ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿರಿಯ ಅಧಿಕಾರಿ ಕೊಂದು ಆತ್ಮಹತ್ಯೆಗೆ ಶರಣಾದ ಎಎಸ್ಐ

By Mahesh
|
Google Oneindia Kannada News

ಮುಂಬೈ, ಮೇ 3: ರಜೆ ವಿಷಯವಾಗಿ ನಡೆದ ಮಾತುಕತೆ ಜಗಳಕ್ಕೆ ತಿರುಗಿ ಇಬ್ಬರು ಪೊಲೀಸ್ ಅಧಿಕಾರಿಗಳ ಸಾವಿಗೆ ಕಾರಣವಾಗಿದೆ. ಸಾಂತಾಕ್ರೂಜ್ ಪ್ರದೇಶದ ವಕೋಲಾ ಪೊಲೀಸ್ ಠಾಣೆಯಲ್ಲಿ ಮೇಲಧಿಕಾರಿಯನ್ನು ಕೊಂದ ಅಸಿಸ್ಟೆಂಟ್ ಸಬ್ ಇನ್ಸ್ ಪೆಕ್ಟರ್ ರೊಬ್ಬರು ಖಿನ್ನತೆಗೊಳಗಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ.

ಅಸಿಸ್ಟೆಂಟ್ ಸಬ್‌ಇನ್‌ಸ್ಪೆಕ್ಟರ್ ದಿಲೀಪ್ ಶಿರ್ಕೆ ಅವರು ಸಿನೀಯರ್ ಇನ್ಸ್ ಪೆಕ್ಟರ್ ವಿಲಾಸ್ ಝೋಶಿ ಅವರನ್ನು ರಜೆ ಕ್ಯಾನ್ಸಲ್ ಮಾಡಿದ್ದರ ಬಗ್ಗೆ ಪ್ರಶ್ನಿಸಲು ಹೋಗಿದ್ದಾರೆ. ರಜೆ ನೀಡಿದ್ದು, ಕ್ಯಾನ್ಸಲ್ ಎಂದು ದಾಖಲಾಗಿದ್ದು ಈ ಬಗ್ಗೆ ಇಲಾಖಾ ಮಟ್ಟದ ತನಿಖೆ ಎಂದೆಲ್ಲ ಸುದ್ದಿ ಹಬ್ಬಿತ್ತು ಶಿರ್ಕೆ ನಿದ್ದೆಗೆಡಿಸಿತ್ತು. ಈ ಬಗ್ಗೆ ಪ್ರಶ್ನಿಸಿದಾಗ ಎಸ್ ಐ ಜೋಶಿ ಸರಿಯಾದ ಉತ್ತರ ನೀಡಲಿಲ್ಲ. ಸಿಟ್ಟಿಗೆದ್ದ ಶಿರ್ಕೆ ಜೋಶಿ ಹಾಗೂ ವೈರಲೆಸ್ ಆಪರೇಟರ್ ಬಾಳಾ ಸಾಹೇಬ್ ಅಹರ್ ಅವರ ಮೇಲೆ ಮೂರು ಸುತ್ತಿನ ಗುಂಡು ಹಾರಿಸಿದ್ದಾರೆ.

Cop dies after shooting self, two colleagues in Mumbai

ಎಎಸ್‌ಐ ಶಿರ್ಕೆ ತುಂಬ ಖಿನ್ನತೆಗೊಳಗಾಗಿದ್ದರು ನಿಜ ಆದರೆ, ಇದಕ್ಕೆಲ್ಲ ಪೊಲೀಸ್ ಆಯುಕ್ತರೇ ಕಾರಣ ಎಂದು ಶಿರ್ಕೆ ಪುತ್ರ ಆಪಾದಿಸಿದ್ದಾರೆ.

ಈ ಘಟನೆ ಕುರಿತಂತೆ ವಿವರ ನೀಡಿರುವ ಆಯುಕ್ತ ರಾಕೇಶ್ ಮರಿಯಾ, ವಕೋಲಾ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ವಿಲಾಸ್ ಜೋಷಿ ಅವರ ಚೇಂಬರ್‌ಗೆ ಹೋದ ಎಎಸ್‌ಐ ದಿಲೀಪ್ ಶಿರ್ಕೆ ಅಲ್ಲಿ ಅವರೊಂದಿಗೆ ವಾಗ್ವಾದ ನಡೆಸಿದ್ದಾರೆ. ಚೇಂಬರ್ ನಿಂದ ಮನೆಗೆ ತೆರಳಲು ಹೊರಟ ಜೋಶಿ ಅವರ ಮೇಲೆ ಗುಂಡು ಹಾರಿಸಿದ್ದಾರೆ.

ಮೂರು ಸುತ್ತು ಗುಂಡು ಹಾರಿಸಿದ ಶಿರ್ಕೆ ತಾನೂ ಶೂಟ್ ಮಾಡಿಕೊಂಡು ಮೃತಪಟ್ಟಿದ್ದಾರೆ. ವಿಲಾಸ್ ಜೋಶಿ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಚಿಕಿತ್ಸೆ ಫಲಿಸದೆ ಇಲ್ಲಿನ ಲೀಲಾವತಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು ಎಂದರು.

ಶಿರ್ಕೆ ಆತ್ಮಹತ್ಯೆ, ಜೋಶಿ ಸಾವಿನ ಪ್ರಕರಣವನ್ನು ಧನಂಜಯ್ ಕುಲಕರ್ಣಿ ಹಾಗೂ ತಂಡ ಕೈಗೆತ್ತಿಕೊಂಡಿದೆ. ಶಾರ್ಟ್ ಟೆಂಪರ್ಡ್ ಶಿರ್ಕೆ ಎಂದು ಇಲಾಖೆಯ ಇತರೆ ಸಹದ್ಯೋಗಿಗಳು ಮಾತನಾಡಿಕೊಳ್ಳುವುದರಿಂದ ಹಿಡಿದು ನೈಟ್ ಶಿಫ್ಟ್, ರಜೆ ಸಮಸ್ಯೆಗಳತ್ತ ಕೂಡಾ ಈ ಪ್ರಕರಣ ಬೆಳಕು ಚೆಲ್ಲುವ ನಿರೀಕ್ಷೆಯಿದೆ. (ಪಿಟಿಐ)

English summary
An assistant sub-inspector (ASI) at the Vakola police station shot at the senior PI and his wireless operator — after a minor argument with the former — before turning the firearm on himself on Saturday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X