್ಲಿ ಒಬ್ಬಾತ ಘಟನೆ ನಡೆದ ದಿನ ಹೇಮಾ ಅವರಿಗೆ ಕರೆ ಮಾಡಿದ್ದ ಎಂದು ತಿಳಿದು ಬಂದಿದೆ.

ಭಂಬಾನಿ ಅವರ ಕಾರು ನಾಪತ್ತೆ

ಭಂಬಾನಿ ಅವರ ಕಾರು ನಾಪತ್ತೆ

ಶುಕ್ರವಾರ ಸಂಜೆ 6.30ರ ಹೊತ್ತಿಗೆ ಹೇಮಾ ಅವರನ್ನು ಭೇಟಿ ಮಾಡಲು ಕಿಂಗ್ ಸರ್ಕಲ್ ಮನೆಯಿಂದ ಭಂಬಾನಿ ಅವರು ತೆರಳುತ್ತಾರೆ. ಅಂಧೇರಿಯಲ್ಲಿರುವ ಹೇಮಾ ಅವರ ಸ್ಟುಡಿಯೋದಲ್ಲಿ ಮಾತುಕತೆ ಮುಗಿಸಿಕೊಂಡು ಮನೆಗೆ ಹಿಂತಿರುಗುವುದಕ್ಕೂ ಮುನ್ನ ತಮ್ಮ ಪತ್ನಿಗೆ ಕರೆ ಮಾಡುತ್ತಾರೆ. ನಂತರ ಯಾವುದೇ ಸಂಪರ್ಕ ಸಿಕ್ಕಿಲ್ಲ. ಪೊಲೀಸರು ಕರೆ ಕಳಿಸಿದಾಗ ನಮಗೆ ಆಘಾತವಾಯಿತು ಎಂದು ಭಂಬಾನಿ ಅವರ ಕಿರಿಯ ಪುತ್ರಿ ಅನಿತಾ ಕಣ್ಣೀರಿಟ್ಟಿದ್ದಾರೆ.

ಹೇಮಾ ಅವರ ಅಂತ್ಯಸಂಸ್ಕಾರ ಸಂದರ್ಭದಲ್ಲಿ

ಹೇಮಾ ಅವರ ಅಂತ್ಯಸಂಸ್ಕಾರ ಸಂದರ್ಭದಲ್ಲಿ

ಹೇಮಾ ಅವರ ಅಂತ್ಯಸಂಸ್ಕಾರ ಸಂದರ್ಭದಲ್ಲಿ ಚಿಂತನ್ ಅವರು ಹಾಜರಿದ್ದರು. ಸಾಂತಾಕ್ರೂಜ್ ನಲ್ಲಿ(ಈಗ ಹೇಮಾ ಇದ್ದ ಮನೆ) ನೆಲೆಸಿದ್ದ ಇಬ್ಬರ ನಡುವೆ 2010ರಲ್ಲಿ ಮೂಡಿದ ವೈಮನಸ್ಯ 2013ರಲ್ಲಿ ವಿವಾಹ ವಿಚ್ಛೇದನಕ್ಕೆ ಮುನ್ನಡಿ ಬರೆಯಿತು. ಫ್ಯಾಮಿಲಿ ಕೋರ್ಟಿನಲ್ಲಿ ಕೇಸ್ ನಡೆಯುತ್ತಿದೆ. ಇಬ್ಬರು ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಇತ್ತೀಚೆಗೆ ದುಬೈಗೆ ಹೋಗಿ ಬಂದಿದ್ದ ಹೇಮಾ ಅಲ್ಲೂ ಕೂಡಾ ಆರ್ಟ್ ಗ್ಯಾಲರಿ ಶಾಲೆ ಆರಂಭಿಸುವ ಕನಸು ಹೊತ್ತಿದ್ದರು.

ಎಫ್ಎಲ್ ಎಲ್ ವರದಿಗಾಗಿ ಕಾದಿರುವ ಪೊಲೀಸರು

ಎಫ್ಎಲ್ ಎಲ್ ವರದಿಗಾಗಿ ಕಾದಿರುವ ಪೊಲೀಸರು

ಪ್ರಾಥಮಿಕ ಹಂತದ ತನಿಖೆ ನಂತರ ಶಂಕಿತರು ಯಾರು ಎಂಬುದು ತಿಳಿದು ಬಂದರೂ ಏತಕ್ಕಾಗಿ ಕೊಲೆ ನಡೆದಿದೆ ಎಂಬುದು ಸ್ಪಷ್ಟವಿಲ್ಲ. ಹಣಕ್ಕಾಗಿ ಕೊಲೆ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ. ಹೇಮಾ ಹಾಗೂ ಭಂಬಾನಿ ದೇಹಗಳ ಮೇಲೆ ಅನೇಕ ಕಡೆ ಗಾಯದ ಗುರುತುಗಳಿವೆ. ಇದು ಸಾವಿಗೂ ಮುನ್ನ ಚಿತ್ರಹಿಂಸೆ ಕೊಟ್ಟಿರುವ ಸುಳಿವು ನೀಡುತ್ತದೆ. ಎಫ್ ಎಸ್ಎಲ್ ವರದಿ ನಂತರ ಸಾವಿನ ಕಾರಣ ತಿಳಿಯಲಿದೆ ಎಂದು ಡಿಸಿಪಿ ಧನಂಜಯ್ ಹೇಳಿದ್ದಾರೆ.

English summary
Acting on a tip-off from their Maharashtra counterparts, the prime suspect in the Mumbai double murder case of well-known artist Hema Upadhyay and her lawyer, was on Monday, Dec 14, detained by Uttar Pradesh Special Task Force in Varanasi. Prime suspect arrested from Varanasi, confess killings
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X