ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು : ಕೋರ್ಟ್ ಆವರಣದಲ್ಲಿ ಯುವಕ ಆತ್ಮಹತ್ಯೆ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಫೆಬ್ರವರಿ 18 : ಮಂಗಳೂರು ನ್ಯಾಯಾಲಯದ ಆವರಣದಲ್ಲಿರುವ ಮರಕ್ಕೆ ನೇಣು ಹಾಕಿಕೊಂಡು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆತ್ಮಹತ್ಯೆ ಮಾಡಿಕೊಂಡವರನ್ನು ಥಾಮಸ್ ಬೈಜು (22) ಎಂದು ಗುರುತಿಸಲಾಗಿದೆ. ಮಂಗಳೂರು ನ್ಯಾಯಾಲಯದ ಆವರಣದಲ್ಲಿರುವ ಆಲದ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಗುರುವಾರ ಬೆಳಗ್ಗೆ ಮೃತದೇಹ ಪತ್ತೆಯಾಗಿದೆ. ['ಹನುಮಂತನ' ಸಾವಿಗೆ ಕಾರಣವಾಯಿತೇ ಭ್ರಷ್ಟಾಚಾರ?]

suicide

ಕೇರಳ ಮೂಲದ ಬೈಚು ಅವರು ಶ್ರೀನಿವಾಸ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಕೆಎ 19 ಎಂಸಿ 2208 ಕಾರಿನಲ್ಲಿ ನ್ಯಾಯಾಲಯದ ಆವರಣಕ್ಕೆ ಆಗಮಿಸಿದ ಥಾಮಸ್ ಬೈಜು ಅವರು, ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. [ಮೈಸೂರು ಶಿಕ್ಷಕಿ ಸಾವು - ಆತ್ಮಹತ್ಯೆಯೋ, ಕೊಲೆಯೋ?]

ಈ ಕಾರು ಸಹ ಥಾಮಸ್ ಅವರದ್ದಲ್ಲ, ಬಾಡಿಗೆಗೆ ತೆಗೆದುಕೊಂಡು ಬಂದಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಬುಧವಾರ ರಾತ್ರಿ ಹುಟ್ಟು ಹಬ್ಬದ ಪಾರ್ಟಿಯೊಂದಕ್ಕೆ ಹೋಗಿದ್ದ ಧಾಮಸ್ ಅಲ್ಲಿಂದ ತಡರಾತ್ರಿ 2 ಗಂಟೆ ಸುಮಾರಿಗೆ ಹೊರಟಿದ್ದರು. ನಂತರ ಕೋರ್ಟ್ ಆವರಣಕ್ಕೆ ಬಂದು ಆತ್ಮಹತ್ಯೆ ಮಾಡಿಕೊಂಡರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. [ವೇಶ್ಯಾವಾಟಿಕೆ : ಅರಬ್ಬರ ನಾಡಿನಲ್ಲಿ ಯಶಸ್ವೀ "ಆಪರೇಷನ್ ನೈಜೀರಿಯಾ"]

ಥಾಮಸ್ ಅವರನ್ನು ತಂದೆ-ತಾಯಿಗಳು ದುಬೈಗೆ ಕಳುಹಿಸುವ ಯೋಚನೆ ಮಾಡಿದ್ದರು. ಇದರಿಂದ ಬೇಜಾರು ಮಾಡಿಕೊಂಡಿದ್ದ ಅವರು ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಆಗಮಿಸಿರುವ ಬಂದರು ಠಾಣೆ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

English summary
A youth was found hanging from a tree at court road in Mangaluru city on Thursday, February 18, 2016. The deceased has been identified as Baiju Thomas (22). A white Ritz car bearing registration number KA-19-MC-2208 was found at the spot. It is suspected that he might have committed suicide.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X