ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರದಲ್ಲಿ ಗೋಹತ್ಯೆ ನಿಷೇಧ ಕಾನೂನು ಜಾರಿ

By Mahesh
|
Google Oneindia Kannada News

ಮುಂಬೈ, ಮಾ.3: ದನದ ಮಾಂಸ ಭಕ್ಷರಿಗೆ ಮಹಾರಾಷ್ಟ್ರದಿಂದ ಕಹಿ ಸುದ್ದಿ ಬಂದಿದೆ. ದೇವೇಂದ್ರ ಫಡ್ನವೀಸ್ ನೇತೃತ್ವದ ಬಿಜೆಪಿ ಸರ್ಕಾರದ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸಿದೆ.

ಮಹಾರಾಷ್ಟ್ರ ಸರ್ಕಾರದ ಮಹತ್ವದ ಕಾಯ್ದೆಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಅಂಕಿತ ಹಾಕಿದ್ದಾರೆ. ಗೋಹತ್ಯೆ ನಿಷೇಧ ಕಾನೂನು ಜಾರಿಗೊಂಡಿರುವುದಕ್ಕೆ ಸಿಎಂ ಫಡ್ನವೀಸ್ ಹರ್ಷ ವ್ಯಕ್ತಪಡಿಸಿದ್ದಾರೆ. [ಕರ್ನಾಟಕ: ಗೋಹತ್ಯೆ ನಿಷೇಧ ವಿಧೇಯಕದಲ್ಲಿ ಏನಿದೆ]

ಮಹಾರಾಷ್ಟ್ರ ಕೃಷಿ ಪ್ರಧಾನ ರಾಜ್ಯವಾಗಿದ್ದು, ಈ ಕಾನೂನು ಜಾರಿಗೊಂಡಿದ್ದರಿಂದ ಗೋವುಗಳ ಸಂರಕ್ಷಣೆಯಾಗುವುದಲ್ಲದೆ, ಕೃಷಿ ಚಟುವಟಿಕೆ ಹೆಚ್ಚಾಗುತ್ತದೆ. ಇದರಿಂದ ಕೃಷಿ ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧ್ಯ ಎಂದು ಸಿಎಂ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ ಗೋಹತ್ಯೆ ಮಾಡಿದರೆ 5 ವರ್ಷ ಜೈಲು, ದನದ ಮಾಂಸ ಮಾರಾಟ ಮಾಡುವಂತಿಲ್ಲ. ಮಾಡಿದರೆ 10,000 ರು ದಂಡ ವಿಧಿಸಲಾಗಿದೆ.

1995ರಲ್ಲಿ ಬಿಜೆಪಿ -ಶಿವಸೇನೆ ಸರ್ಕಾರ ಇದ್ದಾಗ ಮಹಾರಾಷ್ಟ್ರದಲ್ಲಿ ಪ್ರಾಣಿ ಹತ್ಯೆ ನಿಷೇಧ ತಿದ್ದುಪಡಿ ವಿಧೇಯಕ ಚರ್ಚೆಗೆ ಬಂದಿತ್ತು. ಅದರೆ, 19ವರ್ಷಗಳ ಕಾಲ ಪರ -ವಿರೋಧ ಮಾತುಕತೆಯಲ್ಲೇ ವಿಧೇಯಕ ನೆನೆಗುದಿಗೆ ಬಿದ್ದಿತ್ತು. ಈಗ ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಮತ್ತೊಮ್ಮೆ ಕಾನೂನು ಜಾರಿಗೊಳಿಸುವ ಪ್ರಕ್ರಿಯೆಗೆ ಚಾಲನೆ ಸಿಕ್ಕಿತ್ತು. ಅಂತಿಮವಾಗಿ ಮಾರ್ಚ್ 2 ರಂದು ರಾಷ್ಟ್ರಪತಿಗಳು ಅಂಕಿತ ಹಾಕಿದ್ದಾರೆ.

ಮಹಾರಾಷ್ಟ್ರ ಸರ್ಕಾರದ ಈ ಕ್ರಮಕ್ಕೆ ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪರ-ವಿರೋಧ ಟ್ವೀಟ್ ಗಳ ಮಹಾಪೂರದಲ್ಲಿ ಹೆಕ್ಕಿ ತೆಗೆದ ಕೆಲ ಟ್ವೀಟ್ ಗಳು ಇಲ್ಲಿವೆ ನೋಡಿ...

19 ವರ್ಷಗಳ ನಂತರ ಜಾರಿಗೊಂಡ ಕಾನೂನು

19 ವರ್ಷಗಳ ನಂತರ ಜಾರಿಗೊಂಡ ಕಾನೂನು

1995ರಲ್ಲಿ ಬಿಜೆಪಿ -ಶಿವಸೇನೆ ಸರ್ಕಾರ ಇದ್ದಾಗ ಮಹಾರಾಷ್ಟ್ರದಲ್ಲಿ ಪ್ರಾಣಿ ಹತ್ಯೆ ನಿಷೇಧ ತಿದ್ದುಪಡಿ ವಿಧೇಯಕ ಚರ್ಚೆಗೆ ಬಂದಿತ್ತು. ಅದರೆ, 19ವರ್ಷಗಳ ಕಾಲ ಪರ -ವಿರೋಧ ಮಾತುಕತೆಯಲ್ಲೇ ವಿಧೇಯಕ ನೆನೆಗುದಿಗೆ ಬಿದ್ದಿತ್ತು.

ನಮ್ಮ ದೇಶದಲ್ಲಿ ಹೆಣ್ಣಿಗಿಂತ ದನಕ್ಕೆ ರಕ್ಷಣೆ ಅಧಿಕ

ನಾನು ವಾಸಿಸುತ್ತಿರುವ ದೇಶದಲ್ಲಿ ಹೆಣ್ಣಿಗಿಂತ ದನಕ್ಕೆ ರಕ್ಷಣೆ ಅಧಿಕವಾಗಿದೆ ಎಂದು ಯುವತಿಯೊಬ್ಬರಿಂದ ಟ್ವೀಟ್.

ದನದ ಮಾಂಸದ ಜೊತೆಗೆ ಪೋರ್ಕ್ ಬ್ಯಾನ್ ಆಗ್ಲಿ

ಬಿಜೆಪಿ ಸರ್ಕಾರ ಸೆಕ್ಯುಲರ್ ಅಲ್ಲ ಎಂದು ಕೂಗೆಬ್ಬಿಸುವವರಿಗೆ ಪ್ರತಿಯಾಗಿ ಹಂದಿ ಮಾಸವನ್ನು ಬ್ಯಾನ್ ಮಾಡಿದರೆ ಒಳ್ಳೆಯದು.

ಗೋಹತ್ಯೆ ಬಗ್ಗೆ ಸಂಗೀತಗಾರ ವಿಶಾಲ್ ಡಡ್ಲಾನಿ

ಗೋಹತ್ಯೆ ಬಗ್ಗೆ ವಿಶಾಲ್ ಡಡ್ಲಾನಿ ಹೇಳಿದ್ದು ಹೀಗೆ: ನಾನು ವೆಜಿಟೇರಿಯನ್ ಆದರೆ, ದೇಶದಲ್ಲಿ ಎಲ್ಲರ ಹಿತ ಕಾಯುವುದು ಮುಖ್ಯ.

ಕೋಳಿಗಳು ಧರಣಿ ಹೂಡುತ್ತಿವೆಯಂತೆ

ಕೋಳಿಗಳು ಧರಣಿ ಹೂಡುತ್ತಿವೆಯಂತೆ ಕೋಳಿ ತಿನ್ನೋದು ಬ್ಯಾನ್ ಆಗಬೇಕಂತೆ.

English summary
It's a bad news for the Beef lovers in Maharashtra as a long-pending Maharashtra Bill seeking a ban on cow slaughter has received President Pranab Mukherjee's assent. Twitter reaction on the controversial Law.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X