ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಶ್ಲೀಲ ಫೋಟೋ ಕಳಿಸಿದವನಿಗೆ 2 ವರ್ಷದ ಜೈಲು ಶಿಕ್ಷೆ

By ಐಸಾಕ್ ರಿಚರ್ಡ್, ಮಂಗಳೂರು
|
Google Oneindia Kannada News

ಮಂಗಳೂರು, ಮೇ 22 : ಇಮೇಲ್ ಮೇಲ್‌ ಮೂಲಕ ಯುವತಿಯ ಅಶ್ಲೀಲ ಫೋಟೋ ಕಳಿಸಿದ್ದ ಯುವಕನಿಗೆ 2 ವರ್ಷದ ಜೈಲು ಶಿಕ್ಷೆ ಮತ್ತು 1 ಲಕ್ಷ ರೂ. ದಂಡ ವಿಧಿಸಿ ಮಂಗಳೂರಿನ ಜೆಎಂಎಫ್‌ಸಿ ನ್ಯಾಯಾಲಯ ಆದೇಶ ಹೊರಡಿಸಿದೆ. ಸೈಬರ್ ಕ್ರೈಂ ಅಪರಾಧಕ್ಕೆ ಇದೇ ಮೊದಲ ಬಾರಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಿಕ್ಷೆ ವಿಧಿಸಲಾಗಿದೆ.

ಕಾವೂರು ಪೊಲೀಸ್ ಠಾಣೆಯಲ್ಲಿ 2010ರಲ್ಲಿ ದಾಖಲಾದ ಪ್ರಕರಣದ ಆರೋಪ ಸಾಬೀತಾಗಿದ್ದು, ಆರೋಪಿ ಪಶ್ಚಿಮ ಬಂಗಾಳ ಮೂಲದ ದೇಬ್‌ರಾಜ್ ಸೇನ್ ಗುಪ್ತಾ (26)ಗೆ 3ನೇ ಜೆಎಂಎಫ್‌ಸಿ ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ ಎಂದು ಸಹಾಯಕ ಸರ್ಕಾರಿ ಅಭಿಯೋಜಕ ಮೋಹನ್ ಕುಮಾರ್ ಹೇಳಿದ್ದಾರೆ.

cyber crime

ಮೂರನೇ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ಉಂಡಿ ಮಂಜುಳಾ ಶಿವಪ್ಪ ಅವರು ಈ ತೀರ್ಪು ನೀಡಿದ್ದು, ದಂಡ ಮೊತ್ತವನ್ನ ಯುವತಿಗೆ ನೀಡುವಂತೆ ಆದೇಶದಲ್ಲಿ ತಿಳಿಸಿದ್ದಾರೆ. [ಅಶ್ಲೀಲ ವಿಡಿಯೋ ಹಾಕಿದವ ಸಿಬಿಐ ಬಲೆಗೆ]

ಪ್ರಕರಣದ ವಿವರ : ನಗರದ ಕೊಂಚಾಡಿ ಬಳಿಯ ಅಪಾರ್ಟ್‌ಮೆಂಟ್‌ನಲ್ಲಿ ಏರ್‌ ಇಂಡಿಯಾದಲ್ಲಿ ಕೆಲಸ ಮಾಡುತ್ತಿದ್ದ ಯುವತಿ ವಾಸವಾಗಿದ್ದಳು. ತನಗೆ ಪರಿಚಯವಿದ್ದ ಯುವಕನೊಂದಿಗೆ ಆಕೆ ಪಶ್ಚಿಮ ಬಂಗಾಳಕ್ಕೆ ತೆರಳಿದ್ದಳು. ಆಗ ದೇಬ್‌ರಾಜ್ ಸೇನ್ ಗುಪ್ತಾ ಪರಿಚಯವಾಗಿತ್ತು. [ಮಂಗಳೂರಿಗೆ ಬಂತು ಸೈಬರ್ ಕ್ರೈಂ ಪೊಲೀಸ್ ಠಾಣೆ]

ಯುವತಿಯನ್ನು ಏಕಮುಖವಾಗಿ ಪ್ರೀತಿಸುತ್ತಿದ್ದ ಸೇನ್ ಆಕೆಯ ಮೇಲಿನ ದ್ವೇಷದಿಂದ ಯುವತಿಯ ಜತೆಗಿದ್ದ ಯುವಕನ ಇಮೇಲ್ ಹ್ಯಾಕ್ ಮಾಡಿದ್ದ. ಅಲ್ಲಿ ದೊರೆತ ಯುವತಿಯ ಫೋಟೋಗಳನ್ನು ಡೌನ್ ಲೋಡ್ ಮಾಡಿಕೊಂಡು, ಯುವತಿಯ ಮುಖವನ್ನು ಅಶ್ಲೀಲ ಚಿತ್ರಗಳಿಗೆ ಅಂಟಿಸಿ ಯುವಕನ ಈಮೇಲ್ ಮೂಲಕ ಹಲವರಿಗೆ ಕಳುಹಿಸಿದ್ದ.

2010ರ ಫೆ.21ರಂದು ಕಾವೂರು ಪೊಲೀಸ್ ಠಾಣೆಯಲ್ಲಿ ಯುವತಿ ಈ ಕುರಿತು ದೂರು ನೀಡಿದ್ದಳು. ಇಮೇಲ್ ಬಂದಿರುವ ಮೂಲ ಹುಡುಕಿದ ಪೊಲೀಸರಿಗೆ ಪಶ್ಚಿಮ ಬಂಗಾಳದ ವಿಳಾಸ ಸಿಕ್ಕಿತ್ತು. ಅಲ್ಲಿಗೆ ತೆರಳಿದ ಪೊಲೀಸರು ಸೇನ್‌ನನ್ನು ಬಂಧಿಸಿ ಕರೆತಂದಿದ್ದರು.

English summary
26-year-old Debraj Sen Gupta convicted and sentenced 2 year jail in cyber crime case. Mangaluru Judicial Magistrate First Class (JMFC) third court delivered the judgment on Wednesday. Sen Gupta from Bhardhaman district, West Bengal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X