ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುದ್ದೋಡು ಪ್ರಕರಣ: ಸಲ್ಮಾನ್ ಖಾನ್ ಗೆ ಸಕತ್ ರಿಲೀಫ್

By Mahesh
|
Google Oneindia Kannada News

ಮುಂಬೈ, ಡಿ. 09: ಹಿಂದಿ ಚಿತ್ರರಂಗದ ವಿವಾದಿತ ನಟ ಸಲ್ಮಾನ್ ಖಾನ್ ಅವರು ಬೆಳಗ್ಗೆ ಯಾರ ಮುಖ ನೋಡಿದರೋ ಗೊತ್ತಿಲ್ಲ. ಬಾಂಬೆ ಹೈಕೋರ್ಟ್ ನಲ್ಲಿ ಬುಧವಾರ ಸಲ್ಮಾನ್ ಗೆ ಹಿತವಾದ ಸುದ್ದಿ ಸಿಕ್ಕಿದೆ. 2002ರ ಹಿಟ್ ಅಂಡ್ ರನ್ ಕೇಸಿನಲ್ಲಿ ಪ್ರಮುಖ ಸಾಕ್ಷಿಯಾಗಿದ್ದ ರವೀಂದ್ರ ಪಾಟೀಲ್ ಅವರ ಹೇಳಿಕೆ ಬಗ್ಗೆ ಸಂಪೂರ್ಣವಾಗಿ ನಂಬಲರ್ಹವಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಮಾಜಿ ಬಾಡಿಗಾರ್ಡ್ ಆಗಿದ್ದ ರವೀಂದ್ರ ಪಾಟೀಲ್ ಅವರ ಸಾಕ್ಷಿಯಿಂದ ಸಲ್ಮಾನ್ ಅವರ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿತ್ತು. ಅದರೆ, ಪಾಟೀಲ್ ಹೇಳಿಕೆ ಬಗ್ಗೆ ಜಸ್ಟೀಸ್ ಎಆರ್ ಜೋಶಿ ಅವರು ಹೆಚ್ಚಿನ ಮಹತ್ವ ನೀಡಿಲ್ಲ. ಮಂಗಳವಾರದಿಂದ ಆರಂಭವಾದ ಆದೇಶದ ಉಕ್ತಲೇಖನ ಇಂದು ಕೂಡಾ ಮುಂದುವರೆಯಿತು. [ಸಲ್ಮಾನ್ ಪ್ರಕರಣದ timeline]

ಮೇ 6, 2015ರಂದು ಮುಂಬೈ ಸೆಷನ್ಸ್ ಕೋರ್ಟ್ ನಿಂದ ಸಲ್ಮಾನ್ ಖಾನ್ ಗೆ ಐದು ವರ್ಷ ಶಿಕ್ಷೆ ಪ್ರಕಟವಾಗಿದೆ. ಇದನ್ನು ಪ್ರಶ್ನಿಸಿ ಸಲ್ಮಾನ್ ಖಾನ್ ಅವರು ಮೇಲ್ಮನವಿ ಸಲ್ಲಿಸಿದ್ದು, ಇದರ ಅಂತಿಮ ತೀರ್ಪು ಹೊರ ಬೀಳಬೇಕಿದೆ. ಬಹುಶಃ ಗುರುವಾರ ಸಂಜೆ ವೇಳೆಗೆ ನ್ಯಾ. ಜೋಶಿ ಅವರು ತೀರ್ಪು ಪ್ರಕಟಿಸಬಹುದು. [ಗುದ್ದೋಡು ಕೇಸ್ ತೀರ್ಪು: ಸಲ್ಮಾನ್ ದೋಷಿ]

ಸಲ್ಮಾನ್ ಅವರು ಕುಡಿದು ವಾಹನ ಚಲಾಯಿಸಿದ್ರಾ?

ಸಲ್ಮಾನ್ ಅವರು ಕುಡಿದು ವಾಹನ ಚಲಾಯಿಸಿದ್ರಾ?

ಮೊದಲ ಎಫ್ ಐಆರ್ ಗೆ ಪೂರಕವಾಗಿ ಅಕ್ಟೋಬರ್ 01, 2002ರಂದು ಸಲ್ಲಿಸಲಾಗಿರುವ ರಕ್ತಪರೀಕ್ಷೆ ವರದಿ ಪ್ರಕಾರ ಸಲ್ಮಾನ್ ಅವರ ರಕ್ತದಲ್ಲಿ ಆಲ್ಕೋಹಾಲ್ ಅಂಶ ಅಗತ್ಯಕ್ಕಿಂತ ಹೆಚ್ಚಿರುವುದು ಪತ್ತೆಯಾಗಿತ್ತು. ಘಟನೆ ದಿನ ವಾಹನ ಚಲಾಯಿಸಬೇಡಿ ಎಂದು ಸಲ್ಮಾನ್ ಗೆ ಹೇಳಿದ್ದೆ ಎಂದು ಪಾಟೀಲ್ ಹೇಳಿಕೆ ನೀಡಿದ್ದರು. 2007ರಲ್ಲಿ ಪಾಟೀಲ್ ಮೃತಪಟ್ಟರು.

ಎಫ್ ಐಆರ್ ನಲ್ಲಿ ಆದ ಲೋಪ

ಎಫ್ ಐಆರ್ ನಲ್ಲಿ ಆದ ಲೋಪ

ಸೆಪ್ಟೆಂಬರ್ 28, 2002ರಂದು ಘಟನೆ ನಡೆದ ಕೆಲ ಹೊತ್ತಿನಲ್ಲೇ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಎಫ್ ಐಆರ್ ಹಾಕಿದ್ದಾರೆ. ಆದರೆ, ಎಫ್ ಐಆರ್ ನಲ್ಲಿ ಎಲ್ಲೂ ಕೂಡಾ ಸಲ್ಮಾನ್ ಅವರೇ ಕಾರು ಚಲಾಯಿಸುತ್ತಿದ್ದರು ಎಂದು ಉಲ್ಲೇಖಿಸಿಲ್ಲ. ಪೊಲೀಸರಿಂದ ಆದ ಈ ಲೋಪ ದೋಷ ಈಗ ಸಲ್ಮಾನ್ ಪಾಲಿಗೆ ವರವಾಗಿ ಪರಿಣಮಿಸಿದೆ.

ಜಾಮೀನು ರದ್ದುಪಡಿಸಲು ಸುಪ್ರೀಂಕೋರ್ಟ್ ನಕಾರ

ಜಾಮೀನು ರದ್ದುಪಡಿಸಲು ಸುಪ್ರೀಂಕೋರ್ಟ್ ನಕಾರ

ಬಾಂಬೆ ಹೈಕೋರ್ಟ್ ಎರಡು ದಿನಗಳಲ್ಲೇ ಸಲ್ಮಾನ್ ಖಾನ್‌ಗೆ ಜಾಮೀನು ನೀಡಿದ್ದು, ಇದೇ ವಿಧಾನದಲ್ಲಿ ಇತರರಿಗೂ ಜಾಮೀನು ಪಡೆಯಲು ಸಾಧ್ಯವಾಗುವಂತೆ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಬೇಕು ಎಂದು ಪಾಟೀಲ್ ತಾಯಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ರದ್ದುಪಡಿಸಿತ್ತು.

ಸಲ್ಮಾನ್ ಕೇಸ್ ಫೈಲ್ 2012ರಲ್ಲೇ ಬೆಂಕಿಗೆ ಆಹುತಿ!

ಸಲ್ಮಾನ್ ಕೇಸ್ ಫೈಲ್ 2012ರಲ್ಲೇ ಬೆಂಕಿಗೆ ಆಹುತಿ!

2002ರ ಈ ರಸ್ತೆ ಅಪಘಾತಕ್ಕೆ ಸಂಬಂಧಿಸಿದ ಫೈಲ್ಸ್ ಎಲ್ಲಾ ಮುಂಬೈನಲ್ಲಿ 2012ರಲ್ಲಿ ನಡೆದ ಅಗ್ನಿ ದುರಂತದಲ್ಲಿ ನಾಶವಾಗಿದೆ ಎಂಬ ಸುದ್ದಿ ಬಂದಿತ್ತು.ಮನ್ಸೂರ್ ದರ್ವೇಶ್ ಎಂಬ ಹೆಸರಿನ ಆರ್ ಟಿಐ ಕಾರ್ಯಕರ್ತ ಈ ಬಗ್ಗೆ ವಿವರಣೆ ಕೋರಿ ಅರ್ಜಿ ಸಲ್ಲಿಸಿದಾಗ ವಿಷಯ ಬೆಳಕಿಗೆ ಬಂದಿದೆ.

ಸಾಕ್ಷಿಗಳ ಪಟ್ಟಿಯಿಂದ ಕಮಾಲ್ ಹೆಸರು ನಾಪತ್ತೆ?

ಸಾಕ್ಷಿಗಳ ಪಟ್ಟಿಯಿಂದ ಕಮಾಲ್ ಹೆಸರು ನಾಪತ್ತೆ?

ಸೆ.28, 2002ರಂದು ನಡೆದ ಘಟನೆ ಬಗ್ಗೆ ಕಮಲ್ ಖಾನ್ ಅವರು ಅಕ್ಟೋಬರ್ 2, 2002ರಂದು ಅವರು ಬಾಂದ್ರಾ ಪೊಲೀಸ್ ಠಾಣೆಗೆ ತೆರಳಿ ತಮ್ಮ ಹೇಳಿಕೆ ದಾಖಲಿಸಿದ್ದಾರೆ. ಆದರೆ, ಪ್ರಮುಖ ಸಾಕ್ಷಿಯಾದ ಕಮಾಲ್ ವಿಚಾರಣೆ ನಡೆಸಿಲ್ಲ. ಮೃತ ವ್ಯಕ್ತಿಯ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ನೀಡಿದ ಹೇಳಿಕೆಗಳು, ಹಾಗೂ 27 ಸಾಕ್ಷಿಗಳ ವ್ಯತಿರಿಕ್ತ ಹೇಳಿಕೆಗಳು ಕೇಸ್ ವಿಚಾರಣೆ ವಿಳಂಬ ಗೊಳಿಸಿತು.

English summary
In what could be termed as a massive breather for Salman Khan in the 2002 hit-and-run case, the Bombay High Court on Wednesday today doubted the evidence of Ravindra Patil, former police bodyguard of Bollywood star and witness in the case, observing that he was "wholly unreliable."
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X