ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವ್ಯಭಿಚಾರಿ ಹೆಂಡತಿಗೆ ಜೀವನಾಂಶ ಇಲ್ಲ : ಕೋರ್ಟ್

By Prasad
|
Google Oneindia Kannada News

Court denies maintenance to adulterous wife
ಮುಂಬೈ, ನ. 9 : ಮದುವೆಯಾಚೆಗಿನ ಅನೈತಿಕ ಲೈಂಗಿಕತೆಯಲ್ಲಿ ಭಾಗಿಯಾದ ವಿವಾಹಿತ 38 ವರ್ಷದ ಮಹಿಳೆಗೆ ಗಂಡನಿಂದ ಜೀವನಾಂಶ ಕೊಡಿಸಲು ಸಾಧ್ಯವಿಲ್ಲ ಎಂದು ಮುಂಬೈನ ನ್ಯಾಯಾಲಯ ಶುಕ್ರವಾರ ಮಹತ್ವದ ತೀರ್ಪು ನೀಡಿದೆ.

"ಪರ ಪುರುಷನೊಂದಿಗೆ ಅನೈತಿಕ ಸಂಬಂಧದಲ್ಲಿ ಭಾಗಿಯಾದ ಮಹಿಳೆಗೆ ಜೀವನಾಂಶ ಕೇಳಲು ಹಕ್ಕಿಲ್ಲ ಮತ್ತು ಸ್ವಯಂಕೃತ ಅಪರಾಧದ ದುರ್ಲಾಭ ಪಡೆಯಲು ಅವಕಾಶ ನೀಡುವುದಿಲ್ಲ" ಎಂದು ನ್ಯಾಯಾಲಯ ಖಡಕ್ಕಾಗಿ ಹೇಳಿದ್ದು, 40 ವರ್ಷದ ಆಕೆಯಯ ಗಂಡ, ಕ್ರೌರ್ಯತೆ ಮತ್ತು ವ್ಯಭಿಚಾರ ನಡೆಸಿದ್ದಕ್ಕಾಗಿ ವಿಚ್ಛೇದನ ಕೋರಿ ಸಲ್ಲಿಸಿದ ಅರ್ಜಿಯನ್ನು ಪುರಸ್ಕರಿಸಿದೆ.

ಅವರಿಬ್ಬರು 1999ರಲ್ಲಿ ಮದುವೆ ಬಂಧನಕ್ಕೆ ಒಳಗಾಗಿದ್ದು, ಅವರಿಬ್ಬರಿಗೆ 12 ವರ್ಷದ ಮಗನೊಬ್ಬನಿದ್ದಾನೆ. ನಾನಾ ಚೌಕ್ ನಲ್ಲಿ ವ್ಯಾಪಾರ ನಡೆಸುತ್ತಿರುವ ಗಂಡ ಮನೆಗೆ ಮರಳುತ್ತಿದ್ದುದು ರಾತ್ರಿ 10 ಗಂಟೆಯ ನಂತರ. 2005 ನವೆಂಬರ್ ತಿಂಗಳ ಒಂದು ಸಂಜೆ ಆತ ಬೇಗನೆ ಮರಳಿ ಬಂದಾಗ, ಅವರಿಗೆ ಅಚ್ಚರಿ ಕಾದಿತ್ತು. ಮಗ ಒಬ್ಬನೇ ಮನೆಯಲ್ಲಿದ್ದ, ಹೆಂಡತಿ ಎಲ್ಲಿಗೋ ಹೋಗಿದ್ದಳು.

ಆತ ಫೋನ್ ಮುಖಾಂತರ ಸಂಪರ್ಕಿಸಲು ಯತ್ನಿಸಿದಾಗ ಮೊಬೈಲ್ ಸ್ವಿಚ್ ಆಫ್ ಆಗಿತ್ತು ಮತ್ತು ಮರಳಿ ಬಂದಾಗ ತಾನು ಸ್ನೇಹಿತೆಯನ್ನು ಭೇಟಿಯಾಗಲು ಹೋಗಿದ್ದೆ ಎಂದು ಸುಳ್ಳು ಹೇಳಿದ್ದಳು. ಆ ಸ್ನೇಹಿತೆಯನ್ನು ವಿಚಾರಿಸಿದಾಗ ಆಕೆ ಈ ಮಹಿಳೆಯನ್ನು ಭೇಟಿಯಾಗಿರಲೇ ಇಲ್ಲ.

ಮರುದಿನ ಮತ್ತಷ್ಟು ಪ್ರಶ್ನಿಸಿದಾಗ ತಾನು ಪುರುಷ ಸ್ನೇಹಿತನೊಂದಿಗೆ ಹೋಟೆಲಿಗೆ ಹೋಗಿದ್ದಾಗಿ ಆಕೆ ಒಪ್ಪಿಕೊಂಡಳು. ಗಂಡ ಮನೆಯಲ್ಲಿ ಇಲ್ಲದಿದ್ದಾಗ ಆತ ಆಗಾಗ ಮನೆಗೆ ಬರುತ್ತಿದ್ದುದು ಕೂಡ ತಿಳಿದುಬಂದಿತು. ಇದನ್ನು ಅಕ್ಕಪಕ್ಕದ ಮನೆಯವರು ಕೂಡ ದೃಢಪಡಿಸಿದ್ದರು.

2005ರಲ್ಲಿ ತನ್ನ ಹೆಂಡತಿಯ ವಿರುದ್ಧ ಆತ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ. ತನ್ನ ಗಂಡ, ಅತ್ತೆ, ಮಾವ, ನಾದಿನಿ ತನಗೆ ಕಿರುಕುಳ ನೀಡಿದ್ದಾರೆ ಮತ್ತು ಬಲವಂತವಾಗಿ ಅನೈತಿಕ ಸಂಬಂಧದ ಬಗ್ಗೆ ಬರೆಯಿಸಿಕೊಂಡಿದ್ದಾರೆ ಎಂದು ಹೆಂಡತಿ ಅಲವತ್ತುಕೊಂಡಳು. ಆದರೆ ಆಕೆ ಪೊಲೀಸರಿಗೆ ದೂರ ನೀಡದಿದ್ದ ಕಾರಣ ಆಕೆಯ ವಾದವನ್ನು ನ್ಯಾಯಾಲಯ ಪುರಸ್ಕರಿಸಲಿಲ್ಲ.

ಆ ಮಹಿಳೆ ಆಕೆಯ ಇನಿಯನೊಂದಿಗೆ ಬೇರೆ ಊರಿಗೆ ಹೋದಾಗ ಫೋಟೋ ತೆಗೆಸಿಕೊಂಡಿದ್ದನ್ನು ಗಂಡ ನ್ಯಾಯಾಲಯಕ್ಕೆ ಪ್ರಸ್ತುತಪಡಿಸಿದ್ದ. ಮಗು ಕೂಡ ತನ್ನ ತಾಯಿಯ ಇನಿಯನ ಜೊತೆಗೆ ಅತ್ಯಂತ ಸಲುಗೆಯಿಂದ ಇರುತ್ತಿದ್ದುದು ಕೋರ್ಟ್ ಗೆ ಮನದಟ್ಟಾಯಿತು. ನಿವಾಸಿಗಳ ಸಾಕ್ಷಿಯನ್ನು ಪುರಸ್ಕರಿಸಿದ ನ್ಯಾಯಾಲಯ ವಿಚ್ಛೇದನಕ್ಕೆ ಅನುಮತಿ ನೀಡಿದೆ ಮತ್ತು ಆಕೆಯ ಜೀವನಾಂಶದ ಮನವಿಯನ್ನು ತಿರಸ್ಕರಿಸಿದೆ. [ಮದುವೆ ಕೊಲ್ಲುವ ಪ್ಯಾರಲಲ್ ಲೈಫ್ ಎಂಬ ಕಾಯಿಲೆ]

English summary
A Mumbai court has denied maintenance to a middle aged woman as her involvement in illicit relationship with another man proved. Court observed that wife cannot claim for maintenance and cannot take advantage of her own wrongdoings.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X