ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ಯಾಂಕ್ ಗಳ ಬಾಗಿಲಿಗೆ ಬಂದಿದ್ದು 1,39,667 ಖೋಟಾ ನೋಟುಗಳು!

ಗೊತ್ತಿದ್ದೋ ಗೊತ್ತಿಲ್ಲದೆಯೋ ಒಟ್ಟಿನಲ್ಲಿ ನೋಟು ರದ್ದು ತೀರ್ಮಾನದ ನಂತರ ಬ್ಯಾಂಕ್ ಗಳಿಗೆ ಜಮೆ ಮಾಡಲು ತಂದಿರುವುದು 1,39,667 ಖೋಟಾ ನೋಟುಗಳನ್ನ. ಅವುಗಳಲ್ಲಿ 86,621 ಐನೂರು ರುಪಾಯಿ, 53,046 ಸಾವಿರ ರುಪಾಯಿ ನೋಟು ಪತ್ತೆಯಾಗಿವೆ.

By ವಿಕಾಸ್ ನಂಜಪ್ಪ
|
Google Oneindia Kannada News

ಮುಂಬೈ, ಡಿಸೆಂಬರ್ 3: ನವೆಂಬರ್ 10ರಿಂದ 27ರ ಮಧ್ಯೆ ಬ್ಯಾಂಕ್ ಗಳು ಅಧಿಕೃತವಾಗಿ ಪತ್ತೆ ಹಚ್ಚಿರುವ ಖೋಟಾ ನೋಟುಗಳ ಸಂಖ್ಯೆ 1,39,667. ಯಾವಾಗ 500, 1000ದ ನೋಟುಗಳನ್ನು ರದ್ದು ಮಾಡಿ ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದರೋ ಅದಾದ ನಂತರ ತಮ್ಮ ನೋಟುಗಳನ್ನು ಬದಲಿಸಿಕೊಳ್ಳುವ ಸಲುವಾಗಿ ಆರಂಭವಾಯಿತು ನೋಡಿ, ಬ್ಯಾಂಕ್ ಗೆ ಜನ ಓಡೋಡಿ ಬರುವುದಕ್ಕೆ.

ಅದರೆ, ಏನು ಮಾಡ್ತೀರಾ ಆ ರೀತಿ ನೋಟುಗಳನ್ನು ತಂದವರ ಪೈಕಿ ಹಲವರ ಬಳಿ ಗೊತ್ತಿಲ್ಲದೆಯೋ ಗೊತ್ತಿದ್ದೋ ಖೋಟಾ ನೋಟುಗಳಿದ್ದವು. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನೀಡಿದ ಅಂಕಿಗಳ ಪ್ರಕಾರ 1,39,667 ಖೋಟಾ ನೋಟುಗಳು ಪತ್ತೆಯಾಗಿವೆ. ಆ ಪೈಕಿ 86,621 ಐನೂರು ರುಪಾಯಿ, 53,046 ಸಾವಿರ ರುಪಾಯಿ ನೋಟು ಪತ್ತೆಹಚ್ಚಲಾಗಿದೆ.[ಬೆಂಗಳೂರು, ಮಡಿಕೇರಿ, ತುಮಕೂರಿನಲ್ಲಿ 74.50 ಲಕ್ಷ ವಶಕ್ಕೆ]

Fake currency

500, 1000ದ ನೋಟು ರದ್ದು ತೀರ್ಮಾನ ತೆಗೆದುಕೊಂಡಿದ್ದು ಕಪ್ಪು ಹಣದ ವಿರುದ್ಧ ಮಾತ್ರವಾಗಿರಲಿಲ್ಲ, ನಕಲಿ ನೋಟುಗಳ ಹಾವಳಿಯನ್ನು ಕೂಡ ತಪ್ಪಿಸುವುದಾಗಿತ್ತು. ನವೆಂಬರ್ 8ರಂದು ಆ ನೋಟುಗಳ ಅಧಿಕೃತ ಮಾನ್ಯತೆ ರದ್ದುಗೊಳಿಸಿದ ನಂತರ ನಕಲಿ ನೋಟು ಜಾಲದವರಿಗೆ ದೊಡ್ಡ ಮಟ್ಟದ ಹೊಡೆತ ಬಿದ್ದಿದೆ.

English summary
Banks have detected 1,39,667 pieces of fake currency between November 10 and 27. Two days after the decision to demonetise the Rs 500 and 1,000 notes were made, people made a beeline to the banks to exchange their old currency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X