ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬ್ಯಾಂಕ್‌ ಖಾತೆಗೆ ಕನ್ನ, ಒಂದೂವರೆ ಕೋಟಿ ಲೂಟಿ

|
Google Oneindia Kannada News

ಮಂಗಳೂರು, ನ.26 : ಕೆನಡಾದಲ್ಲಿರುವ ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಗೆ ಕನ್ನ ಹಾಕಿರುವ ಹ್ಯಾಕರ್‌ಗಳು ಬರೋಬ್ಬರಿ 1 ಕೋಟಿ 13 ಲಕ್ಷ ರೂಪಾಯಿಗಳನ್ನು ದೋಚಿದ್ದಾರೆ. ಮಣಿಪಾಲದ ಸಿಂಡಿಕೇಟ್ ಬ್ಯಾಂಕ್‌ನವರು ಈ ಕುರಿತು ಪೊಲೀಸರಿಗೆ ದೂರು ನೀಡಿದ್ದು, ತನಿಖೆ ಆರಂಭವಾಗಿದೆ.

ಲೂವಿಸ್ ಡಿಸೋಜಾ ಎಂಬುವವರು ಕೆನಡಾದಲ್ಲಿ ನೆಲೆಸಿದ್ದಾರೆ. ಅವರು ಮಣಿಪಾಲ್‌ನ ಸಿಂಡಿಕೇಟ್ ಬ್ಯಾಂಕ್‍ನಲ್ಲಿ ಖಾತೆ ಹೊಂದಿದ್ದಾರೆ. ಹ್ಯಾಕರ್‌ಗಳು ಇ ಮೇಲ್ ಮೂಲಕ ಡಿಸೋಜಾ ಅವರ ಬ್ಯಾಂಕ್ ಖಾತೆಯ ವಿವರಗಳನ್ನು ಕದ್ದು, ಹಣವನ್ನು ವಿದೇಶದ ಬ್ಯಾಂಕ್‌ಗಳಿಗೆ ವರ್ಗಾವಣೆ ಮಾಡುವಂತೆ ಕೋರಿದ್ದರು.[ಟೆಕ್ಕಿ ಖಾತೆಗೆ ಕನ್ನ ಹಾಕಿದ ಹ್ಯಾಕರ್]

Hacking

ಬ್ಯಾಂಕಿನವರು ಲೂವಿಸ್ ಡಿಸೋಜಾ ಅವರೇ ಮನವಿ ಸಲ್ಲಿಸಿದ್ದಾರೆ ಎಂದು ತಿಳಿದು ಎರಡು ಬಾರಿ ಹಣವನ್ನು ವಿದೇಶದ ಬ್ಯಾಂಕ್‌ಗಳಿಗೆ ವರ್ಗಾವಣೆ ಮಾಡಿದ್ದಾರೆ. ನ.13ರಂದು ಪುನಃ ಹಣ ವರ್ಗಾವಣೆ ಮನವಿ ಬಂದಾಗ ಅನುಮಾನಗೊಂಡ ಬ್ಯಾಂಕಿನ ಸಿಬ್ಬಂದಿ ಡಿಸೋಜಾ ಅವರನ್ನು ವಿಚಾರಿಸಿದಾಗ, ವರ್ಗಾವಣೆಗೆ ಮನವಿ ಸಲ್ಲಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. [ಮಂಗಳೂರಿಗೆ ಸೈಬರ್ ಕ್ರೈಂ ಠಾಣೆ]

ಘಟನೆಯ ವಿವರ : ಲೂವಿಸ್ ಡಿಸೋಜಾ ಅವರು ಕೆನಡಾದಲ್ಲಿದ್ದು ಮಣಿಪಾಲದ ಸಿಂಡಿಕೇಟ್ ಬ್ಯಾಂಕ್‍ನಲ್ಲಿ ಎಫ್‌ಎನ್‌ಸಿಆರ್ (Foreign Currency Non Resident account) ಖಾತೆ ಹೊಂದಿದ್ದರು. ಈ ಖಾತೆಗೆ ಕಟಪಾಡಿ ಕೆನರಾ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್‍ನಿಂದ 2,23,830 ಡಾಲರ್ ಹಣ ವರ್ಗಾವಣೆಯಾಗಿತ್ತು.

ಹ್ಯಾಕರ್‌ಗಳು ಈ ಮೇಲ್ ಮೂಲಕ ಲೂವಿಸ್ ಡಿಸೋಜಾ ಅವರ ಬ್ಯಾಂಕ್ ಮಾಹಿತಿಯನ್ನು ಕದ್ದು, ತಮ್ಮ ಖಾತೆಯಲ್ಲಿರುವ ಹಣವನ್ನು ವಿದೇಶದ ಬ್ಯಾಂಕ್‌ಗೆ ವರ್ಗಾವಣೆ ಮಾಡುವಂತೆ ಮಣಿಪಾಲ್ ಸಿಂಡಿಕೇಟ್ ಬ್ಯಾಂಕ್‍ಗೆ ಈ ಮೇಲ್ ಕಳಿಸಿದ್ದರು.

ಮನವಿಯ ಮೇರೆಗೆ ಬ್ಯಾಂಕಿನ ಸಿಬ್ಬಂದಿ ಜನವರಿ 15 ರಂದು 1,15,000 ಡಾಲರ್ ಹಣವನ್ನು ದುಬೈ ನ್ಯಾಷನಲ್ ಬ್ಯಾಂಕ್ ಹಾಗೂ ಅಕ್ಟೋಬರ್ 27ರಂದು ಅಬುದಾಬಿ ಇಸ್ಲಾಮಿಕ್ ಬ್ಯಾಂಕ್‍ಗೆ 70 ಸಾವಿರ ಡಾಲರ್ ಹಣವನ್ನು ವರ್ಗಾವಣೆ ಮಾಡಿದ್ದರು.

ನವೆಂಬರ್‌ನಲ್ಲಿ ಲೂವಿಸ್ ಡಿಸೋಜಾ ಅವರ ಖಾತೆಗೆ ಕುರ್ಕಾಲ್ ಕಾರ್ಪೋರೇಷನ್ ಬ್ಯಾಂಕ್‍ನಿಂದ ಹಣ ಬಂದಿತ್ತು. ನ.13ರಂದು ಹ್ಯಾಕರ್‌ಗಳು ಪುನಃ ಬ್ಯಾಂಕ್‌ಗೆ ಈ ಮೇಲ್ ಮಾಡಿ, ಹಣವನ್ನು ಹಾಂಕಾಂಗ್‍ನಲ್ಲಿರುವ ಬ್ಯಾಂಕ್ ಆಫ್ ಚೈನಾಕ್ಕೆ ವರ್ಗಾಯಿಸುವಂತೆ ಕೋರಿದ್ದರು.

ಇದರಿಂದ ಅನುಮಾನಗೊಂಡ ಬ್ಯಾಂಕ್ ಸಿಬ್ಬಂದಿ ಡಿಸೋಜಾ ಅವರನ್ನು ಸಂಪರ್ಕಿಸಿ ಹಣ ವರ್ಗಾವಣೆ ಮಾಡಲು ಮನವಿ ಮಾಡಿರುವ ಬಗ್ಗೆ ಖಚಿತ ಮಾಹಿತಿ ಕೇಳಿದ್ದಾರೆ. ಆಗ ಡಿಸೋಜಾ ಅವರು ಯಾವುದೇ ಮನವಿ ಸಲ್ಲಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇದರಿಂದ ಡಿಸೋಜಾ ಅವರ ವಿವರಗಳನ್ನು ಹ್ಯಾಕ್ ಮಾಡಲಾಗಿದೆ ಎಂದು ತಿಳಿದ ಸಿಂಡಿಕೇಟ್ ಬ್ಯಾಂಕ್‍ ಮಹಾ ಪ್ರಬಂಧಕರು ಮಣಿಪಾಲ್ ಪೊಲೀಸರಿಗೆ ದೂರು ನೀಡಿದ್ದಾರೆ, ತನಿಖೆ ಮುಂದುವರೆದಿದೆ.

English summary
Manipal Syndicate Bank officials have lodged a complaint to police that an NRI’s account was subjected to cyber fraud and 1.13 core stolen. The account held by Louis D’Souza of Canada was hacked by miscreants who transferred 1.13 to different accounts through a series of internet transactions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X