ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

50ನೇ ವಯಸ್ಸಲ್ಲಿ 10ನೇ ಕ್ಲಾಸ್ ಪಾಸಾದ ದೇವೇಂದ್ರನ ಸಿಬ್ಬಂದಿ

By Mahesh
|
Google Oneindia Kannada News

ಮುಂಬೈ, ಜೂ. 10: ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಅವರ ಕಚೇರಿಯಲ್ಲಿ ಜವಾನರಾಗಿರುವ 50 ವರ್ಷದ ವ್ಯಕ್ತಿಯೊಬ್ಬರು ಸತತ ದಂಡಯಾತ್ರೆಯ ನಂತರ ಕೊನೆಗೂ ಎಸ್ ಎಸ್ ಸಿ ಬೋರ್ಡ್ ಪರೀಕ್ಷೆಯಲ್ಲಿ ಪಾಸಾಗಿ ಸಂಭ್ರಮಿಸಿದ್ದಾರೆ. ಈ ಸಂಭ್ರಮದಲ್ಲಿ ಸ್ವತಃ ಸಿಎಂ ದೇವೇಂದ್ರ ಅವರು ಪಾಲ್ಗೊಂಡಿದ್ದು ವಿಶೇಷ.

ಇತ್ತೀಚೆಗೆ 50ನೇ ವರ್ಷ ವಯಸ್ಸಿನ ಹುಟ್ಟುಹಬ್ಬ ಆಚರಿಸಿಕೊಂಡ ಅವಿನಾಶ್ ಚೌಗಲೆ ಅವರು ಸತತ ಪ್ರಯತ್ನದ ನಂತರ ಹತ್ತನೇ ತರಗತಿ ಪಾಸಾಗಿದ್ದಾರೆ. 28 ಬಾರಿ ಸಪ್ಲಿಮೆಂಟರಿ ಪರೀಕ್ಷೆ ಬರೆದ ಜವಾನ ಅವಿನಾಶ್ ಅವರು ಕೊನೆಗೂ ಎಸ್‌ಎಸ್‌ಎಲ್‌ಸಿ ತೇರ್ಗಡೆ ಆಗಿ ಕೇಳಿ ಮಹಾರಾಷ್ಟ್ರ ಸಿಎಂ ಫಡ್ನವಿಸ್ ಅವರು ಖುಷಿಯಿಂದ ಅವಿನಾಶ್ ಗೆ ಸಿಹಿ ತಿನಿಸಿ ಅಭಿನಂದನೆ ಹೇಳಿದ್ದಾರೆ.

Devendra Fadnavis' 50-year-old peon clears SSC board exams

ಚೌಗಲೆ ಅವರು ಗಣಿತ ಮಾತ್ರ ಕಬ್ಬಿಣ ಕಡಲೆಯಾಗಿತ್ತು. ಮಿಕ್ಕ ಎಲ್ಲಾ ವಿಷಯಗಳಲ್ಲಿ ಪಾಸಾಗಿದ್ದರು. ಈ ಬಾರಿ ಮಹಾರಾಷ್ಟ್ರ ರಾಜ್ಯ ಎಸ್ ಎಸ್ ಸಿ ಪರೀಕ್ಷೆಯಲ್ಲಿ ಪಾಸಿಂಗ್ ಮಾರ್ಕ್ಸ್ ಗಡಿ ದಾಟಿದ್ದಾರೆ. 38 ಅಂಕ ಗಳಿಸಿ ಪಾಸಾಗಿದ್ದಾರೆ.

ಪರೀಕ್ಷೆ ಬರೆಯಲು ಹೋದಾಗ ಇತರೆ ವಿದ್ಯಾರ್ಥಿಗಳು ಏನು ಅಂಕಲ್ ಈ ವಯಸ್ಸಿನಲ್ಲಿ ಪರೀಕ್ಷೆ ಬರೆಯುತ್ತೀರಾ? ಎಂದು ಪ್ರಶ್ನಿಸುತ್ತಿದ್ದರು. ಅನೇಕ ಸಾರಿ ನನ್ನನ್ನು ಪರೀಕ್ಷೆ ಇನ್ವಿಜಿಲೇಟರ್ ಎಂದು ತಪ್ಪು ತಿಳಿಯುತ್ತಿದ್ದರು. ಅದರೆ, ನನ್ನ ಉದ್ಯೋಗದಲ್ಲಿ ಪ್ರೊಮೊಷನ್ ಸಿಗಬೇಕಾದರೆ ನಾನು ಎಸ್ಎಸ್ ಸಿ ಪೂರೈಸಬೇಕಾಗಿತ್ತು.

ಬಾಂಡಪ್‌ನ ನವಜೀವನ್ ವಿದ್ಯಾಮಂದಿರದ ವಿದ್ಯಾರ್ಥಿಯಾಗಿರುವ ಚೌಗಲೆ ಅವರು ಮೂರು ದಶಕಗಳಲ್ಲಿ 28 ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದಾರೆ. ಪರೀಕ್ಷಾ ಶುಲ್ಕಕ್ಕಾಗಿ ಸುಮಾರು 12 ಸಾವಿರ ರೂ. ವ್ಯಯಿಸಿದ್ದಾರಂತೆ. ಮೊದ ಮೊದಲಿಗೆ 150 ರೂ.ಇದ್ದ ಪರೀಕ್ಷಾ ಶುಲ್ಕ ಈಗ 550 ರೂ. ಆಗಿದೆ . ಹಲವಾರು ಬಾರಿ ಪಠ್ಯಸೂಚಿ ಬದಲಾಗಿದ್ದು ಸ್ವಲ್ಪ ಕಷ್ಟವಾಯಿತು ಎಂದು ಹೇಳಿದ್ದಾರೆ.

ಸುಮಾರು 25 ವರ್ಷದ ವೃತ್ತಿ ಬದುಕಿನಲ್ಲಿ ಜವಾನನಾಗಿ ಕಾರ್ಯನಿರ್ವಹಿಸಿರುವ ಅವಿನಾಶ್ ಅವರು ಈಗ ಎಸ್‌ಎಸ್‌ಸಿ ಪಾಸಾಗಿರುವುದರಿಂದ ಕ್ಲರ್ಕ್ ಆಗಿ ಬಡ್ತಿ ಹೊಂದಲಿದ್ದಾರೆ. ಕ್ಲರ್ಕ್ ಆಗಿ ನಿವೃತ್ತರಾಗುವುದಕ್ಕೆ ಅವಿನಾಶ್ ಸಂತಸ ವ್ಯಕ್ತಪಡಿಸಿದ್ದಾರೆ.


ಎಸ್‌ಎಸ್‌ಎಲ್‌ಸಿ ಪಾಸಾಗಿರುವ ಚೌಗಲೆ ತಮ್ಮ ಸ್ಕೂಲಿನ ಪ್ರಿನ್ಸಿಪಾಲ್ ಅವರ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ಅಂದ ಹಾಗೆ ಚೌಗಲೆ ಪತ್ನಿ 9ನೇ ತರಗತಿವರೆಗೆ ಓದಿದ್ದಾರೆ. 7ನೇ ವೇತನ ಆಯೋಗ ಅನುಷ್ಠಾನವಾಗಲಿ ಎಂದು ಕಾದಿದ್ದಾರೆ.

English summary
After 28 failed attempts, 50-year-old Avinash Chaugule, peon at Maharashtra Chief Minister Devendra Fadnavis's office, cleared the SSC board examination.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X