ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೇಶಕ್ಕಾಗಿ ಹೋರಾಡಿ ಸತ್ತರೆ ವೀರ ಸ್ವರ್ಗ: ಫಯಾಜ್‌ ಖಾನ್

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು,ಜನವರಿ,06 : ಬಂದೂಕು ಹಿಡಿದುಕೊಂಡು, ಸುಸೈಡ್ ಬಾಂಬರ್ ಆಗಿ ಸತ್ತರೆ ಸ್ವರ್ಗ ಸಿಗುವುದಿಲ್ಲ. ದೇಶಕ್ಕಾಗಿ ಹೋರಾಡಿ ಹುತಾತ್ಮನಾದರೆ ಮಾತ್ರ ವೀರ ಸ್ವರ್ಗ ಎಂದು ಮುಸ್ಲಿಂ ರಾಷ್ಟ್ರೀಯ ಮಂಚ್ ನ ಕಾರ್ಯನಿರ್ವಾಹಕ ಸಮಿತಿಯ ಸದಸ್ಯ ಮೊಹಮ್ಮದ್ ಫಯಾಜ್‌ ಖಾನ್ ಹೇಳಿದರು.

ಯುವ ಬ್ರಿಗೇಡ್ ಮಂಗಳೂರಲ್ಲಿ ಆಯೋಜಿಸಿದ್ದ 'ವಸುದೈವ ಕುಟುಂಬಕಮ್-ಕೂಡಿ ಬಾಳೋಣ' ಕಾರ್ಯಕ್ರಮದಲ್ಲಿ ಮೊಹಮ್ಮದ್ ಫಯಾಜ್‌ ಖಾನ್ ಪ್ರಮುಖ ಭಾಷಣಕಾರರಾಗಿ ಮಾತನಾಡಿದರು. ಜನನಿ, ಜನ್ಮಭೂಮಿ ಸ್ವರ್ಗಕ್ಕಿಂತಲೂ ಮಿಗಿಲು. ಹೃದಯ ವೈಶಾಲ್ಯತೆ ಇದ್ದರೆ ಈ ನೆಲದಲ್ಲಿಯೇ ನಮಗೆ ಸ್ವರ್ಗವೂ ದೊರೆಯುತ್ತದೆ. ಭಾರತ ಎಲ್ಲಾ ಭಾಷೆ, ಧರ್ಮ, ಸಂಸ್ಕೃತಿ ಹಾಗೂ ಎಲ್ಲಾ ಜನಾಂಗದ ಜನರನ್ನು ಸ್ವೀಕರಿಸಿ ಎಲ್ಲರನ್ನೂ ಒಟ್ಟುಗೂಡಿಸಿದ ಹೆಗ್ಗಳಿಕೆ ಹೊಂದಿದ ದೇಶ ಎಂದು ಅಭಿಮಾನ ವ್ಯಕ್ತಪಡಿಸಿದರು.[ಆತ್ಮಶುದ್ಧಿ, ತ್ಯಾಗದ ದ್ಯೋತಕ ಜೈನರ ಪರ್ಯೂಷಣ ಪರ್ವ]

Mangaluru

ಭಾರತ ಪ್ರತಿಯೊಬ್ಬ ಪ್ರಜೆಗೂ ತಮ್ಮ ತಮ್ಮ ದೇವರ ಆರಾಧನೆಗೆ ಮುಕ್ತ ಅವಕಾಶ ನೀಡಿದೆ. ಈ ಎಲ್ಲಾ ಅಭಿವ್ಯಕ್ತ ಸ್ವಾತಂತ್ರ್ಯದ ನಡುವೆಯೂ ಯಾವ ವ್ಯಕ್ತಿಗೆ ಈ ದೇಶದಲ್ಲಿ ಅತೃಪ್ತಿ, ಅಸಹಿಷ್ಣುತೆ ಕಾಣುತ್ತದೆಯೋ ಅದು ಆ ವ್ಯಕ್ತಿಯ ದೌರ್ಭಾಗ್ಯವೇ ಹೊರತು ಇದಕ್ಕೆ ದೇಶ ಕಾರಣವಾಗದು ಎಂದು ಸ್ಪಷ್ಟನೆ ನೀಡಿದರು.[ಕ್ರಿಶ್ಚಿಯನ್ ರ ಆರಾಧ್ಯ ದೈವ ಏಸುವನ್ನು ಶಿಲುಬೆಗೆ ಏರಿಸಿರಲಿಲ್ಲವಂತೆ!]

ಹೈದ್ರೋಸ್ ಹಾಜಿ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್‌ನ ಮುಖ್ಯಸ್ಥ ಹಾಜಿ ಬಿ. ಅಬ್ದುಲ್ ರಝಾಕ್, ಪ್ರಗತಿಪರ ಕೃಷಿಕ ಅಹ್ಮದ್ ಮುಸ್ತಫಾ ಗೋಳ್ತಮಜಲು, ಯುವ ಬ್ರಿಗೇಡ್ ನ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ, ರಾಜ್ಯ ಸಂಚಾಲಕ ನಿತ್ಯಾನಂದ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

English summary
Yuva brigade organized Vasudaiva Kutumbakam programme in Mangaluru on 5th, Tuesday. This progarmme Honorable Chief guest by Mohammed Faiza Khan, Muslim Rashtriya Manch member, chakravarty sulibele etc.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X