ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಟಿಎಂಯಂತ್ರಗಳ ಮೇಲೆ ಬಿತ್ತು ಜಿಎಸ್ ಟಿ ಬರೆ!

|
Google Oneindia Kannada News

ಮುಂಬೈ, ಜುಲೈ 3: ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ)ಯಿಂದಾಗಿ ಎಟಿಎಂ(ಆಟೋಮೆಟಿಕ್ ಟೆಲ್ಲರ್ ಮಶಿನ್) ಯಂತ್ರಗಳು ದುಬಾರಿಯಾಗಿವೆ. ಎಟಿಎಂ ಯಂತ್ರಗಳನ್ನು ಉತ್ಪಾದಿಸುವ ಸಂಸ್ಥೆಗಳ ಮೇಲೆ ಇದು ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಗಳು ನಿಚ್ಛಳವಾಗಿವೆ.

ಜಿಎಸ್ ಟಿಯ ನಾಲ್ಕು ತೆರಿಗೆ ವಿಭಾಗಗಳಲ್ಲಿ (5%, 12%, 18%, 28%) ನಾಲ್ಕನೆಯ, ಅಂದರೆ 28% ತೆರಿಗೆ ವಿಭಾಗಕ್ಕೆ ಎಟಿಎಂ ಯಂತ್ರಗಳು ಬರುತ್ತವೆ. ಡಿಜಿಟಲ್ ಪೇಮೆಂಟ್ ಹಾರ್ಡ್ ವೇರ್ ಗಳನ್ನು 18% ತೆರಿಗೆಗೆ ಒಳಪಡಿಸಿ, ಎಟಿಎಂ ಅನ್ನು 28% ರ ಸ್ಲಾಬ್ ಗೆ ಸೇರಿಸಿರುವುದು ಸ್ವಾಗತಾರ್ಹ ಕ್ರಮವಲ್ಲ ಎಂದು ಎಟಿಎಂ ಯಂತ್ರ ತಯಾರಕಾ ಕಂಪೆನಿಗಳು ಪ್ರತಿಕ್ರಿಯಿಸಿವೆ.

ಜಿಎಸ್ ಟಿ ಅಡಿಯ ಹೋಟೆಲ್ ಬಿಲ್ಲುಗಳ ಗೊಂದಲಕ್ಕೆ ಕೇಂದ್ರದ ಸ್ಪಷ್ಟನೆಜಿಎಸ್ ಟಿ ಅಡಿಯ ಹೋಟೆಲ್ ಬಿಲ್ಲುಗಳ ಗೊಂದಲಕ್ಕೆ ಕೇಂದ್ರದ ಸ್ಪಷ್ಟನೆ

ಸಣ್ಣ ಪುಟ್ಟ ಬ್ಯಾಂಕುಗಳು ಎಟಿಎಂ ಕೊಳ್ಳುವ ಬಗ್ಗೆ ಚಿಂತನೆಯನ್ನೇ ಮಾಡದ ಸ್ಥಿತಿಯನ್ನು ಜಿಎಸ್ ಟಿ ತಂದಿಟ್ಟಿದೆ. ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ ಈಗ ನೂರಾರು ದಾರಿಗಳಿದ್ದು ಎಟಿಎಂ ಅನ್ನೇ ಅವಲಂಬಿಸದ ಬೇಕಾದ ಅಗತ್ಯ ಜನರಿಗಿಲ್ಲ.

ಅಲ್ಲದೆ, ಕೇಂದ್ರ ಸರ್ಕಾರವೂ ನಗದು ರಹಿತ ವ್ಯವಹಾರಕ್ಕೇ ಹೆಚ್ಚು ಬೆಲೆ ನೀಡುತ್ತಿರುವುದರಿಂದ ಕೈಯಲ್ಲಿ ಕಾರ್ಡ್ ಇದ್ದರೆ ಸಾಕು, ಸಾವಿರಾರು ರೂ. ಹಣವನ್ನು ಜೇಬಿನಲ್ಲೇ ಇರಿಸಿಕೊಂಡು ಹೋಗುವ ಅಗತ್ಯವಿಲ್ಲ. ಈ ಎಲ್ಲ ಕಾರಣದಿಂದ ಎಟಿಎಂ ಕುರಿತು ಬ್ಯಾಂಕುಗಳೂ ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯ ಬರುವುದಿಲ್ಲ.

ಎಟಿಎಂ ಯಂತ್ರಗಳು ಅವಸಾನಕ್ಕೆ?

ಎಟಿಎಂ ಯಂತ್ರಗಳು ಅವಸಾನಕ್ಕೆ?

ಜಿಎಸ್ ಟಿ ಜಾರಿಯಾಗುತ್ತಿದ್ದಂತೆಯೇ ಎಟಿಎಂಗಳು ಅವಸಾನಕ್ಕೆ ಸರಿಯುತ್ತವೆಯಾ? ಅಂಥ ಅನುಮಾನವೂ ಎದ್ದಿದೆ. ಅಪನಗದೀಕರಣದ ನಂತರ ಜನರು ನಗದು ರಹಿತ ವ್ಯವಹಾರವನ್ನು ಹೆಚ್ಚಿಸಿರುವುದರಿಂದ ಎಟಿಎಂ ಬಳಕೆ ಕೊಂಚ ಕಡಿಮೆಯಾಗಿದೆ. ಈಗೀಗ ಎಟಿಎಂ ನಲ್ಲೇ ಸಾಕಷ್ಟು ಸೌಲಭ್ಯಗಳಿದ್ದರೂ ನೆಟ್ ಬ್ಯಾಂಕಿಂಗ್ ನಿಂದಾಗಿ ಜನರು ಬ್ಯಾಂಕ್ ಅಥವಾ ಎಟಿಎಂ ಗೆ ತೆರಳುವುದೂ ಕಡಿಮೆಯಾಗಿದೆ. ಇದರೊಂದಿಗೆ ಎಟಿಎಂ ಯಂತ್ರಗಳ ಮೇಲಿನ ತೆರಿಗೆ ಜಿಎಸ್ ಟಿಯಿಂದಾಗಿ ಈ ಪರಿ ಹೆಚ್ಚಿರುವುದು ಸಣ್ಣ ಪುಟ್ಟ ಬ್ಯಾಂಕ್ ಗಳು ಎಟಿಎಂ ಯಂತ್ರಗಳನ್ನು ಕೊಳ್ಳುವ ಬಗ್ಗೆ ಚಿಂತನೆಯನ್ನೇ ಮಾಡದಂಥ ಸನ್ನಿವೇಶ ತಂದಿಟ್ಟಿವೆ ಎಂಬುದು ಎಟಿಎಂ ಕಂಪೆನಿಗಳ ಅಂಬೋಣ.

ಸೇವಾ ತೆರಿಗೆಯಲ್ಲೂ ಹೆಚ್ಚಳ

ಸೇವಾ ತೆರಿಗೆಯಲ್ಲೂ ಹೆಚ್ಚಳ

ಎಟಿಎಂ ಯಂತ್ರವಷ್ಟೇ ಅಲ್ಲದೆ, ಎಟಿಎಂ ಸೇವಾ ತೆರಿಗೆಯಲ್ಲೂ ಏರಿಕೆಯಾಗಿದೆ. ಮೊದಲು 15% ರಷ್ಟಿದ್ದ ಎಟಿಎಂ ಸೇವಾ ತೆರಿಗೆಯನ್ನು ಇದೀಗ 18% ಗೆ ಹೆಚ್ಚಿಸಲಾಗಿದ್ದು, ಇದರಿಂದ ಜನರು ಎಟಿಎಂ ಸೇವೆಯನ್ನು ಪಡೆಯುವುದೂ ಕಷ್ಟವಾಗುತ್ತದೆ.

ಜಿಎಸ್ ಟಿ ಎಫೆಕ್ಟ್: ಲವಲವಿಕೆ ಕಳೆದುಕೊಂಡ ಷೇರು ಮಾರುಕಟ್ಟೆಜಿಎಸ್ ಟಿ ಎಫೆಕ್ಟ್: ಲವಲವಿಕೆ ಕಳೆದುಕೊಂಡ ಷೇರು ಮಾರುಕಟ್ಟೆ

ಜಿಎಸ್ ಟಿ ಸಮಿತಿಯೊಂದಿಗೆ ಚರ್ಚೆ?

ಜಿಎಸ್ ಟಿ ಸಮಿತಿಯೊಂದಿಗೆ ಚರ್ಚೆ?

ಎಟಿಎಂ ಯಂತ್ರಗಳ ಮೇಲಿನ ತೆರಿಗೆಯನ್ನು ಕಡಿಮೆ ಮಾಡುವಂತೆ ಎಟಿಎಂ ಕೈಗಾರಿಕೆಗಳ ಒಕ್ಕೂಟ (Confederation for ATM Industry, CATMI) ಜಿಎಸ್ ಟಿ ಸಮಿತಿ ಮತ್ತು ಹಣಕಾಸು ಸಚಿವಾಲಯವನ್ನು ಕೋರಿಕೊಳ್ಳುವುದಾಗಿ ತಿಳಿಸಿದೆ.

GST ಕಾನೂನಿನಲ್ಲಿ ಹೆಂಡತಿಗೆ 28 ಪರ್ಸೆಂಟ್ ತೆರಿಗೆಯಂತೇ!!GST ಕಾನೂನಿನಲ್ಲಿ ಹೆಂಡತಿಗೆ 28 ಪರ್ಸೆಂಟ್ ತೆರಿಗೆಯಂತೇ!!

ಶೇ.18 ತೆರಿಗೆಗೆ ಅಡ್ಡಿಯಿಲ್ಲ

ಶೇ.18 ತೆರಿಗೆಗೆ ಅಡ್ಡಿಯಿಲ್ಲ

ಎಲ್ಲ ಡಿಜಿಟಲ್ ಪೇಮೆಂಟ್ ಹಾರ್ಡ್ ವೇರ್ ಗಳಿಗೆ ನಿಗದಿ ಪಡಿಸಿದ ಶೇ. 18 ರ ತೆರಿಗೆಯನ್ನೇ ಎಟಿಎಂ ಯಂತ್ರಗಳಿಗೂ ನಿಗದಿಪಡಿಸಬೇಕೆಂದು ಒಕ್ಕೂಟ ಆಗ್ರಹಿಸಿದೆ. ಈ ವಿಷಯವನ್ನು ಜಿಎಸ್ ಟಿ ಸಮಿತಿಯ ಗಮನಕ್ಕೆ ತರಲಿದ್ದು, ಸಮಿತು ತನ್ನ ನಿರ್ಧಾದಲ್ಲಿ ತಿದ್ದುಪಡಿ ತರಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.

ಹಾಸ್ಯ: ಅರ್ಥವಾಗದ ಸಂಗತಿಗಳ ಪಟ್ಟಿಯಲ್ಲಿ ಜಿಎಸ್ ಟಿಗೆ ಮೂರನೇ ಸ್ಥಾನ!

ಹಾಸ್ಯ: ಅರ್ಥವಾಗದ ಸಂಗತಿಗಳ ಪಟ್ಟಿಯಲ್ಲಿ ಜಿಎಸ್ ಟಿಗೆ ಮೂರನೇ ಸ್ಥಾನ!ಹಾಸ್ಯ: ಅರ್ಥವಾಗದ ಸಂಗತಿಗಳ ಪಟ್ಟಿಯಲ್ಲಿ ಜಿಎಸ್ ಟಿಗೆ ಮೂರನೇ ಸ್ಥಾನ!

English summary
After GST has implemented the prices of ATM machines will be costlier. Because the tax on ATM machine is in 28% slab. Confederation for ATM Industry (CATMI) is opposing this decision of the central government of India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X