ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಪ್ಪಿಗೆಯ ಲೈಂಗಿಕ ಕ್ರಿಯೆ ಅತ್ಯಾಚಾರವಲ್ಲ: ಮುಂಬೈ ಹೈಕೋರ್ಟ್

|
Google Oneindia Kannada News

ಮುಂಬೈ, ಮಾರ್ಚ್, 11: ವಯಸ್ಕ ಹೆಣ್ಣು ಮತ್ತು ಗಂಡು ಪರಸ್ಪರ ಸಹಮತದಿಂದ ಲೈಂಗಿಕ ಸಂಬಂಧ ಬೆಳೆಸಿದರೆ ಅದನ್ನು ಅತ್ಯಾಚಾರವೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಮುಂಬೈ ಹೈಕೋರ್ಟ್ ಹೇಳಿದೆ.

ಪ್ರಕರಣವೊಂದರ ವಿಚಾರಣೆ ವೇಳೆ ಮುಂಬೈ ಕೋರ್ಟ್ ಈ ಅಭಿಪ್ರಾಯ ಹೊರಹಾಕಿದೆ. ಸೋಲಾಪುರ ಯುವಕನಿಗೆ ಜಾಮೀನು ನೀಡುವ ಸಂಬಂಧ ಮುಂಬೈ ಹೈಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.['ನಿಜವಾದ ಅಸಹಿಷ್ಣುತೆ ಎಂದರೆ ತುರ್ತು ಪರಿಸ್ಥಿತಿ ಕಾಲ']

mumbai

ವಿದ್ಯಾವಂತ ಯುವತಿಗೆ ಸಂಗಾತಿಯೊಂದಿಗೆ ದೈಹಿಕ ಸಂಬಂಧ ಹೊಂದುವುದರಿಂದ ಉಂಟಾಗುವ ಪರಿಣಾಮಗಳ ಬಗ್ಗೆ ಅರಿವಿರುತ್ತದೆ. ಹೀಗಾಗಿ ಸಹಮತದ ಲೈಂಗಿಕ ಸಂಬಂಧವನ್ನು ಅತ್ಯಾಚಾರ ಎಂದು ಪರಿಗಣಿಸಲಾಗುವುದಿಲ್ಲ ಎಂದು ಹೇಳಿದೆ.[ಎಚ್ಚರ.. ಅಸುರಕ್ಷಿತ ಲೈಂಗಿಕ ಸಂಪರ್ಕ ಝಿಕಾ ವೈರಸ್ ತರಬಹುದು]

ಮಿರುಧಾ ಭಟ್ಕರ್ ನೇತೃತ್ವದ ನ್ಯಾಯಪೀಠ ಈ ತೀರ್ಮಾನವನ್ನು ನೀಡಿದೆ. ಅಲ್ಲದೇ ಯುವಕನಿಗೆ ಯುವತಿ ಅಥವಾ ಅವರ ಕುಟುಂಬಕ್ಕೆ ಯಾವುದೇ ಹಾನಿ ಮಾಡದಂತೆ ಎಚ್ಚರಿಕೆಯನ್ನು ನೀಡಿ 25 ಸಾವಿರ ಶೂರಿಟಿ ಪಡೆದುಕೊಂಡಿದೆ.

ಮುಂಬೈನ ಯುವತಿ ಮತ್ತು ಸೋಲಾಪುರದ ಯುವಕ ಪರಸ್ಪರ ಪ್ರೀತಿಸುತ್ತಿದ್ದು, ಪರಸ್ಪರ ದೈಹಿಕ ಸಂಪರ್ಕ ಬೆಳೆಸಿದ್ದರು. ಯುವತಿ ಗರ್ಭಿಣಿಯಾದಾಗ ಗರ್ಭಪಾತ ಮಾಡಿಸುವಂತೆ ಯುವಕ ಒತ್ತಾಯಿಸಿದ್ದ. ಇದಮ್ಮಿ ಪ್ರಶ್ನಿಸಿ ಯುವತಿ ನ್ಯಾಯಾಲಯದ ಮೆಟ್ಟಿಲು ಏರಿದ್ದಳು.

24 ವರ್ಷದ ಯುವತಿ ಯುವಕನ ವಿರುದ್ಧ ಅತ್ಯಾಚಾರ ಮತ್ತು ವಂಚನೆ ಪ್ರಕರಣ ದಾಖಲಿಸಿದ್ದಳು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಯುವಕನಿಗೆ ಜಾಮೀನು ನೀಡಿ, ವಯಸ್ಕರು ಪರಸ್ಪರ ಸಮ್ಮತದ ಮೇರೆಗೆ ಹೊಂದುವ ಲೈಂಗಿಕ ಸಂಪರ್ಕ ಅತ್ಯಾಚಾರವಾಗುವುದಿಲ್ಲ ಎಂದು ಹೇಳಿದೆ.

English summary
An educated woman is mature enough to understand the consequences of having physical relations with her partner and such cases will not fall under the ambit of rape, the Bombay High Court said today while granting anticipatory bail to a 25-year-old man. Justice Mridula Bhatkar was hearing the anticipatory bail plea of the youth from Solapur claiming he was in a relationship with the 24-year-old woman from Mumbai and when he broke up with her she lodged an FIR against him in October last with the suburban Goregaon police on charges of rape, cheating and criminal intimidation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X